ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧ : ವಿಧಾನಸಭೆಯಲ್ಲಿ ಚರ್ಚೆ
ಬೆಂಗಳೂರು, ಮಾ. ೨೩: ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ಅನುವು ಮಾಡಿಕೊಡದಿರುವ ವಿಚಾರಕ್ಕೆ ಸಂಬAಧಿಸಿದAತೆ ವಿಧಾನಸಭೆಯಲ್ಲಿ ಬಿರುಸಿನ ಚರ್ಚೆ ನಡೆದಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ. ರಾಜ್ಯದ ದೇವಾಲಯಗಳ ಜಾತ್ರೆ, ರಥೋತ್ಸವಗಳಲ್ಲಿ ಮುಸ್ಲಿಂ ಸಮುದಾಯದವರಿಗೆ ವ್ಯಾಪಾರಕ್ಕೆ ಅವಕಾಶ ನೀಡದ ವಿಚಾರ ವಿಧಾನಸಭೆಯಲ್ಲಿಂದು ಚರ್ಚೆಗೆ ಕಾರಣವಾಯಿತು. ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ನ ಯು.ಟಿ. ಖಾದರ್ ಅವರು ವಿಷಯ ಪ್ರಸ್ತಾಪಿಸಿ, ರಾಜ್ಯದ ಅಭಿವೃದ್ಧಿಯಾಗಬೇಕಾದರೆ ಸಾಮರಸ್ಯ, ಸಹೋದರತೆ ಇರಬೇಕು. ಆದರೆ, ಕೆಲ ಕ್ರೂರ ಮನಸ್ಸಿನವರು, ಹೇಡಿಗಳು, ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ. ಬೀದಿ ಬದಿ ವ್ಯಾಪಾರಿಗಳು ಇಂತಹದೆ ಧರ್ಮ ಅಂತ ಇಲ್ಲದೆ ಜೀವನ ಸಾಗಿಸುತ್ತಿದ್ದಾರೆ. ಕೆಲವೆಡೆ ಧಾರ್ಮಿಕ ಕೇಂದ್ರಗಳಲ್ಲಿ ಮುಸ್ಲಿಂ ಧರ್ಮದವರಿಗೆ ವ್ಯಾಪಾರ ಮಾಡದಂತೆ ನಿರ್ಬಂಧ ಹೇರುತ್ತಿದ್ದಾರೆ ಎಂದು ಹೇಳಿದರು. ಖಾದರ್ ಅವರ ಮಾತಿಗೆ ಆಕ್ಷೇಪವೆತ್ತಿದ ಆಡಳಿತ ಪಕ್ಷದ ರಘುಪತಿ ಭಟ್, ಹರೀಶ್ ಪೂಂಜಾ, ಸಂಜೀವ್ ಮಠ್ದೂರ್, ರೇಣುಕಾಚಾರ್ಯ ಸೇರಿದಂತೆ ಹಲವು ಸದಸ್ಯರು ಒಮ್ಮೆಗೆ ಎದ್ದು ನಿಂತು ಖಾದರ್ ಅವರ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಗದ್ದಲದಲ್ಲೇ ಮಾತನಾಡಿದ ರೇಣುಕಾಚಾರ್ಯ ಅವರು, ನಮ್ಮ ಮಠಗಳು, ದೇವಸ್ಥಾನಗಳಲ್ಲಿ ಅನ್ಯ ಧರ್ಮಿಯರಿಗೆ ಅವಕಾಶ ಕೊಡುತ್ತೇವೆ. ಇವರು ಮಸೀದಿಗೆ ಹೋಗಲು ಬಿಡುತ್ತಾರಾ ಎಂದು ಪ್ರಶ್ನೆ ಮಾಡಿ ಹೇಡಿ ಎಂಬ ಪದವನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದರು. ಸದಸ್ಯರ ಪ್ರಸ್ತಾಪಗಳಿಗೆ ಉತ್ತರಿಸಿದ ಕಾನೂನು ಸಚಿವ ಮಾಧುಸ್ವಾಮಿ, ೨೦೦೨ ಹಿಂದೂ ಧಾರ್ಮಿಕ ದತ್ತಿ ಕಾಯ್ದೆಯಲ್ಲಿ ಧಾರ್ಮಿಕ ಸಂಸ್ಥೆಗಳ ಸಮೀಪದ ಕಟ್ಟಡ, ಜಮೀನು, ನಿವೇಶನಗಳನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆ ನೀಡುವಂತಿಲ್ಲ ಎಂದು ಹೇಳಿದೆ. ಇದು ಕಾಂಗ್ರೆಸ್ ಸರ್ಕಾರವಿದ್ದಾಗಲೇ ಮಾಡಿದ್ದು. ಬೇರೆ ಧರ್ಮದ ವರಿಗೆ ಅವಕಾಶ ಇಲ್ಲ ಎಂದಿದೆ. ನಾವೇನೂ ಮಾಡಲು ಬರಲ್ಲ. ದೇವಸ್ಥಾನದ ಆವರಣ ಬಿಟ್ಟು ಹೊರಗಡೆ ಆದರೆ ಅದನ್ನು ಸರಿ ಪಡಿಸಬಹುದು ಅಷ್ಟೆ ಎಂದು ಹೇಳಿ ಈ ಕುರಿತ ಚರ್ಚೆಗೆ ತೆರೆ ಎಳೆದರು.
