ಮಡಿಕೇರಿ, ಮಾ. ೨೩: ಕೊಡಗು ಜಿಲ್ಲೆಯಲ್ಲಿ ಈಗಾಗಲೇ ೭೪ ಗ್ರಾಮ ಪಂಚಾಯತ್ಗಳಲ್ಲಿ ಗ್ರಾಮ ಒನ್ ಯೋಜನೆಯನ್ನು ಯಶಸ್ವಿಯಾಗಿ ಪ್ರಾರಂಭಿಸಲಾಗಿದ್ದು, ಉಳಿದಂತೆ ೧೭ ಗ್ರಾಮ ಪಂಚಾಯತ್ಗಳಲ್ಲಿ ಸಮಗ್ರ ನಾಗರಿಕ ಸೇವಾ ಕೇಂದ್ರ ‘ಗ್ರಾಮ ಒನ್’ ಆರಂಭಿಸಲು ಆಸಕ್ತ ಪ್ರಾಂಚೈಸಿಗಳಿAದ ಅರ್ಜಿ ಆಹ್ವಾನಿಸಲಾಗಿದೆ.
ಮಡಿಕೇರಿ ತಾಲೂಕಿನ ಸಂಪಾಜೆ ಹೋಬಳಿಯ ಹಾಕತ್ತೂರು ಗ್ರಾ.ಪಂ., ಭಾಗಮಂಡಲ ಹೋಬಳಿಯ ಬೆಟ್ಟಗೇರಿ ಮತ್ತು ಕರಿಕೆ ಗ್ರಾ.ಪಂ. ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿಯ ದೊಡ್ಮಲ್ತೆ ಗ್ರಾ.ಪಂ., ಶಾಂತಳ್ಳಿ ಹೋಬಳಿಯ ಬೆಟ್ಟದಳ್ಳಿ ಗ್ರಾ.ಪಂ., ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಹೋಬಳಿಯ ಗರ್ವಾಲೆ, ಕೆದಕಲ್ ಮತ್ತು ಹರದೂರು ಗ್ರಾ.ಪಂ., ಕುಶಾಲನಗರ ಹೋಬಳಿಯ ಕೂಡುಮಂಗಳೂರು ಗ್ರಾ.ಪಂ., ವೀರಾಜಪೇಟೆ ತಾಲೂಕಿನ ಅಮ್ಮತ್ತಿ ಹೋಬಳಿಯ ಮಾಲ್ದಾರೆ ಗ್ರಾ.ಪಂ., ಪೊನ್ನಂಪೇಟೆ ತಾಲೂಕಿನ ಪೊನ್ನಂಪೇಟೆ ಹೋಬಳಿಯ ಹಾತೂರು, ಮಾಯಾಮುಡಿ, ಬಾಳೆಲೆ ಹೋಬಳಿಯ ನಿಟ್ಟೂರು ಮತ್ತು ಪೊನ್ನಪ್ಪಸಂತೆ, ಹುದಿಕೇರಿ ಹೋಬಳಿಯ ಬಲ್ಯಮುಂಡೂರು, ಬಿರುನಾಣಿ, ಶ್ರೀಮಂಗಲ ಹೋಬಳಿಯ ಕೆ.ಬಾಡಗ.
ಆಸಕ್ತ ಪ್ರಾಂಚೈಸೀಸ್ಗಳು hಣಣಠಿs://ತಿತಿತಿ.ಞಚಿಡಿಟಿಚಿಣಚಿಞಚಿoಟಿe. gov.iಟಿ/Pubಟiಛಿ/ಉಡಿಚಿmಔಟಿeಈಡಿಚಿಟಿಛಿhisee ಖಿeಡಿms ಲಿಂಕ್ನ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಕುಮಾರಿ ಪ್ರಿಯಾಂಕ ಕೆ.ಎಸ್., ಜಿಲ್ಲಾ ಪ್ರಾಜೆಕ್ಟ್ ಮ್ಯಾನೇಜರ್, ಜಿಲ್ಲಾಧಿಕಾರಿ ಅವರ ಕಚೇರಿ ದೂ.ಸಂ.೮೮೬೧೬೮೨೧೨೦ ನ್ನು ಸಂಪರ್ಕಿಸಬಹುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುAಡೇಗೌಡ ಅವರು ತಿಳಿಸಿದ್ದಾರೆ.
 
						