ಬೆಂಗಳೂರು, ಮಾ. ೨೨: ಕಾಫಿ ಬೆಳೆಗಾರರಿಗೆ ೧೦ ಹೆಚ್‌ಪಿವರೆಗೆ ಉಚಿತವಾಗಿ ವಿದ್ಯುತ್ ನೀಡುವಂತೆ ಬೆಳೆಗಾರರ ಸಂಘಟನೆಗಳಿAದ ಜಿಲ್ಲೆಯಲ್ಲಿ ಆಗಿಂದಾಗ್ಗೆ ಹೋರಾಟಗಳು ನಡೆಯುತ್ತಿರುವ ಬೆನ್ನಲ್ಲೇ ವಿಧಾನ ಸಭೆಯಲ್ಲಿಂದು ಈ ವಿಚಾರ ಪ್ರಸ್ತಾಪಗೊಂಡಿದ್ದು, ಕಾಫಿ ಬೆಳೆಗಾರರಿಗೆ ೧೦ ಹೆಚ್.ಪಿ.ವರೆಗೆ ಉಚಿತ ವಿದ್ಯುತ್ ನೀಡಲು ಸರ್ಕಾರ ಸಿದ್ಧವಿದೆ ಎಂದು ಘೋಷಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಯೋಜನೆ ದುರುಪಯೋಗವಾಗಬಾರದು ಎಂಬ ಕಾರಣಕ್ಕೆ ಕೆಲವೊಂದು ನಿಯಮಗಳನ್ನು ಸರ್ಕಾರ ವಿಧಿಸಲಿದ್ದು, ಇದಕ್ಕೆ ಕಾಫಿ ನಾಡಿನ ಶಾಸಕರುಗಳು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ವಿಧಾನ ಸಭೆಯಲ್ಲಿಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಶೂನ್ಯ ವೇಳೆಯಲ್ಲಿ ಕಾಫಿ ಬೆಳೆಗಾರರ ೧೦ ಹೆಚ್‌ಪಿವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ಸಂಬAಧ ಚರ್ಚೆಗೆ ಅವಕಾಶ ಕೋರಿದ್ದರು. ಸಿದ್ಧವಿದೆ ಎಂದು ಘೋಷಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಯೋಜನೆ ದುರುಪಯೋಗವಾಗಬಾರದು ಎಂಬ ಕಾರಣಕ್ಕೆ ಕೆಲವೊಂದು ನಿಯಮಗಳನ್ನು ಸರ್ಕಾರ ವಿಧಿಸಲಿದ್ದು, ಇದಕ್ಕೆ ಕಾಫಿ ನಾಡಿನ ಶಾಸಕರುಗಳು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ವಿಧಾನ ಸಭೆಯಲ್ಲಿಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಶೂನ್ಯ ವೇಳೆಯಲ್ಲಿ ಕಾಫಿ ಬೆಳೆಗಾರರ ೧೦ ಹೆಚ್‌ಪಿವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ಸಂಬAಧ ಚರ್ಚೆಗೆ ಅವಕಾಶ ಕೋರಿದ್ದರು. ಮಾಡುತ್ತಾರೆ. ಅವರಿಗೆ ಮಾತ್ರ ಸರ್ಕಾರದಿಂದ ಶುಲ್ಕ ವಿಧಿಸ ಲಾಗುತ್ತಿದ್ದು, ಎರಡು ವರ್ಷಗಳಿಂದ ಸುಮಾರು ೨೮ ಕೋಟಿಯಷ್ಟು ಬಾಕಿಯಿದ್ದು,

(ಮೊದಲ ಪುಟದಿಂದ) ನಿರಂತರವಾಗಿ ವಿದ್ಯುತ್ ಕಡಿತಗೊಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಈ ಸಂದರ್ಭ ಧರಣಿಗಳೂ ನಡೆಯುತ್ತಿವೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಬಜೆಟ್‌ನಲ್ಲಿ ಐಪಿ ಸೆಟ್ ಬಳಸುವ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ಕೊಡುವ ಬಗ್ಗೆ ಘೋಷಣೆ ಮಾಡಲಾಗಿತ್ತು. ಆದರೆ ಇವತ್ತಿನವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.

