ಕಣಿವೆ, ಮಾ. ೨೩: ಸುಡು ಬಿಸಿಲು ದಿನೇ ದಿನೇ ಏರುತ್ತಿ ದ್ದಂತೆಯೇ ಎಲ್ಲೆಡೆ ಭೂಮಿಯ ಮೇಲ್ಪದರ ಒಣಗಿ ಬಣಗುಡುತ್ತಿದೆ.
ಮಳೆಯು ಸುರಿಯದ ಕಾರಣ ಭೂಮಿ ಮೇಲಿನ ಹುಲ್ಲುಗರಿಕೆಯೂ ಕೂಡ ನೀರಿಗಾಗಿ ಹಾತೊರೆದು ಬಿಸಿಲ ತಾಪಕ್ಕೆ ಒಣಗುತ್ತಿದೆ. ಅತ್ತ ಹಸಿರು ಎಲೆ - ಸೊಪ್ಪು ಸೆದೆಗಳನ್ನು ತಿಂದು ಜೀವಿಸುವ ಮೇಕೆಗಳು ಆಹಾರಕ್ಕಾಗಿ ಹಾಹಾಕಾರ ಪಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ.
ಯಡವನಾಡು ಅರಣ್ಯದಂಚಿನ ಗ್ರಾಮಗಳ ಕೃಷಿಕರು ಸಾಕಿರುವ ಮೇಕೆಗಳ ಹಿಂಡೊAದು ಹಸಿರು ಆಹಾರ ಅರಸಿ ಕೂಡಿಗೆ - ಸೋಮವಾರಪೇಟೆ ಹೆದ್ದಾರಿಯ ಯಡವನಾಡು ಅರಣ್ಯದ ಮಧ್ಯ ಭಾಗದಲ್ಲಿ ಸಾಗುತ್ತಿದ್ದುದು ಕಂಡು ಬಂತು.
ಅರಣ್ಯದಲ್ಲಿ ಬೆಳೆಯುವ ಸಸ್ಯರಾಶಿಗಳ ಹನನ ಮಾಡುವ ಮೇಕೆಗಳು ಅರಣ್ಯ ನಾಶಕ್ಕೆ ಕಾರಣವೂ ಆಗುತ್ತಿವೆ.
ಅಂದರೆ ಆಹಾರಕ್ಕಾಗಿ ಸಸ್ಯಗಳ ಎಲೆಗಳನ್ನೇ ಅರಸುವ ಮೇಕೆಗಳಿಂದ ಸಸ್ಯರಾಶಿಗಳ ಬೆಳವಣಿಗೆಗೆ ಮಾರಕವಾಗಿವೆ.
ಹಾಗಾಗಿ ಅರಣ್ಯದಂಚಿನ ಕೃಷಿಕರು ತಾವು ಸಾಕಿ ಸಲಹಿರುವ ಮೇಕೆಗಳನ್ನು ಅರಣ್ಯದೊಳಕ್ಕೆ ಬಿಡದಂತೆ ಎಚ್ಚರಿಕೆ ಮೂಡಿಸುವ ಕೆಲಸ ಅರಣ್ಯ ಇಲಾಖೆಯಿಂದ ಆಗಬೇಕಿದೆ.
ಕಾಡಿಗೆ ಬೆಂಕಿ ಸಾಧ್ಯತೆ
ಮೇಕೆಗಳನ್ನು ಹಾಗೂ ಜಾನುವಾರುಗಳನ್ನು ಮೇಯಿಸುವ ದನಗಾಹಿಗಳಿಂದ ಬೇಸಗೆಯಲ್ಲಿ ಅರಣ್ಯಕ್ಕೆ ಬೆಂಕಿ ತಗಲುವ ಸಾಧ್ಯತೆ ನಿಚ್ಚಳವಾಗಿದೆ. ಏಕೆಂದರೆ, ಸಾಮಾನ್ಯವಾಗಿ ಬಹುತೇಕ ದನಗಾಹಿಗಳು ಧೂಮಪಾನ ಪೀಡಿತರಾಗಿರುವ ಕಾರಣ ತಮಗೆ ಅರಿವಿಗೆ ಬಾರದಂತೆ ಎಲ್ಲೋ ಕುಳಿತಲ್ಲೋ ನಿಂತಲ್ಲೋ ಬೀಡಿ ಹಚ್ಚಿ ಬಿಸಾಕುವ ಬೆಂಕಿಕಡ್ಡಿಯಿAದ ಅರಣ್ಯದಲ್ಲಿ ಕಾಳ್ಗಿಚ್ಚು ಹರಡುವ ಸಂಭವವನ್ನು ಅಲ್ಲಗಳೆಯುವಂತಿಲ್ಲ. ಹಾಗಾಗಿ ದನಗಾಹಿಗಳು, ಮೇಕೆ ಮೇಯಿಸುವವರು ಸೇರಿದಂತೆ ಅರಣ್ಯದೊಳಕ್ಕೆ ಯಾವುದೇ ಸಾಕು ಪ್ರಾಣಿಗಳ ಪ್ರವೇಶವನ್ನು ಖಡ್ಡಾಯವಾಗಿ ನಿಷೇಧಿಸುವಂತಹ ಕೆಲಸ ಆಗಬೇಕಿದೆ.
