ಮಡಿಕೇರಿ, ಮಾ. ೨೩: ಹೊದ್ದೂರು ಭಗವತಿ ದೇವಸ್ಥಾನದ ಉತ್ಸವ ತಾ. ೨೮ ರಿಂದ ನಡೆಯಲಿದೆ. ತಾ. ೨೯ ರಂದು ಬೆಳಿಗ್ಗೆ ೧೦ ಗಂಟೆಗೆ ಬೋಡ್ ಹಬ್ಬ, ಸಂಜೆ ೬ ಗಂಟೆಗೆ ಭಗವತಿ ದೇವಸ್ಥಾನದಲ್ಲಿ ಅಲಂಕಾರ ಹಾಗೂ ಮಹಾಪೂಜೆ ನಡೆಯಲಿದೆ. ತಾ. ೩೦ ರಂದು ಬೆಳಿಗ್ಗೆ ೮ ಗಂಟೆಗೆ ಭದ್ರಕಾಳಿ ಕೋಲ, ತಾ. ೩೧ ರಂದು ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಕೊಟ್ಟಿಪಾಡುವುದು, ಏಪ್ರಿಲ್ ೧ ರಂದು ಸಂಜೆ ೭ ಗಂಟೆಗೆ ತೋತ ಹಾಗೂ ೫ ಕುಟ್ಟುಮೂರ್ತಿ ಕೋಲವನ್ನು ನಡೆಸಲಾಗುತ್ತದೆ. ಏಪ್ರಿಲ್ ೨ ರಂದು ಕಲ್ಯಾಟಂಡ ಅಜ್ಜಪ್ಪ ಕೋಲ ಹಾಗೂ ವಿಷ್ಣುಮೂರ್ತಿ ಕೋಲ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.