ಕಡAಗ, ಮಾ. ೨೫: ಸಿಪಿಎಲ್ ಕಮಿಟಿ ವತಿಯಿಂದ ಚಾಮಿಯಾಲ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯು ಚಾಮಿಯಾಲ್ ಮೈದಾನದಲ್ಲಿ ನಡೆಯಿತು. ನಿರ್ಣಾಯಕ ಪಂದ್ಯದಲ್ಲಿ ಎಎಸ್ ಬ್ಲಾಸ್ಟರ್ ತಂಡವು ಕುವಲೆರ ರಾಪ್ಟರ್ಸ್ ತಂಡವನ್ನು ಮಣಿಸಿ ೨೦೨೨ನೇ ಸಾಲಿನ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ.
ಸರಣಿಯ ಲೀಗ್ ಪಂದ್ಯದಲ್ಲಿ ಎಎಸ್ ಬ್ಲಾಸ್ಟರ್ ಹಾಗೂ ಕುವಲೆರ ರಾಪ್ಟರ್ಸ್ ತಂಡಗಳು ಪ್ರಬಲ ಪೈಪೋಟಿಯಿಂದ ಫೈನಲ್ ಪ್ರವೇಶಿಸಿತ್ತು. ಚಾಮಿಯಾಲದ ಮೈದಾನದಲ್ಲಿ ೨ದಿನಗಳಿಂದ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಯಿತು. ರನ್ನರ್ ಅಪ್ ಆಗಿ ಕುವಲೆರ ರಾಫ್ಟರ್ಸ್ ಹಾಗೂ ತೃತೀಯ ಸ್ಥಾನವನ್ನು ಶಾಮಿಲಿ ಕಿಂಗ್ಸ್ ತಂಡವು ತನ್ನದಾಗಿಸಿಕೊಂಡಿತು. ಪಂದ್ಯ ಶ್ರೇಷ್ಠ ಪ್ರಶಸ್ತಿ ರಹೀಂ, ಸರಣಿ ಶ್ರೇಷ್ಠ ಪ್ರಶಸ್ತಿ ಸಹೀರ್ ಪಡೆದು ಕೊಂಡರು, ಉತ್ತಮ ಆಟಗಾರನಾಗಿ ವಿನ್ನರ್ ತಂಡದ ನಾಯಕ ರಿಯಾಜ್ ಹೊರ ಹೊಮ್ಮಿದರು. ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ವಿತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ, ದಾನಿಗಳಾದ ಉಂಬಾಯಿ, ಪಾಲಕಂಡ ಕುಮಾರ್, ಊರಿನ ಹಿರಿಯರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಆಯೋಜಕರಾದ ಮುನೀರ್, ನಿಜಾಮ್, ಅಶ್ಫಾಕ್ ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
- ನೌಫಲ್ ಕಡಂಗ