ವೀರಾಜಪೇಟೆ, ಮಾ. ೨೩: ಅನಾರೋಗ್ಯದಿಂದ ಬಳಲುತಿದ್ದ ನಿವೃತ್ತ ಶಿಕ್ಷಕ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೀರಾಜಪೇಟೆ ಬೆಳ್ಳರಿಮಾಡು ಗ್ರಾಮದಲ್ಲಿ ನಡೆದಿದೆ.
ಬೆಳ್ಳರಿಮಾಡು ನಿವಾಸಿ ನಿವೃತ್ತ ಶಿಕ್ಷಕ ಮತ್ತು ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್ನ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದ ಪುಟ್ಟಿಚಂಡ ಎ. ಅಯ್ಯಣ್ಣ (೮೯) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಮೃತ ಅಯ್ಯಣ್ಣ ತನ್ನ ಪುತ್ರನೊಂದಿಗೆ ಸಿದ್ದಾಪುರದಲ್ಲಿ ವಾಸವಿದ್ದರು. ಮೃತರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಈ ಸಂಬAಧ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಿಗ್ಗೆ ಮನೆಯಿಂದ ವೀರಾಜಪೇಟೆ ನಗರಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ತೆರಳಿದ ಅಯ್ಯಣ್ಣ ಅವರು ಬೆಳ್ಳರಿಮಾಡು ಪುಟ್ಟಿಚಂಡ ಐನ್‌ಮನೆಗೆ ಆಗಮಿಸಿದ್ದಾರೆ. ಸುಮಾರು ಬೆಳಿಗ್ಗೆ ೧೦.೩೦ ರ ಸಮಯದಲ್ಲಿ ಪುಟ್ಟಿಚಂಡ ಭರತ್ ಮೊಣ್ಣಪ್ಪ ಎಂಬವರ ಕೆರೆಯಲ್ಲಿ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರ ಹಿರಿಯ ಮಗ ಮಡಿಕೇರಿ ನಿವಾಸಿ ದೇವಯ್ಯ ಅವರು ನೀಡಿದ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.