ಸೋಮವಾರಪೇಟೆ,ಮಾ.೨೧: ಲೋಕೋಪಯೋಗಿ ಇಲಾಖೆಗೆ ಒಳಪಟ್ಟ ಜಿಲ್ಲೆಯ ಪ್ರಮುಖ ರಸ್ತೆಗಳ ಬಗ್ಗೆ ವಿಧಾನ ಸಭಾ ಅಧಿವೇಶನದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಪ್ರಶ್ನೆಗಳನ್ನು ಕೇಳಿದ್ದು, ಲೋಕೋಪಯೋಗಿ ಇಲಾಖಾ ಸಚಿವರು ನೀಡಿದ ಉತ್ತರದಿಂದ ಕೊಡಗಿನ ಜನತೆಗೆ ಸಮಾಧಾನದ ಬದಲಿಗೆ, ಆತಂಕವನ್ನು ತಂದಿದೆ.
ಈಗಾಗಲೇ ಕಸ್ತೂರಿರಂಗನ್ ವರದಿ ಅನುಷ್ಠಾನ ವಿರುದ್ಧ ಹೋರಾಟಗಳು ನಡೆದಿರುವ ಕೊಡಗಿನಲ್ಲಿ ಇದೀಗ ಸೂಕ್ಷö್ಮ ಪರಿಸರ ವಲಯ ಘೋಷಣೆಗಳು ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಯಾಗುತ್ತಿರುವ ಬಗ್ಗೆ ಆತಂಕ ಮೂಡುವಂತಾಗಿದೆ.
ಮಾಗಡಿ-ಸೋಮವಾರಪೇಟೆ ರಸ್ತೆಯು ಜಿಲ್ಲೆಯ ಹೊರಭಾಗದಲ್ಲಿ ಬಿರುಸಿನಿಂದ ನಡೆಯುತ್ತಿದ್ದರೆ ಕೊಡಗು ಪ್ರವೇಶಕ್ಕೆ ಮಾತ್ರ ಇಕೋ ಸೆನ್ಸಿಟಿವ್ ಜೋನ್ ಅಡ್ಡಿಯಾಗಿದೆ. ಸ್ವತಃ ಲೋಕೋಪಯೋಗಿ ಇಲಾಖಾ ಸಚಿವ ಸಿ.ಸಿ. ಪಾಟೀಲ್ ಅವರೇ ಈ ಬಗ್ಗೆ ಸದನದಲ್ಲಿ ಉತ್ತರಿಸಿದ್ದು, ೧೪ ಕಿ.ಮೀ. ರಸ್ತೆ ನಿರ್ಮಾಣ ಅಸಾಧ್ಯ ವಾಗಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ.
ಮಾಗಡಿ-ಸೋಮವಾರಪೇಟೆ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಿ ಕಾಮಗಾರಿ ಕೈಗೊಳ್ಳಲು ಅನುದಾನ ಮಂಜೂರಾಗಿದ್ದು, ಪ್ರಸ್ತುತ ಯಾವ ಹಂತದಲ್ಲಿದೆ? ಸೋಮವಾರಪೇಟೆ ಯವರೆಗೆ ರಸ್ತೆಯನ್ನು ವಿಸ್ತರಿಸಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ಕೇಳಿದ ಪ್ರಶ್ನೆಗೆ ಲೋಕೋಪಯೋಗಿ ಇಲಾಖಾ ಸಚಿವರು ವಿಸ್ತೃತ ಉತ್ತರ ನೀಡಿದ್ದಾರೆ.
ಕಳೆದ ೨೦೧೭ರಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ-೩ (ಕೆಶಿಪ್-೩) ಅಡಿಯಲ್ಲಿ ಏಷಿಯನ್ ಅಭಿವೃದ್ಧಿ ಬ್ಯಾಂಕ್ ನೆರವಿನಲ್ಲಿ ರಾಜ್ಯ ಹೆದ್ದಾರಿ ೮೫ರ ೧೬೬ ಕಿ.ಮೀ. ಉದ್ದದ ಮಾಗಡಿ-ಸೋಮವಾರಪೇಟೆ ರಸ್ತೆಯನ್ನು ಅಭಿವೃದ್ಧಿ ಪಡಿಸಲು ೧೧೪೫.೫೦ ಕೋಟಿ ವೆಚ್ಚದ ಯೋಜನೆಯನ್ನು ತಯಾರಿಸಿದ್ದು, ಖಾಸಗಿ ಕಂಪೆನಿಯವರು ೯೯೮ ಕೋಟಿಗೆ ಟೆಂಡರ್ ಪಡೆದಿದ್ದಾರೆ. ಜಿಲ್ಲೆಗೆ ಒತ್ತಿಕೊಂಡಿರುವ ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದಲ್ಲಿ ಕಾಮಗಾರಿ ಈಗಾಗಲೇ ನಡೆಯುತ್ತಿದ್ದು, ಕೆಲವೆಡೆ ಮುಕ್ತಾಯಗೊಂಡಿದೆ. ಆದರೆ ಈ ರಸ್ತೆ ಸೋಮವಾರಪೇಟೆಗೆ ಸಂಪರ್ಕ ಸಾಧಿಸಲು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷö್ಮ ವಲಯ ಘೋಷಣೆ ಅಡ್ಡಿಯಾಗಿದೆ.
