ಮಡಿಕೇರಿ, ಮಾ. ೨೩: ಮಾಸ್ ಮೀಡಿಯಾ ಫೌಂಡೇಶನ್ ಹಾಗೂ “ಈ ದಿನ ಡಾಟ್ ಕಾಮ್” ವತಿಯಿಂದ ಶನಿವಾರಸಂತೆಯಲ್ಲಿ ಸೋಮವಾರಪೇಟೆ ತಾಲೂಕು ಮಟ್ಟದ ಜನಧ್ವನಿಯೇ ಮುಖ್ಯ ವಾಹಿನಿ ಕಾರ್ಯಾಗಾರ ನಡೆಯಿತು.

ಮಹಿಳಾ ಸಮಾಜದಲ್ಲಿ ನಡೆದ ಕಾರ್ಯಾಗಾರವನ್ನು ಯುವ ವೀರಶೈವ ಮುಖಂಡ ಬಿ.ಎಸ್.ಅನಂತ್ ಕುಮಾರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಮಾಧ್ಯಮಗಳು ಸಾಮಾಜಿಕ ಕಳಕಳಿಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಶ್ಲಾಘಿಸಿದರು.

ಮಾಸ್ ಮೀಡಿಯಾ ಫೌಂಡೇಶನ್‌ನ ಮೈಸೂರು ವಿಭಾಗದ ವ್ಯವಸ್ಥಾಪಕ ಮೋಹನ್ ಅವರು ತರಬೇತಿ ನೀಡಿ ಇಂದಿನ ಮಾಧ್ಯಮ ಜಗತ್ತಿನ ಬಗ್ಗೆ ವಿವರಿಸಿದರು ಮತ್ತು ಹಲವು ಸಲಹೆಗಳನ್ನು ನೀಡಿದರು.

ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ಅಧ್ಯಕ್ಷ ಜೆ.ಎಲ್. ಜನಾರ್ಧನ ಮಾತನಾಡಿದರು.

ಪ್ರಧಾನ ಕಾರ್ಯದರ್ಶಿ ವೀರೇಂದ್ರ, ಸಂಯೋಜಕ ಜಗದೀಶ್, ಕಾರ್ಯದರ್ಶಿ ಸಂದೀಪ್, ಖಜಾಂಚಿ ಕೆ.ಎನ್.ಹೂವಯ್ಯ, ಸಹ ಕಾರ್ಯದರ್ಶಿಗಳಾದ ಇಂದ್ರೇಶ್, ಹೋಬಳಿ ಅಧ್ಯಕ್ಷ ವೀರಭದ್ರ, ಉಮೇಶ್, ಪಾಪು, ವಿಜಯ್, ಗಿರೀಶ್, ಸುನಂದ, ಮಹೇಶ, ಸುದೀಪ್ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.