ವೀರಾಜಪೇಟೆ, ಮಾ. ೨೩ : ಕೊಡವ ಕುಟುಂಬಗಳ ನಡುವಿನ ೨೦ನೇ ವರ್ಷದ ಕೌಟುಂಬಿಕ ಪೊರುಕೊಂಡ ಕಪ್ ಕ್ರಿಕೆಟ್ ಪಂದ್ಯಾಟವನ್ನು ಕೊಡವ ಕ್ರಿಕೆಟ್ ಅಕಾಡೆÀಮಿಯ ಅಧೀನನಲ್ಲಿ ಮೇ ೧ ರಿಂದ ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ ನಡೆಸಲು ತಿರ್ಮಾನಿಸ ಲಾಗಿದೆ ಎಂದು ಕುಟುಂಬದ ಅಧ್ಯಕ್ಷ ಪೊರುಕೊಂಡ ಬೋಪಣ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ರಿಕೆಟ್ ಪಂದ್ಯಾಟವನ್ನು ೨೦೧೯ರಲ್ಲಿ ವೀರಾಜಪೇಟೆ ಜೂನಿಯರ್ ಮೈದಾನದಲ್ಲಿ ನಡೆಸಲು ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿತ್ತು. ೨೦೧೮ರಲ್ಲಿ ಭೀಕರ ಪ್ರಕೃತಿ ವಿಕೋಪ ಹಿನ್ನೆಲೆ ಪಂದ್ಯಾಟವನ್ನು ಮುಂದೂಡ ಲಾಗಿತ್ತು. ನಂತರದ ವರ್ಷಗಳಲ್ಲಿ ಕೊರೊನಾ ಭಾದಿಸಿದ ಕಾರಣ ಪಂದ್ಯಾಟವನ್ನು ನಡೆಸಲಾಗಲಿಲ್ಲ. ಎಲ್ಲಾ ಕೊಡವ ಜನಾಂಗಗಳ ಸಹಕಾರದಿಂದ ವೀರಾಜಪೇಟೆಯ ಬದಲು ಅಮ್ಮತ್ತಿಯಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.
ಕಾರ್ಯದರ್ಶಿ ಪೊರುಕೊಂಡ ಸುನೀಲ್ ಮಾತನಾಡಿ, ಮೇ ೧ ರಿಂದ ಪ್ರಾರಂಭಗೊAಡು ಅಂದಾಜು ೨೫ ದಿನಗಳ ಕಾಲ ನಡೆಯುವ ಪಂದ್ಯಾಟದಲ್ಲಿ ೨೦೦ಕ್ಕೂ ಅಧಿಕ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಪ್ರಥಮ, ದ್ವಿತೀಯ ಹಾಗೂ ತೃತಿಯ ಸ್ಥಾನ ಪಡೆಯುವ ತಂಡಗಳಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗುವುದು. ಪಂದ್ಯದಲ್ಲಿ ಭಾಗವಹಿಸುವ ತಂಡಗಳು ಏಪ್ರಿಲ್ ೧ ರಿಂದ ೨೦ ತನಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳ ಬಹುದಾಗಿದೆ ಎಂದು ಮಾಹಿತಿ ನೀಡಿದರು.
ನಿರ್ದೇಶಕ ಪೊರುಕೊಂಡ ಸಾಬ ಯಶವಂತ್ ಮಾತನಾಡಿ, ಮೇ ಮೊದಲ ವಾರದಲ್ಲಿ ವೀರಾಜಪೇಟೆ ಜೂನಿಯರ್ ಕಾಲೇಜಿನಲ್ಲಿ ಪರೀಕ್ಷೆಗಳು ನಡೆಯುತ್ತಿರುವ ಕಾರಣ ಅಮ್ಮತ್ತಿ ಪ್ರೌಡಶಾಲಾ ಮೈದಾನಕ್ಕೆ ಪಂದ್ಯಾಟವನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ನಿರ್ದೇಶಕ ಪೊರುಕೊಂಡ ತಿಮ್ಮಯ್ಯ ಉಪಸ್ಥಿತರಿದ್ದರು.