ಮಡಿಕೇರಿ, ಮಾ. ೨೩: ಬೆಂಗಳೂರಿನಿAದ ಕಾರಿನಲ್ಲಿ ಪ್ರಯಾಣಿಕರನ್ನು ಕರೆತಂದು ಬಳಿಕ ಅವರನ್ನು ಬಿಟ್ಟು ಮಡಿಕೇರಿಯಿಂದ ಬೆಂಗಳೂರಿಗೆ ಹೋಗುವ ಪ್ರಯಾಣಿಕರನ್ನು ಕಡಿಮೆ ಬಾಡಿಗೆಯಲ್ಲಿ ಕರೆದುಕೊಂಡು ಹೋಗುತ್ತಿದ್ದ ಚಾಲಕನ ವಿರುದ್ಧ ಸ್ಥಳೀಯ ಚಾಲಕರು ಆಕ್ರೋಶ ವ್ಯಕ್ತಪಡಿಸಿದರು.

ಆ್ಯಪ್ ಮೂಲಕ ಸ್ಥಳೀಯ ಚಾಲಕನೋರ್ವನ ಸಹಾಯದಿಂದ ಪ್ರಯಾಣಿಕರನ್ನು ಕಡಿಮೆ ದರದಲ್ಲಿ ಕರೆದುಕೊಂಡು ಹೋಗಲಾಗುತ್ತದೆ. ಇದರಿಂದ ಸ್ಥಳೀಯ ಚಾಲಕರು ಪರದಾಡುವಂತಾಗಿದೆ ಎಂದು ಆರೋಪಿಸಿ ಬೆಂಗಳೂರಿನ ಚಾಲಕ ರಾಜೇಶ್ ಎಂಬಾತನನ್ನು ನಗರದ ಚಾಲಕರುಗಳು ತರಾಟೆಗೆ ತೆಗೆದುಕೊಂಡು ಬಳಿಕ ಪೊಲೀಸರಿಗೆ ಒಪ್ಪಿಸಲಾಯಿತು. ಈ ಸಂಬAಧ ನಗರ ಠಾಣೆ ಎದುರು ತಳ್ಳಾಟ ನೂಕಾಟ ನಡೆದಿದೆ.