ಮಡಿಕೇರಿ, ಮಾ. ೨೩ : ವೀರಾಜಪೆಟೆಯ ಅನ್ವರುಲ್ ಹುದಾ ಕಾಲೇಜ್ ಆಫ್ ಇಸ್ಲಾಮಿಕ್ ಸೈನ್ಸ್ನ ಅಧೀನದಲ್ಲಿರುವ ನಹ್ದತುಸುನ್ನಃ ಸಟುಡೆಂಟ್ಸ್ ಅಸೋಸಿಯೇಶನ್ ವತಿಯಿಂದ ವರ್ಷಂಪ್ರತಿ ಆಚರಿಸಿ ಕೊಂಡು ಬರುತ್ತಿರುವ ಕಲಾ, ಸಾಹಿತ್ಯ, ಆಧ್ಯಾತ್ಮಿಕ ಕಾರ್ಯಕ್ರಮಗಳು ‘ಅನ್ವಾರ್ ಮೆಜೆಸ್ಟಿ’ ಎಂಬ ಹೆಸರಿನಲ್ಲಿ ತಾ.೨೪ ರಿಂದ (ಇಂದಿನಿAದ) ತಾ. ೨೭ರವರೆಗೆ ವಿವಿಧ ಕಾರ್ಯಕ್ರಮ ಗಳೊಂದಿಗೆ ವೀರಾಜಪೇಟೆಯ ಅನ್ವಾರ್ ಕ್ಯಾಂಪಸ್‌ನಲ್ಲಿ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅನ್ವಾರುಲ್ ಹುದಾ ಕೇಂದ್ರ ಸಮಿತಿ ಸದಸ್ಯ ಯಾಕೂಬ್ ಮಾಸ್ಟರ್ ಕೊಳಕೇರಿ, ತಾ. ೨೪ರಂದು ಸಂಜೆ ೪ ಗಂಟೆಯಿAದ ಕಾರ್ಯ ಕ್ರಮಗಳು ಆರಂಭಗೊಳ್ಳಲಿವೆ. ೭ಗಂಟೆಗೆ ಅನ್ವಾರುಲ್ ಹುದಾ ದವಾ ಕಾಲೇಜಿನಲ್ಲಿ ೭ ವರ್ಷಗಳ ಸಮನ್ವಯ ಶಿಕ್ಷಣ ಪೂರ್ಣಗೊಳಿಸಿ ಉನ್ನತ ಶಿಕ್ಷಣಕ್ಕೆ ತೆರಳುವ ೨೪ ಯುವ ಪಂಡಿತರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಲಿದೆ. ಸಮಸ್ತ ಮುಷಾವರ ಸದಸ್ಯ ಶೈಖುನಾ ಹಸನ್ ಉಸ್ತಾದ್ ವಯನಾಡು, ಸಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ಕಿಲ್ಲೂರ್, ಸಯ್ಯದ್ ಸಅದ್ ತಂಙಳ್ ಇರಿಕ್ಕೂರ್, ಸಯ್ಯದ್ ಫಝಲ್ ಸೀದಿ ತಂಙಳ್ ಕೊಂಡೋಟಿ, ಅಲ್ ಹಾಜ್ ಶಾದುಲಿ ಫೈಝಿ ಉಸ್ತಾದ್ (ನಾಇಬ್ ಖಾಝಿ ಕೊಡಗು), ಮೊಹಮ್ಮದ್ ಆಲಿ ಸಖಾಫಿ ಸುರಿಬೈಲು,

(ಮೊದಲ ಪುಟದಿಂದ) ಹಫೀಲ್ ಸದಿ, ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲೆಯ ಉಲಮ, ಉಮರಾ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ತಾ. ೨೫, ೨೬, ೨೭ರಂದು ವಿದ್ಯಾರ್ಥಿಗಳ ಕಲಾ ಸಾಹಿತ್ಯ ಕಲರವ ‘ಹೈಮನಾ’ ೭೦ರಷ್ಟು ವೈವಿಧ್ಯ ಸ್ಪರ್ಧೆಗಳೊಂದಿಗೆ ನಡೆಯಲಿದೆ. ಲೇಖನ, ಭಾಷಣ, ಸಾಂಸ್ಕೃತಿಕ ಸ್ಪಧೆಗಳಿರುತ್ತವೆ. ಸಮಾರೋಪ ಸಮಾರಂಭದಲ್ಲಿ ಜಿಲ್ಲೆಯ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ನಾಯಕರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ತಾ. ೨೬ರಂದು ರಾತ್ರಿ ಬೃಹತ್ ‘ಬುರ್ದಾ’ ಹಾಗೂ ಆಧ್ಯಾತ್ಮಿಕ ಮಜ್ಲೀಸ್‌ನಲ್ಲಿ ಐತಿಹಾಸಿಕ ಪ್ರವಾದಿಗಳ ಪ್ರಕೀರ್ತನೆಗಳು ನಡೆಯಲಿದ್ದು, ಸಯ್ಯದ್ ಸಮೀಹ್ ಅನ್ವಾರಿ ಅಹ್ಸನಿ,ಕಮರುದ್ದೀನ್ ಅನ್ವಾರಿ ಸಖಾಫಿ ಹಾಗೂ ಜುನೈದ್ ಅನ್ವಾರಿ ಅಹ್ಸನಿ ನೇತೃತ್ವ ವಹಿಸಲಿದ್ದಾರೆ. ತಾ. ೨೭ರಂದು ರಾತ್ರಿ ಅಸ್ಮಾಉಲ್ ಹುಸ್ನಾ ರಾತೀಬ್ ಹಾಗೂ ಪ್ರಾರ್ಥನಾ ಸಂಗಮ ನಡೆಯಲಿದ್ದು, ಸಯ್ಯದ್ ಶಾಪಿ ಬಾಅಲವಿ ವಳಪಟ್ಟನಂ ಹಾಗೂ ಸಂಸ್ಥೆಯ ಶಿಲ್ಪಿ ಶೈಖುನಾ ಅಶ್ರಫ್ ಅಹ್ಸನಿ ಉಸ್ತಾದ್ ಹಾಗೂ ಅಬೂಬಕ್ಕರ್ ಹಾಜಿ ಹಾಕತ್ತೂರು ನೇತೃತ್ವ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಅನ್ವಾರುಲ್ ಹುದಾ ಉಪನ್ಯಾಸಕ ಜುನೈದ್ ಅನ್ವಾರ್ ಅಹ್ಸನಿ, ನಹ್ದತುಸ್ಸುನ್ನಃ ಅಬ್ದುಲ್ ಹಕೀಂ ನೆಲ್ಯಹುದಿಕೇರಿ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಕಂಡಕ್ಕರೆ, ಕೋಶಾಧಿಕಾರಿ ಸಾಬಿತ್ ಅರೆಕಾಡು, ಹಾಗೂ ಶಂಶದ್ ಇದ್ದರು.