*ಗೋಣಿಕೊಪ್ಪ, ಮಾ. ೨೫: ೪೭ಕ್ಕೂ ಹೆಚ್ಚು ದಾನಿಗಳು ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇರಿಸಿದ ದತ್ತಿನಿಧಿಯನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
೨೦೨೦-೨೧ನೇ ಅವಧಿಯ ೧೯ ಸಾವಿರ ೬೩ ರೂಪಾಯಿಗಳ ದತ್ತಿನಿಧಿಯನ್ನು ೧ನೇ ತರಗತಿಯಿಂದ ೭ನೇ ತರಗತಿವರೆಗೆ ವಿವಿಧ ಕಲಿಕಾ ಪ್ರತಿಭೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ನೀಡಲಾಯಿತು.
ಎಸ್.ಟಿ.ಎಲ್.ಸಿ. ಅಧ್ಯಕ್ಷ ಬಿ.ಎಸ್. ರಘುನಾಥ್ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ರಾಮಕೃಷ್ಣ ಕೆ.ವಿ., ಮಂಜುಳಾ ಮಣಿಕಂಠ, ಮುಖ್ಯ ಶಿಕ್ಷಕ ವಿಜಯ್, ಎಸ್.ಡಿ.ಎಂ.ಸಿ. ಸದಸ್ಯ ಜಯ ಹಾಗೂ ಶಿಕ್ಷಕರು ಭಾಗವಹಿಸಿದರು.