ಬೆಂಗಳೂರು-ಜಾಲ್ಸೂರು ರಾಜ್ಯ ಹೆದ್ದಾರಿ-೮೫ರ ಭಾಗವಾಗಿರುವ ಮಾಗಡಿ-ಸೋಮವಾರಪೇಟೆ ರಸ್ತೆಯನ್ನು
(ಮೊದಲ ಪುಟದಿಂದ) ಅಭಿವೃದ್ಧಿ ಪಡಿಸಲು ವಿವರವಾದ ಯೋಜನಾ ವರದಿಯನ್ನು ೨೦೧೫ರಲ್ಲಿ ಸಿದ್ಧಪಡಿಸಿದ್ದು, ಯೋಜನಾ ವರದಿಯ ಅನುಸಾರ ಹಾಸನ ಗಡಿ ಭಾಗದಿಂದ ಸೋಮವಾರಪೇಟೆವರೆಗಿನ ಮುಂದುವರೆದ ಭಾಗವು (೧೩.೯೪ ಕಿ.ಮೀ) ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷö್ಮ ವಲಯದಲ್ಲಿ ಬರುತ್ತಿರುವುದ ರಿಂದ ಸದರಿ ಭಾಗವನ್ನು ಕೈಬಿಟ್ಟು ಮಾಗಡಿಯಿಂದ ಸೋಮವಾರಪೇಟೆ ತಾಲೂಕು ಗಡಿವರೆಗೆ ಮಾತ್ರ ರಸ್ತೆ ಕಾಮಗಾರಿ ಕೈಗೊಳ್ಳಲು ಉದ್ದೇಶಿಸ ಲಾಗಿದೆ ಎಂದು ಲೋಕೋಪಯೋಗಿ ಇಲಾಖಾ ಸಚಿವರು ಉತ್ತರ ನೀಡಿದ್ದಾರೆ.
ರಸ್ತೆಯಿಂದ ಸೋಮವಾರಪೇಟೆ-ಬೆಂಗಳೂರು ಸಂಪರ್ಕದಲ್ಲಿ ೨೫ ಕಿ.ಮೀ. ಉಳಿತಾಯವಾಗಲಿದೆ. ಹಾಸನ ಗಡಿಯಿಂದ ಸೋಮವಾರಪೇಟೆ ಸಂಪರ್ಕದ ೧೪ ಕಿ.ಮೀ. ಪ್ರದೇಶ ಪರಿಸರ ಸೂಕ್ಷö್ಮ ವಲಯಕ್ಕೆ ಸೇರ್ಪಡೆಗೊಂಡಿದೆಯೇ? ಈ ಬಗ್ಗೆ ಅರಣ್ಯ ಇಲಾಖೆಯಿಂದ ಯಾವ ಕ್ರಮ ವಹಿಸಲಾಗಿದೆ? ರಸ್ತೆ ನಿರ್ಮಾಣಕ್ಕೆ ಅನುಮತಿಗಾಗಿ ಪತ್ರ ಬರೆಯಲಾಗಿದೆಯೇ? ಉದ್ದೇಶಿತ ರಸ್ತೆಯನ್ನು ಸೋಮವಾರಪೇಟೆ ಪಟ್ಟಣಕ್ಕೆ ಸಂಪರ್ಕ ಕಲ್ಪಿಸಲು ಕ್ರಮಕೈಗೊಳ್ಳಿ ಎಂದು ಸದನದಲ್ಲಿ ಶಾಸಕರು ಹೇಳಿದರು.
