ಮಡಿಕೇರಿ, ಮಾ. ೨೫: ಅಂರ‍್ರಾಷ್ಟಿçÃಯ ಜನಾಂಗೀಯ ತಾರತಮ್ಯ ನಿರ್ಮೂಲನೆ ದಿನದ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ದೇವಾಟ್‌ಪರಂಬು ಕೊಡವ ಹತ್ಯಾಕಾಂಡ ಸ್ಮಾರಕದಲ್ಲಿ ತಾ. ೨೨ರ ಬೆಳಿಗ್ಗೆ ಪುಷ್ಪನಮನ ಸಲ್ಲಿಸಲಾಯಿತು. ಟಿಪ್ಪು ಸುಲ್ತಾನ್‌ನ ಮೋಸದ ದಾಳಿಗೆ ಸಿಲುಕಿ ಹುತಾತ್ಮರಾದ ಹಿರಿಯರಿಗೆ ಸಿ.ಎನ್.ಸಿ ಅಧ್ಯಕ್ಷ ನಂದಿನೆರವAಡ ನಾಚಪ್ಪ ಅವರ ನೇತೃತ್ವದಲ್ಲಿ ಪ್ರಾರ್ಥನೆ ನೆರವೇರಿತು.

ದೇವಾಟ್‌ಪರಂಬು ನರಮೇಧ ನಡೆದ ಸ್ಥಳದಲ್ಲಿ ಅಂರ‍್ರಾಷ್ಟಿçÃಯ ಕೊಡವ ಹತ್ಯಾಕಾಂಡ ಸ್ಮಾರಕ ನಿರ್ಮಿಸುವಂತಾಗಬೇಕೆAದು ಆಶಿಸಿರುವ ಸಿ.ಎನ್.ಸಿ, ಕೊಡವ ಜನಾಂಗಕ್ಕೆ ಬುಡಕಟ್ಟು ಸ್ಥಾನಮಾನ, ಭೂ-ರಾಜಕೀಯ ಸ್ವಾಯತ್ತತೆ, ಕೋವಿ ಹಕ್ಕು ವಿನಾಯಿತಿ, ಕೊಡವ ಭಾಷೆಯನ್ನು ಸಂವಿಧಾನದ ೮ನೇ ಶೆಡ್ಯೂಲ್‌ಗೆ ಸೇರಿಸುವುವಂತೆ ಅಗಲಿದ ಹಿರಿಯರಲ್ಲಿ ಪ್ರಾರ್ಥಿಸಲಾಯಿತು.

ಈ ಸಂದರ್ಭ ಸಂಘಟನೆಯ ಪಟ್ಟಮಾಡ ಕುಶ, ಮಂಡಪAಡ ಮನೋಜ್, ಅರೆಯಡ ಗಿರೀಶ್, ಚೇಯಬೀರ ಸತೀಶ್ ಸೋಮಣ್ಣ ಹಾಜರಿದ್ದರು.