ಶ್ರೀಮಂಗಲ, ಮಾ. ೨೩: ‘ತಿಂಗಕೊರ್ ಮೊಟ್ಟ್ ತಲಕಾವೇರಿಕ್’ (ತಿಂಗಳಿಗೊAದು ಹೆಜ್ಜೆ ತಲಕಾವೇರಿಗೆ) ಎಂಬ ಸಂಕಲ್ಪ ದೊಂದಿಗೆ ಭಾಗಮಂಡಲದ ಭಗಂಡೇಶ್ವರ ಮತ್ತು ಕಾವೇರಿ ನದಿ ಉಗಮ ಸ್ಥಾನ ತಲಕಾವೇರಿಯ ಕಾವೇರಿ ಕ್ಷೇತ್ರಕ್ಕೆ ೧೫ನೇ ತಿಂಗಳ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಕೊಡವ ಜನಾಂಗದ ಕಾವೇರಿ ಮಾತೆಯ ಭಕ್ತರು ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಚೇರಂಗಾಲದಲ್ಲಿರುವ ಕಾವೇರಿ ಮಾತೆಯ ಮೂಲ ಸ್ಥಾನ ಕಾವೇರಿ ಕನ್ನಿಕುಂಡ್‌ಗೆ ತೆರಳಿ ಸಂಪ್ರದಾ ಯದಂತೆ ಒಲೆ ಹಾಕಿ ಅಡುಗೆ ಮಾಡಿ ಪಾಯಸ ನೈವೈದ್ಯ ಅರ್ಪಿಸಿದರು.