ಮಡಿಕೇರಿ, ಮಾ. ೨೨: ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ವೀರಾಜಪೇಟೆ ತಾಲೂಕು ಕಂಡAಗಾಲದ ಬಿ.ಯು. ಸೋಮಯ್ಯ ಅವರು ಅಕ್ರಮವಾಗಿ ಮಾರಾಟದ ಉದ್ದೇಶದಿಂದ ಇರಿಸಿದ್ದ ೧೦ ಸಾವಿರ ಲೀಟರ್ ಮದ್ಯ ಹಾಗೂ ೨,೪೭೫ ಲೀ ಬಿಯರ್ ಅನ್ನು ವಶಪಡಿಸಿಕೊಂಡ ಅಬಕಾರಿ ಇಲಾಖೆ ಮುಂದಿನ ಕ್ರಮ ಕೈಗೊಂಡಿದೆ.

ಅಬಕಾರಿ ಉಪ ಅಧೀಕ್ಷಕ ನಟರಾಜಯ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕ ಸತ್ಯಪ್ರಕಾಶ್, ಉಪನಿರೀಕ್ಷಕ ಮೋಹನ್, ಪೇದೆಗಳಾದ ಸಂತೋಷ್, ಮದನಕುಮಾರ್ ಇದ್ದರು.