ಇದಕ್ಕೆ ಉತ್ತರಿಸಿದ ಸಚಿವರು, ಪ್ರಗತಿಯಲ್ಲಿರುವ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಸೂಚಿಸಲಾಗಿದೆ. ಪರಿಸರ ಸೂಕ್ಷö್ಮ ವಲಯದಲ್ಲಿ ಉದ್ದೇಶಿತ ಈ ರಸ್ತೆ ನಿರ್ಮಾಣಕ್ಕೆ ಅವಕಾಶವಿಲ್ಲ. ಇದು ಕೇವಲ ಮಡಿಕೇರಿ, ಕರ್ನಾಟಕದ್ದು ಮಾತ್ರವಲ್ಲ; ಇಡೀ ದೇಶಕ್ಕೆ ಅನ್ವಯ ಆಗುತ್ತದೆ. ಆದರೂ ತಾವುಗಳು ಪ್ರಯತ್ನಿಸುವುದಾಗಿ (ಟ್ರೆöÊಯಿಂಗ್ ಮೈ ಲೆವೆಲ್ ಬೆಸ್ಟ್) ಭರವಸೆ ನೀಡಿದರು.
ಇನ್ನು ಚನ್ನರಾಯಪಟ್ಟಣ-(ಮೊದಲ ಪುಟದಿಂದ) ಅಭಿವೃದ್ಧಿ ಪಡಿಸಲು ವಿವರವಾದ ಯೋಜನಾ ವರದಿಯನ್ನು ೨೦೧೫ರಲ್ಲಿ ಸಿದ್ಧಪಡಿಸಿದ್ದು, ಯೋಜನಾ ವರದಿಯ ಅನುಸಾರ ಹಾಸನ ಗಡಿ ಭಾಗದಿಂದ ಸೋಮವಾರಪೇಟೆವರೆಗಿನ ಮುಂದುವರೆದ ಭಾಗವು (೧೩.೯೪ ಕಿ.ಮೀ) ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷö್ಮ ವಲಯದಲ್ಲಿ ಬರುತ್ತಿರುವುದ ರಿಂದ ಸದರಿ ಭಾಗವನ್ನು ಕೈಬಿಟ್ಟು ಮಾಗಡಿಯಿಂದ ಸೋಮವಾರಪೇಟೆ ತಾಲೂಕು ಗಡಿವರೆಗೆ ಮಾತ್ರ ರಸ್ತೆ ಕಾಮಗಾರಿ ಕೈಗೊಳ್ಳಲು ಉದ್ದೇಶಿಸ ಲಾಗಿದೆ ಎಂದು ಲೋಕೋಪಯೋಗಿ ಇಲಾಖಾ ಸಚಿವರು ಉತ್ತರ ನೀಡಿದ್ದಾರೆ.
ರಸ್ತೆಯಿಂದ ಸೋಮವಾರಪೇಟೆ-ಬೆಂಗಳೂರು ಸಂಪರ್ಕದಲ್ಲಿ ೨೫ ಕಿ.ಮೀ. ಉಳಿತಾಯವಾಗಲಿದೆ. ಹಾಸನ ಗಡಿಯಿಂದ ಸೋಮವಾರಪೇಟೆ ಸಂಪರ್ಕದ ೧೪ ಕಿ.ಮೀ. ಪ್ರದೇಶ ಪರಿಸರ ಸೂಕ್ಷö್ಮ ವಲಯಕ್ಕೆ ಸೇರ್ಪಡೆಗೊಂಡಿದೆಯೇ? ಈ ಬಗ್ಗೆ ಅರಣ್ಯ ಇಲಾಖೆಯಿಂದ ಯಾವ ಕ್ರಮ ವಹಿಸಲಾಗಿದೆ? ರಸ್ತೆ ನಿರ್ಮಾಣಕ್ಕೆ ಅನುಮತಿಗಾಗಿ ಪತ್ರ ಬರೆಯಲಾಗಿದೆಯೇ? ಉದ್ದೇಶಿತ ರಸ್ತೆಯನ್ನು ಸೋಮವಾರಪೇಟೆ ಪಟ್ಟಣಕ್ಕೆ ಸಂಪರ್ಕ ಕಲ್ಪಿಸಲು ಕ್ರಮಕೈಗೊಳ್ಳಿ ಎಂದು ಸದನದಲ್ಲಿ ಶಾಸಕರು ಹೇಳಿದರು.
