ಮಡಿಕೇರಿ, ಮಾ. ೨೩: ಹಾಕಿ ಇಂಡಿಯಾ ವತಿಯಿಂದ ಆಂಧ್ರ ಪ್ರದೇಶದ ಕಾಕಿನಾಡದಲ್ಲಿ ಇದೇ ತಾ. ೨೫ರಿಂದ ಏಪ್ರಿಲ್ ೩ರ ವರೆಗೆ ನಡೆಯಲಿರುವ ೧೨ನೇ ಜೂನಿಯರ್ ಮಹಿಳಾ ಹಾಕಿ ಚಾಂಪಿಯನ್‌ಶಿಪ್‌ಗೆ ಹಾಕಿ ಕರ್ನಾಟಕ ತಂಡದಲ್ಲಿ ಕೊಡಗಿನ ಹನ್ನೆರಡು ಮಂದಿ ಆಟಗಾರ್ತಿಯರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಒಟ್ಟು ಹದಿನೆಂಟು ಮಂದಿ ಇರುವ ತಂಡದಲ್ಲಿ ಕೊಡಗಿನವರೇ ಹನ್ನೆರಡು ಮಂದಿ ಇದ್ದಾರೆ. ಮಡಿಕೇರಿ ಸಾಯಿ ಹಾಸ್ಟೆಲ್‌ನ ಪಾಂಡAಡ ದೇಚಮ್ಮ ಗಣಪತಿ, ಅಪ್ಸರ ಹೆಚ್.ಎ., ಸೀಮಾ ಆನಂದ್‌ರಾವ್, ಮೈಸೂರು ಡಿವೈಇಎಸ್‌ನ ಬಾರಿಕೆ ಜೀವಿತಾ ಗಿರೀಶ್, ಕೈಬಿಲಿ ದಿಲನ್ ಜಯಪ್ರಕಾಶ್, ತಡಿಯಪ್ಪನ ಸುಚಿತಾ ಚಂದ್ರಶೇಖರ್ (ಗೋಲ್ ಕೀಪರ್), ಕುಂದಚಿರ ತಾಜ್ ಬೆಳ್ಯಪ್ಪ, ಜಾಹ್ನವಿ ಶಿವಣ್ಣ, ನಿಸರ್ಗ ಬಸವರಾಜು, ಸಿದ್ದಗಂಗ ಬಸವರಾಜಪ್ಪ, ಮಣಿ ಹನುಮಂತನಾಯಕ, ಕೀರ್ತನಾ ಮಂಜುನಾಥ ಇವರುಗಳು ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ತೇಜಸ್ವಿನಿ ಡಿ.ಎನ್. ನಾಯಕಿಯಾಗಿರುವ ತಂಡದಲ್ಲಿ ಕಾವೇರಿ ಲೆಂಕಣ್ಣವರ್, ಸಹನಾ ಸಿ.ಎಂ., ಉದುಮುಲ ಸೌಮ್ಯ, ಕುಷಿ ಎಂ. ಜೈನ್, ದೀಪಿಕಾ ಬಿ. ಇತರ ಆಟಗಾರ್ತಿಯರಾಗಿದ್ದಾರೆ. ತಂಡದ ತರಬೇತುದಾರರಾಗಿ ಕೋಮಲ ಬಿ.ಎಂ. ಹಾಗೂ ವ್ಯವಸ್ಥಾಪಕರಾಗಿ ಧರ್ಮೇಂದ್ರ ಜಿ.ಆರ್. ಕಾರ್ಯನಿರ್ವಹಿಸಲಿದ್ದಾರೆ ಎಂದು ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ಅಂಜಪರವAಡ ಬಿ. ಸುಬ್ಬಯ್ಯ ತಿಳಿಸಿದ್ದಾರೆ. ತಂಡ ಈಗಾಗಲೇ ಆಂಧ್ರ ಪ್ರದೇಶದತ್ತ ಪ್ರಯಾಣ ಬೆಳೆಸಿದೆ.
 
						