ಶ್ರೀಮAಗಲ, ಮಾ. ೨೪: ಟಿ. ಶೆಟ್ಟಿಗೇರಿ ಗ್ರಾ.ಪಂ.ವ್ಯಾಪ್ತಿಯ ಹರಿಹರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಮನ್ನೆರ ಕ್ರಿಕೆಟ್ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ೩ನೇ ದಿನವಾದ ಗುರುವಾರದ ಪಂದ್ಯಗಳ ಫಲಿತಾಂಶದ ವಿವರ ಇಂತಿದೆ:
ತೀತಿರ (ಹುದಿಕೇರಿ) (೪೩/೨) ತಂಡ ನೂರೇರ ತಂಡ (೩೨/೬)ದ ವಿರುದ್ಧ ೧೧ ರನ್ ಅಂತರದಲ್ಲಿ ಗೆಲುವು ಸಾಧಿಸಿತು. ಫೋರಂಗಡ (೪೯/೩) ವಿರುದ್ಧ ತೀತಮಾಡ (೫೦/೧) ರನ್ ಗಳಿಸಿ ಜಯ ಸಾಧಿಸಿತು.
ಬೊಜ್ಜಂಗಡ (೩೮/೬) ವಿರುದ್ಧ ಕರಿನೆರವಂಡ (೫೯/೧) ತಂಡ ಜಯಗಳಿಸಿತು. ಮಾಣೀರ (೪೫/೨) ವಿರುದ್ಧ ಚಿರಿಯಪಂಡ (೪೮/೦) ತಂಡ ಜಯಗಳಿಸಿತು. ತೀತಿರ (ಹುದಿಕೇರಿ) (೪೮/೪) ತಂಡದ ವಿರುದ್ಧ ಅಳಮೇಂಗಡ (೪೯/೧) ರನ್ ಗಳಿಸಿ ಜಯಗಳಿಸಿತು.
ಕರಿನೆರವಂಡ (೭೮/೩) ತಂಡದ ವಿರುದ್ಧ ಕೊಟ್ಟಂಗಡ ತಂಡ (೫೭/೪) ಗಳಿಸಿ ಸೋಲು ಅನುಭವಿಸಿತು. ಕಳಕಂಡ (೫೭/೩) ತಂಡದ ವಿರುದ್ಧ ಚಿರಿಯಪಂಡ (೩೭/೬) ತಂಡ ರನ್ ಗಳಿಸಿ ಸೋಲು ಕಂಡಿತು.
 
						