ಭಾರತ ಪ್ರಮುಖ ಪಾಲುದಾರ ಮಿತ್ರ ರಾಷ್ಟç
ನವದೆಹಲಿ, ಮಾ. ೨೩: ರಷ್ಯಾ ವಿರುದ್ಧ ನಡೆಯಲು ಭಾರತಕ್ಕೆ ಅಸ್ಥಿರತೆ, ಭಯ ಕಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದ ಬೆನ್ನಲ್ಲೇ ಅಮೆರಿಕ ಅಧಿಕಾರಿಗಳು ಭಾರತ ತಮಗೆ ಅತ್ಯಂತ ಪ್ರಮುಖ ಪಾಲುದಾರ ಮಿತ್ರ ರಾಷ್ಟç ಎಂದು ಹೇಳಿದ್ದಾರೆ. ಕ್ವಾಡ್ನಲ್ಲಿ ಭಾರತದ ಸ್ಥಾನದ ಪ್ರಕಾರ, ಕ್ವಾಡ್ ಪರಿಭಾಷೆಯಲ್ಲಿ ನಮ್ಮ ಹಾಗೂ ಭಾರತದ ಸಂಬAಧದ ದೃಷ್ಟಿಯಿಂದ ಹಾಗೂ ದ್ವಿಪಕ್ಷೀಯ ದೃಷ್ಟಿಯಿಂದ, ಸ್ವತಂತ್ರ ಹಾಗೂ ಮುಕ್ತ ಇಂಡೋ ಪೆಸಿಫಿಕ್ನ ದೂರದೃಷ್ಟಿಯ ಯೋಜನೆಯ ಭಾಗವಾಗಿ ಭಾರತ ನಮಗೆ ಅತ್ಯಗತ್ಯ ಮಿತ್ರ ರಾಷ್ಟçವಾಗಿದೆ. ಈ ಉದ್ದೇಶ ಕ್ವಾಡ್ನ ಕೇಂದ್ರಬಿAದುವಾಗಿದೆ ಎಂದು ಅಮೆರಿಕದ ವಕ್ತಾರ ನೆಡ್ ಪ್ರೆöÊಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವ ಆರೋಪ
ಬೆಂಗಳೂರು, ಮಾ. ೨೩: ಜಾತ್ರೆಯಲ್ಲಿ ಮುಸ್ಲಿಮರಿಗೆ ವ್ಯಾಪಾರ ಮಾಡಲು ಅವಕಾಶ ನೀಡದಿರುವ ವಿಚಾರದ ಬಗ್ಗೆ ವಿಧಾನಸಭೆಯಲ್ಲಿ ಬುಧವಾರ ಗಂಭೀರ ಚರ್ಚೆ ನಡೆಯುತ್ತಿರುವಾಗ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರೋ ಆರೋಪವೂ ಪ್ರಸ್ತಾಪವಾಯಿತು. ಶೂನ್ಯ ವೇಳೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿರುವಾಗ ನೀವು ನಕಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದೀರಿ ಎಂದು ಯು.ಟಿ. ಖಾದರ್ ಆರೋಪಿಸಿದರು. ಈ ವೇಳೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು, ನಕಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದರೆ ನಾನು ಗಲ್ಲಿಗೇರಲು ಸಿದ್ಧನಿದ್ದೇನೆ ಎಂದರು. ನಾನು ಯಾವುದೇ ಸವಲತ್ತು ಪಡೆದಿಲ್ಲ. ಈ ಹಿಂದೆ ಗುಲ್ಬರ್ಗಾದಲ್ಲಿ ಉಮೇಶ್ ಜಾಧವ್ ಸ್ಪರ್ಧಿಸಿದಾಗ ನನ್ನ ಸಹೋದರ ಸಹ ಸ್ಪರ್ಧಿಸಿದ್ದರು. ನನ್ನ ಸಹೋದರ ಮನೆಯಿಂದ ಇಬ್ಭಾಗ ಆಗಿ ೨೫ ವರ್ಷ ಆಯ್ತು. ನನ್ನ ನಕಲಿ ಸರ್ಟಿಫಿಕೇಟ್ ಇದ್ದರೆ ಬಿಡುಗಡೆ ಮಾಡಬೇಕು ಎಂದು ತಿರುಗೇಟು ನೀಡಿದರು.
