ಪೊನ್ನಂಪೇಟೆ, ಮಾ. ೨೩: ಪೊನ್ನಂಪೇಟೆ ತಾಲೂಕು ದಿವ್ಯಾಂಗರ ಒಕ್ಕೂಟದ ಸಭೆ ಇಲ್ಲಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆಯಿತು. ಒಕ್ಕೂಟದ ಅಧ್ಯಕ್ಷ ಕಾರೇಟಿರ ಗಣೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ತಾಲೂಕು ದಿವ್ಯಾಂಗರ ಒಕ್ಕೂಟಕ್ಕೆ ಸದಸ್ಯರನ್ನು ಸೇರ್ಪಡೆಗೊಳಿಸುವ ಬಗ್ಗೆ ಹಾಗೂ ಒಕ್ಕೂಟದ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ, ನಿರ್ಣಯ ಕೈಗೊಳ್ಳಲಾಯಿತು. ಈ ಸಂದರ್ಭ ಉಪಾಧ್ಯಕ್ಷೆ ರೀಮಾ ಫ್ಲೋರಿನ, ಕಾರ್ಯದರ್ಶಿ ಅಭಿಷೇಕ್, ಉಪಕಾರ್ಯದರ್ಶಿ ಮುತ್ತು, ಖಜಾಂಚಿ ಮಾಫೀರ ಡೀನಾ, ನಿರ್ದೇಶಕರಾದ ಪುನೀತ್, ಅಯ್ಯಪ್ಪ, ದಿನು ಹಾಗೂ ಇನ್ನಿತರ ಸದಸ್ಯರು ಹಾಜರಿದ್ದರು.
 
						