ಮಡಿಕೇರಿ, ಮಾ. ೨೪: ವಿಶ್ವ ಜಲ ದಿನದ ಅಂಗವಾಗಿ ನಲ್ಲೂರು ತೋಟದ ವ್ಯವಸ್ಥಾಪಕರ ನೇತೃತ್ವದಲ್ಲಿ ತೋಟದ ಸಿಬ್ಬಂದಿ ವರ್ಗ ಹಾಗೂ ಕಾರ್ಮಿಕರು ಸೇರಿ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಲಿಹೊಳೆ ಜಲಾಶಯದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಶ್ರಮದಾನ ಹಾಗೂ ಪ್ರವಾಸಿಗರಿಗೆ ನೀರಿನ ಪ್ರಾಮುಖ್ಯತೆಯನ್ನು ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಲಾಯಿತು.

ಈ ಸಂದರ್ಭ ವ್ಯವಸ್ಥಾಪಕ ನಾಚಪ್ಪ, ಕಾರ್ಯಪ್ಪ ಹಾಗೂ ತೋಟದ ಸಿಬ್ಬಂದಿ ವರ್ಗ ಮತ್ತು ಕಾರ್ಮಿಕರು ಇದ್ದರು.