ವಿಷಪೂರಿತ ಆಹಾರ ಸೇವಿಸಿ ೫೦ ಮಂದಿ ಅಸ್ವಸ್ಥ
ಬಾಗಲಕೋಟೆ, ಮಾ. ೨೩: ಬಾಗಲಕೋಟೆ ತಾಲೂಕಿನ ದೊಮನಲ್ ಗ್ರಾಮದಲ್ಲಿ ವಿಷಪೂರಿತ ಆಹಾರ ಸೇವಿಸಿ ೨೨ ಮಕ್ಕಳು ಸೇರಿದಂತೆ ಕನಿಷ್ಟ ೪೮ ಮಂದಿ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಆರಂಭದಲ್ಲಿ ೮೦ ಜನರು ಅಸ್ವಸ್ಥಕ್ಕೀಡಾಗಿದ್ದು ವರದಿಯಾಯಿತು. ನಂತರ ಆರೋಗ್ಯ ಸಿಬ್ಬಂದಿ ಕಾರ್ಯಪ್ರವೃತ್ತರಾದ ನಂತರ ಸುಮಾರು ೫೦ ಮಂದಿ ಅಸ್ವಸ್ಥಕ್ಕೊಳಗಾಗಿದ್ದು ಕಂಡುಬAದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ದೊಮನಲ್ ಗ್ರಾಮದ ಯಮುನರಪ್ಪ ಉರುಸ್ ಧಾರ್ಮಿಕ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿದ ಒಂದು ಗಂಟೆಯ ನಂತರ ಈ ಘಟನೆ ಸಂಭವಿಸಿದೆ. ಹಲವರು ವಾಂತಿ-ಭೇದಿ ಮಾಡಲು ಆರಂಭಿಸಿದರು. ಕೂಡಲೇ ಗ್ರಾಮಸ್ಥರು ಆರೋಗ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿ ಕ್ಷಣಮಾತ್ರದಲ್ಲಿಯೇ ಸ್ಥಳಕ್ಕೆ ಧಾವಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದರು.
ಸಜೀವ ದಹನ ಪ್ರಕರಣ : ವರದಿ ಸಲ್ಲಿಸುವಂತೆ ಸೂಚನೆ
ಕೋಲ್ಕತ್ತಾ, ಮಾ. ೨೩: ಬಿರ್ಭುಮ್ ಜಿಲ್ಲೆಯ ರಾಮ್ಪುರ್ಹತ್ನಲ್ಲಿ ೧೧ ಜನ ಸಜೀವ ದಹನವಾದ ಘಟನೆಯ ಸ್ಥಿತಿಗತಿ ವರದಿಯನ್ನು ಗುರುವಾರ ಮಧ್ಯಾಹ್ನ ೨ ಗಂಟೆಯೊಳಗೆ ಸಲ್ಲಿಸುವಂತೆ ಕೋಲ್ಕತ್ತಾ ಹೈಕೋರ್ಟ್ ಬುಧವಾರ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿದೆ. ಈ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ನ್ಯಾಯಾಲಯ ಆದೇಶಿಸಿದೆ. ದೆಹಲಿಯ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯದ ತಂಡವನ್ನು ಘಟನೆಯ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಲು ಕಳುಹಿಸಲಾಗುವುದು ಎಂದು ಕೋರ್ಟ್ ಹೇಳಿದೆ. ಯಾವುದೇ ಸಾಕ್ಷಿ ನಾಶವಾಗದಿರಲಿ. ಜಿಲ್ಲಾ ನ್ಯಾಯಾಲಯ ಮತ್ತು ರಾಜ್ಯ ಡಿಜಿಪಿ ಪ್ರತಿ ಗ್ರಾಮಸ್ಥರು ಮತ್ತು ಸಾಕ್ಷಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು. ಯಾವುದೇ ಮರಣೋತ್ತರ ಪರೀಕ್ಷೆ ಬಾಕಿಯಿದ್ದರೆ ಅದನ್ನು ವೀಡಿಯೋ ಚಿತ್ರೀಕರಿಸಬೇಕು ಎಂದು ಕೋರ್ಟ್ ಹೇಳಿದೆ.