ಹಾಗಾದಲ್ಲಿ ಅತ್ತ ಮೊಳಕೆ ಯೊಡೆದು ಬೆಳವಣಿಗೆ ಹಂತದಲ್ಲಿನ ಸಸ್ಯಗಳು ಬೆಳೆಯುತ್ತವೆ. ಇತ್ತ ಬೇಸಗೆ ಯಲ್ಲಿ ಆಕಸ್ಮಿಕವಾಗಿ ಹರಡುವ ಕಾಳ್ಗಿಚ್ಚನ್ನು ನಿಗ್ರಹಿಸಬಹುದು.
ಕಾಡಾನೆಗಳನ್ನು ಶಪಿಸುವವರು ಅರಣ್ಯವನ್ನೇಕೆ ಅವಲಂಬಿಸುತ್ತಾರೆ...?
ಕಾಡಾನೆಗಳು ಸೇರಿದೆಡೆ ವನ್ಯಪ್ರಾಣಿಗಳ ಆವಾಸಸ್ಥಾನವನ್ನು ಆಕ್ರಮಿಸಿಕೊಂಡ ಮಂದಿ ಕಾಡಾನೆಗಳ ಕಾಟ ಎಂದು ಬೊಬ್ಬಿಡುವವರು ಕಾಡಾನೆಗಳ ಆಹಾರದ ಜಾಗಕ್ಕೆ ತಾವು ಸಾಕಿರುವ ಮೇಕೆ ಹಾಗೂ ಜಾನುವಾರುಗಳನ್ನೇಕೆ ಬಿಡುತ್ತಾರೆ ಎಂಬುದು ಇಲ್ಲಿ ಪ್ರಶ್ನೆಯಾಗಿದೆ.
ಕಾಡಾನೆಗಳು ಈ ಮಂದಿ ಬೆಳೆಸಿದ ಕೃಷಿ ಫಸಲು ತಿಂದು ತುಳಿದು ಹಾನಿಪಡಿಸಿದರೆ ಪರಿಹಾರಕ್ಕಾಗಿ ಇಲಾಖೆಯ ಮೇಲೆ ಪ್ರಹಾರ ನಡೆಸುತ್ತಾರೆ. ಆದರೆ ಕಾಡಾನೆಗಳ ಆಹಾರದ ಮೂಲವಾದ ಸೊಪ್ಪು ಹಾಗೂ ಎಲೆಗಳನ್ನು ತಮ್ಮ ಸಾಕು ಪ್ರಾಣಿಗಳಿಗೆ ನೀಡುವ ಮೂಲಕ ಅರಣ್ಯ ಹನನಕ್ಕೆ ಕಾರಣರಾಗಿ ರುವವರಿಗೆ ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಯಾವುದೇ ಶಿಕ್ಷೆ ಬೇಡವೇ ಎಂಬುದು ಇಲ್ಲಿ ಚರ್ಚಿತ ವಿಷಯವಾಗಿದೆ.
ಸಾಕು ಪ್ರಾಣಿಗಳಿಗೆ ಮನೆ ಯಂಗಳದಲ್ಲೇ ಕಟ್ಟಿ ಅವುಗಳಿಗೆ ಪ್ರಿಯವಾದ ಆಹಾರವನ್ನು ನೀಡುವ ಮೂಲಕ ಅತಿಕ್ರಮವಾಗಿ ಅರಣ್ಯಕ್ಕೆ ಹೋಗುವುದನ್ನು ತಡೆಯಲು ಪಾಲಕರು ಮುಂದಾಗುವರೆ ಕಾದು ನೋಡಬೇಕಿದೆ.
- ಕೆ.ಎಸ್. ಮೂರ್ತಿ,
ಮೊ. ೯೩೮೦೮೪೪೧೭೩
 
						