*ಗೋಣಿಕೊಪ್ಪ, ಮಾ. ೨೫: ಪೊನ್ನಂಪೇಟೆಯಲ್ಲಿ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಪೊನ್ನಂಪೇಟೆ ಜನತಾ ಕಾಲೋನಿ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡು ಸ್ಕಿಪ್ರ‍್ಸ್ ಪೊನ್ನಂಪೇಟೆ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಶಾಸಕ ಕೆ.ಜಿ. ಬೋಪಯ್ಯ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪಶ್ಚಿಮಘಟ್ಟ ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಮಡಿಕೇರಿ ಮೂಡ ಅಧ್ಯಕ್ಷ ರಮೇಶ್ ಹೊಳ್ಳ, ಬಿಜೆಪಿ ವೀರಾಜಪೇಟೆ ತಾಲೂಕು ಸಾಮಾಜಿಕ ಜಾಲತಾಣದ ಸಂಚಾಲಕ ಚೆರಿಯಪಂಡ ಸಚಿನ್, ಪೊನ್ನಂಪೇಟೆ ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಮಂಜುಗಣಪತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಾ ವೆಂಕಟೇಶ್, ಉಪಾಧ್ಯಕ್ಷೆ ಬೊಟ್ಟಂಗಡ ದಶಮಿದೇಚಮ್ಮ ಹಾಗೂ ಆಯೋಜಕರಾದ ಚಿರಿಯಪಂಡ ದೀಪಕ್ ಸುಬ್ಬಯ್ಯ, ಪ್ರಸ್ವಿ ಮದನ್, ದಾನಿ ಸಾಕ್ಷಿ ಭುವನೇಂದ್ರ ಉಪಸ್ಥಿತರಿದ್ದರು.

ಪಂದ್ಯಾವಳಿಯಲ್ಲಿ ಆಡಿದ ವಿಶೇಷ ಚೇತನ ಆಟಗಾರ ಮನೆಯಪಂಡ ಕುಟ್ಟಪ್ಪ ಅವರಿಗೆ ಸಾಮಾಜಿಕ ಜಾಲತಾಣ ಸಂಚಾಲಕ ಚಿರಿಯಪಂಡ ಸಚಿನ್ ಅವರು ಸನ್ಮಾನಿಸಿದರು. ನಂತರ ಪ್ಯಾರ ಒಲಂಪಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.