ಇದಕ್ಕೆ ಉತ್ತರಿಸಿದ ಸಚಿವರು, ಪ್ರಗತಿಯಲ್ಲಿರುವ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಸೂಚಿಸಲಾಗಿದೆ. ಪರಿಸರ ಸೂಕ್ಷö್ಮ ವಲಯದಲ್ಲಿ ಉದ್ದೇಶಿತ ಈ ರಸ್ತೆ ನಿರ್ಮಾಣಕ್ಕೆ ಅವಕಾಶವಿಲ್ಲ. ಇದು ಕೇವಲ ಮಡಿಕೇರಿ, ಕರ್ನಾಟಕದ್ದು ಮಾತ್ರವಲ್ಲ; ಇಡೀ ದೇಶಕ್ಕೆ ಅನ್ವಯ ಆಗುತ್ತದೆ. ಆದರೂ ತಾವುಗಳು ಪ್ರಯತ್ನಿಸುವುದಾಗಿ (ಟ್ರೆöÊಯಿಂಗ್ ಮೈ ಲೆವೆಲ್ ಬೆಸ್ಟ್) ಭರವಸೆ ನೀಡಿದರು.
ಇನ್ನು ಚನ್ನರಾಯಪಟ್ಟಣ-ಮಂತ್ರಾಲಯ ಇವರ ಪತ್ರದ ಆಧಾರದ ಮೇಲೆ ೨೦೧೬ರಲ್ಲಿ ತಾತ್ವಿಕವಾಗಿ ರಾಷ್ಟಿçÃಯ ಹೆದ್ದಾರಿಯನ್ನಾಗಿ ಘೋಷಿಸಿದ್ದು, ವಿಸ್ತೃತ ಯೋಜನಾ ವರದಿಯ ಆಧಾರದ ಮೇಲೆ ರಾಷ್ಟಿçÃಯ ಹೆದ್ದಾರಿಯನ್ನಾಗಿ ಘೋಷಿಸುವುದಾಗಿ ತಿಳಿಸಲಾಗಿದೆ.
ಅದರಂತೆ ವಿಸ್ತೃತ ಯೋಜನಾ ವರದಿ ತಯಾರಿಕೆಗೆ ಸಣ್ಣ ಕಂಪೆನಿಗೆ ಯೋಜನಾ ವರದಿ ತಯಾರಿಕೆಗೆ ೪.೬೮ ಕೋಟಿಗಳ ಮೊತ್ತಕ್ಕೆ ಟೆಂಡರ್ ಆಧಾರದ ಮೇಲೆ ನೀಡಿದ್ದು, ಅಲೈನ್‌ಮೆಂಟ್ ರಿಪೋರ್ಟ್ನ್ನು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿಗಳ ಮಂತ್ರಾಲಯದ ಅನುಮೋದನೆಗೆ ೧೬.೦೧.೨೦೧೯ರಂದು ಪತ್ರ ಸಲ್ಲಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರದಿಂದ ತಾ. ೨೮.೭.೨೦೨೦ರ ಪತ್ರದಲ್ಲಿ ಈಗಾಗಲೇ ತಾತ್ವಿಕವಾಗಿ ಅನುಮೋದನೆಗೊಂಡ ಪ್ರಸ್ತಾವನೆಗಳನ್ನು ಯಥಾ ಸ್ಥಿತಿಯಲ್ಲಿ ಪೂರ್ವ ಮುಕ್ತಾಯಗೊಳಿಸಲು ಸೂಚಿಸಿದ್ದು, ಅದರಂತೆ ಕ್ರಮ ವಹಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಉತ್ತರಿಸಿದ್ದಾರೆ.
ಈ ಸಂದರ್ಭ ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ ಅವರೂ ಸಹ ಚರ್ಚೆಯಲ್ಲಿ ಭಾಗಿಯಾಗಿದ್ದು, ಕೇಂದ್ರದ ಮೇಲೆ ಒತ್ತಡ ಹಾಕುವಂತೆ ಶಾಸಕ ರಂಜನ್ ಹಾಗೂ ಸಚಿವರಿಗೆ ಮನವಿ ಮಾಡಿದರು. ಪೂರ್ವ ಮುಕ್ತಾಯಗೊಂಡಿರುವ ಪ್ರಸ್ತಾವನೆಯನ್ನು ಪುನರ್ ಪರಿಶೀಲಿಸಿ, ರಸ್ತೆಯನ್ನು ಮೇಲ್ದರ್ಜೆಗೇರಿಸಲು ಕ್ರಮಕೈಗೊಳ್ಳುವಂತೆ ತಿಳಿಸಿದರು. ಕೆಶಿಫ್-೪ರಲ್ಲಿ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಲೋಕೋಪಯೋಗಿ ಇಲಾಖಾ ಸಚಿವರು ಉತ್ತರಿಸಿದರು.