ಮಡಿಕೇರಿ, ಮಾ. ೨೨: ರಷ್ಯಾ ಹಾಗೂ ಉಕ್ರೇನ್ ರಾಷ್ಟçಗಳ ನಡುವಿನ ಯುದ್ಧದ ಪರಿಣಾಮದ ಬಿಸಿ ನೇರವಾಗಿ ಅಲ್ಲದಿದ್ದರೂ ಪರೋಕ್ಷ ವಾಗಿ ರಾಜ್ಯದ ಜನಸಾಮಾನ್ಯರ ಬದುಕಿನ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಇದೀಗ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು, ಜನರು ಹೊರೆ ಅನುಭವಿಸುವಂತಾಗಿದೆ.
ಪೆಟ್ರೋಲ್-ಡೀಸೆಲ್, ಅಡುಗೆ ಅನಿಲ ದರ ಈಗಾಗಲೇ ಏರಿಕೆಯಾಗಿದೆ. ಅಡುಗೆ ಎಣ್ಣೆ, ದಿನಸಿ, ಹಾಲು, ಹೊಟೇಲ್ ತಿಂಡಿಗಳೂ ಮುಂದಿನ ದಿನಗಳಲ್ಲಿ ತುಟ್ಟಿಯಾಗುವ ಸಾಧ್ಯತೆ ಎದುರಾಗುತ್ತಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದು ಬಹುತೇಕ ಖಚಿತವಾಗುತ್ತಿದೆ.
ಕಚ್ಚಾ ತೈಲ ಆಮದಿನ ಮೇಲಿನ ವ್ಯತಿರಿಕ್ತ ಪರಿಣಾಮದಿಂದಾಗಿ ಪೆಟ್ರೋಲ್-ಡೀಸೆಲ್ ದರದಲ್ಲಿ ಏರಿಕೆ ಕಂಡುಬAದಿದೆ. ಪ್ರಸ್ತುತ ತಾ. ೨೨ ರಿಂದ ಕೊಡಗಿನಲ್ಲಿ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ೮೦ ಪೈಸೆ ಹಾಗೂ ಡೀಸೆಲ್ ೭೩ ಪೈಸೆ ಹೆಚ್ಚಳ ವಾಗಿದೆ. ಪ್ರೀಮಿಯಮ್ ಪೆಟ್ರೋಲ್ ದರ ರೂ. ೧ ಏರಿಕೆಯಾಗಿದೆ. ಇದು ಸುಮಾರು ಏಪ್ರಿಲ್ ಅಂತ್ಯದ ತನಕವೂ ದಿನಕ್ಕೊಂದು ದರದಂತೆ ಆಗಾಗ್ಗೆ ಹಂತವಾಗಿ ಏರಿಕೆಯಾಗುವ ಸಂಭವವಿದೆ ಎನ್ನಲಾಗುತ್ತಿದೆ.
ನಿನ್ನೆ ರೂ. ೧೦೧.೯೩ ರಷ್ಟಿದ್ದ ಪೆಟ್ರೋಲ್ ದರದಲ್ಲಿ ಇಂದು ೮೦ ಪೈಸೆ ಹಾಗೂ ಡಿಸೇಲ್ ದರದಲ್ಲಿ ರೂ. ೭೩ ಪೈಸೆ, ಪ್ರೀಮಿಯಂ ಪೆಟ್ರೋಲ್ ರೂ. ೧೦೬.೩೫ ಇದ್ದದ್ದು ರೂ. ೧ಕ್ಕೆ ಏರಿಕೆಯಾಗಿದೆ. ಏಪ್ರಿಲ್ ಕೊನೆಯ ವಾರದ ವೇಳೆಗೆ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ರೂ. ೨೫ ಹಾಗೂ ಡೀಸೆಲ್ ಲೀಟರ್‌ಗೆ ರೂ. ೨೨ ರಷ್ಟು ಹೆಚ್ಚಳವಾಗಲಿದೆ. ಆದರೆ, ಇದು ಒಂದೇ ಬಾರಿಗೆ ಏರಿಕೆಯಾಗದು, ಹಂತ ಹಂತವಾಗಿ ಹೆಚ್ಚಳವಾಗಲಿರು ವುದಾಗಿ ವಿಶ್ಲೇಷಿಸಲಾಗುತ್ತಿದೆ.
ಅಡುಗೆ ಅನಿಲ ದರವೂ ಪ್ರಸ್ತುತ ಅಧಿಕವಾಗಿದೆ. ಪ್ರತಿ ಸಿಲಿಂಡರ್‌ಗೆ ಸುಮಾರು ರೂ. ೫೦ ರಷ್ಟು ಹೆಚ್ಚಳವಾಗಿದೆ. ಸಿಲಿಂಡರ್‌ಗೆ ರೂ. ೯೨೦ ದರ ಇದ್ದದ್ದು ಇದೀಗ ರೂ. ೯೬೭ಕ್ಕೆ ಏರಿದೆ. ಮುಂದಿನ ದಿನದಲ್ಲಿ ಇದು ಇನ್ನಷ್ಟು ದುಬಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.
ಸೂರ್ಯಕಾಂತಿ ಅಡುಗೆ ಎಣ್ಣೆ, ಗೋಧಿ ಫಾಮ್ ಆಯಿಲ್, ಶೇಂಗಾ ಎಣ್ಣೆಯಂತಹ ಪದಾರ್ಥಗಳ ದರವೂ ಹೆಚ್ಚಳವಾಗಿದೆ. ಮುಂದಿನ ತಿಂಗಳು ರಾಜ್ಯದಲ್ಲಿ ಹಾಲಿನ ದರವೂ ಲೀಟರ್‌ಗೆ ರೂ. ೨ ಪರಿಷ್ಕರಣೆಯಾಗಲಿದೆ ಎನ್ನಲಾಗುತ್ತಿದ್ದು, ಒಟ್ಟಾರೆಯಾಗಿ ಜನಸಾಮಾನ್ಯರ ಬದುಕು ಮತ್ತೆ ದುಸ್ತರವಾಗುತ್ತಿದೆ.