ಕೃಷಿ ಉತ್ಪನ್ನಗಳಿಗೆ ಜಿಎಸ್ಟಿಯಲ್ಲಿ ವಿನಾಯಿತಿಗೆ ಪತ್ರ
ಮೈಸೂರು, ಮಾ. ೨೩: ರಸಗೊಬ್ಬರ, ಕೀಟನಾಶಕ, ಹನಿ ನೀರಾವರಿ ವಸ್ತುಗಳು ಮತ್ತು ಇತರ ಕೃಷಿ ಉತ್ಪನ್ನಗಳನ್ನು ಜಿಎಸ್ಟಿಯಿಂದ ವಿನಾಯಿತಿ ನೀಡುವ ಬೇಡಿಕೆಯನ್ನು ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತ ಮುಖಂಡರಿಗೆ ಭರವಸೆ ನೀಡಿದ್ದಾರೆ. ಅಲ್ಲದೆ ರೈತ ಸಮುದಾಯದ ಹಿತದೃಷ್ಟಿಯಿಂದ ಕೇಂದ್ರಕ್ಕೆ ಪತ್ರ ಬರೆದು ಕೃಷಿ ಉತ್ಪನ್ನಗಳಿಗೆ ಜಿಎಸ್ಟಿ ವಿನಾಯಿತಿ ನೀಡುವಂತೆ ಒತ್ತಾಯಿಸುವುದಾಗಿ ಬೊಮ್ಮಾಯಿ ಹೇಳಿದ್ದಾರೆ. ದುಂಡು ಮೇಜಿನ ಸಭೆಯಲ್ಲಿ ಪ್ರಮುಖ ರೈತ ಸಂಘಟನೆಗಳಿAದ ಮನವಿ ಸ್ವೀಕರಿಸಿದ ನಂತರ ರೈತ ಮುಖಂಡರೊAದಿಗೆ ಸಿಎಂ ಬೊಮ್ಮಾಯಿ ಸಂವಾದ ನಡೆಸಿದರು. ಈ ವೇಳೆ ರೈತರು, ಒಂದೆಡೆ ಸಬ್ಸಿಡಿ ನೀಡುತ್ತಿರುವ ಕೇಂದ್ರ ಸರ್ಕಾರ ಮತ್ತೊಂದೆಡೆ ಕೃಷಿ ಉತ್ಪನ್ನಗಳು ಮತ್ತು ರಸಗೊಬ್ಬರಗಳ ಮೇಲೆ ಜಿಎಸ್ಟಿ ಹೇರುವ ಮೂಲಕ ರೈತರನ್ನು ಶೋಷಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮರಿಯುಪೋಲ್ ಮೇಲೆ ರಷ್ಯಾ ದಾಳಿ
ರಷ್ಯಾ, ಮಾ. ೨೩: ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮುಂದುವರಿದಿದ್ದು, ದಾಳಿಯನ್ನು ತೀವ್ರಗೊಳಿಸಿದೆ. ಮರಿಯುಪೋಲ್ ನಗರದ ಮೇಲೆ ರಷ್ಯಾ ಕೆಲವು ದಿನಗಳಿಂದ ಶೆಲ್ ದಾಳಿ ನಡೆಸುತ್ತಿವೆ. ಈ ನಡುವೆ ರಷ್ಯಾ ಎರಡು ಶಕ್ತಿಶಾಲಿ ಬಾಂಬ್ಗಳನ್ನು ಮರಿಯುಪೋಲ್ ನಗರದ ಮೇಲೆ ಪ್ರಯೋಗಿಸಿದ್ದಾಗಿ ತಿಳಿದುಬಂದಿದೆ. ಸ್ಫೋಟದ ತೀವ್ರತೆ ನಗರದಾದ್ಯಂತ ಅನುಭವಕ್ಕೆ ಬಂದಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ. ೨ ಲಕ್ಷಕ್ಕೂ ಹೆಚ್ಚು ಜನರು ನಗರದ ಆಯಕಟ್ಟಿ ಜಾಗಗಳಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ಅವರ ರಕ್ಷಣೆ ಬಗ್ಗೆ ಮಾನವ ಹಕ್ಕುಗಳ ಕಾವಲುಪಡೆ ಆತಂಕ ವ್ಯಕ್ತಪಡಿಸಿದೆ. ಆಕ್ರಮಣಕಾರರು ಮರಿಯುಪೋಲ್ ನಗರವನ್ನು ಧ್ವಂಸ ಮಾಡುವುದೇ ರಷ್ಯಾದ ಗುರಿಯಾಗಿದೆ. ನಾಗರಿಕರ ಹಿತರಕ್ಷಣೆ ಅವರಿಗೆ ಬೇಕಿಲ್ಲ ಎಂದು ಅಧಿಕಾರಿಗಳು ದೂರಿದ್ದಾರೆ.
 
						