ಸೋಮವಾರಪೇಟೆ, ಮಾ. ೨೩: ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಒಕ್ಕಲಿಗರ ಸಮುದಾಯ ಭವನದ ಶ್ರೀಗಂಧ ಹಾಲ್‌ನಲ್ಲಿ ಮಹಿಳಾ ದಿನವನ್ನು ಆಚರಿಸಲಾಯಿತು.

ಮಹಿಳಾ ಕ್ಯಾನ್ಸರ್ ರೋಗಿ ಹಾಗೂ ವಿಶೇಷಚೇತನ ಬಾಲಕನಿಗೆ ಕ್ಲಬ್‌ನಿಂದ ತಲಾ ರೂ. ೧೦ ಸಾವಿರಗಳ ಧನಸಹಾಯ ಮಾಡಲಾಯಿತು. ಲೇಖಕಿ ಜಲಾ ಕಾಳಪ್ಪ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆ ಅಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಕ್ಲಬ್ ಅಧ್ಯಕ್ಷೆ ಆಶಾ ಯೋಗೇಂದ್ರ, ಕಾರ್ಯದರ್ಶಿ ಅಮೃತ ಕಿರಣ್, ನಿಕಟಪೂರ್ವ ಅಧ್ಯಕ್ಷೆ ಕವಿತಾ ವಿರೂಪಾಕ್ಷ, ಮೈಸೂರು ಕ್ಲಬ್‌ನ ಪದಾಧಿಕಾರಿ ನಂದಿನಿ ಪ್ರಭುದೇವ್ ಸೇರಿದಂತೆ ಇತರರು ಉಪಸ್ಥಿತರಿದ್ದರು.