ಕಾಫಿ ಬೆಳೆಗಾರರು ಪರಿಸರಕ್ಕೆ ಬಹಳಷ್ಟು ದೊಡ್ಡ ಕೊಡುಗೆಯನ್ನು ಕೊಡುತ್ತಿದ್ದಾರೆ. ಪ್ರಸ್ತುತ ನಿಷೇಧ ಮಾಡುವ ಹಂತದಲ್ಲಿರುವ ತಂಬಾಕುವಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ; ಅಡಿಕೆಗೂ ನೀಡಲಾಗುತ್ತಿದೆ. ಆದರೆ ಕಾಫಿ ಬೆಳೆಗಾರರು ಏನು ಅನ್ಯಾಯ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಕೊಡಗಿನಲ್ಲಿ ಹೆಚ್ಚು ಮಳೆಯಾಗಿ ೩೫೦ ಟಿಎಂಸಿಗಿAತ ಹೆಚ್ಚು ನೀರು ಕೊಡಗಿನಿಂದ ಸಿಗುತ್ತಿದೆ. ಹೀಗಿರುವಾಗ ಕೊಡಗಿಗೇಕೆ ತಾರತಮ್ಯ ಮಾಡಲಾಗುತ್ತಿದೆ. ಕಾಫಿ ಬೆಳೆಗಾರರಿಗೂ ಉಚಿತ ವಿದ್ಯುತ್ ನೀಡುವಂತಾಗಬೇಕೆAದು ಒತ್ತಾಯಿಸಿದರು.

ಶಾಸಕ ಸಿ.ಟಿ. ರವಿ ಅವರು ಮಾತನಾಡಿ, ಕಾಫಿ ಬೆಳೆಗಾರರಿಗೆ ಬಹಳ ವರ್ಷದಿಂದ ಈ ವಿಚಾರದಲ್ಲಿ ಅನ್ಯಾಯವಾಗುತ್ತಿದೆ. ಬೆಳೆಗಾರರಲ್ಲಿ ಏಕೆ ತಾರತಮ್ಯ ಮಾಡಲಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಆ ತಾರತಮ್ಯವನ್ನು ಸರಿಪಡಿಸಬೇಕು. ಕಾಫಿ ಬೆಳೆಗಾರರು ಶ್ರೀಮಂತರು ಎಂಬ ಕಾಲವೊಂದಿತ್ತು. ಆದರೆ ಪ್ರಸ್ತುತ ಪರಿಸ್ಥಿತಿ ಹಾಗಿಲ್ಲ. ಕಾಫಿ ಬೆಳೆಗಾರರು ಸಾಲಗಾರರಾಗಿದ್ದಾರೆ. ಆದ್ದರಿಂದ ವಿದ್ಯುತ್ ವಿಚಾರದಲ್ಲಿನ ಅನ್ಯಾಯವನ್ನು ಮುಖ್ಯಮಂತ್ರಿಗಳು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಶಾಸಕ ಕುಮಾರಸ್ವಾಮಿ ಮಾತನಾಡಿ, ಕಾಫಿಯಿಂದ ೫ ಸಾವಿರ ಕೋಟಿ ವಿದೇಶ ವಿನಿಮಯವಿದೆ. ೨೫ ಲಕ್ಷ ಜನರಿಗೆ ಈ ಉದ್ಯಮದಿಂದ ಉದ್ಯೋಗ ನೀಡಲಾಗುತ್ತಿದೆ. ಆದರೆ ಮಳೆ ಕೊರತೆ, ಕೆರೆ, ಹೊಳೆ ಇಲ್ಲದೆ ತೊಂದರೆಯಾಗುತ್ತದೆ. ಆದ್ದರಿಂದ ದಯಮಾಡಿ ಉಚಿತ ವಿದ್ಯುತ್ ಬಳಕೆಗೆ ಅವಕಾಶ ನೀಡಬೇಕು ಎಂದು ಕೋರಿದರು.

ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕಾಫಿ ಬೆಳೆಗಾರರು ಸ್ಪಿಂಕ್ಲರ್ ಮಾಡುವುದಕ್ಕಾಗಿ ೨ ತಿಂಗಳು ಮಾತ್ರ ಐಪಿ ಸೆಟ್ ಬಳಸುತ್ತಾರೆ. ಒಂದು ವೇಳೆ ಮಳೆ ಬಂದರೆ ಅದನ್ನು ಬಳಸುವುದಿಲ್ಲ. ಆದರೆ ೧೨ ತಿಂಗಳು ಅದಕ್ಕೆ ಕನಿಷ್ಟ ಶುಲ್ಕ ಕಟ್ಟುವುದೆ ವಿದ್ಯುತ್ ಶುಲ್ಕಕ್ಕಿಂತ ಜಾಸ್ತಿಯಾಗುತ್ತಿದೆ. ದಯವಿಟ್ಟು ಕನಿಷ್ಟ ದರವನ್ನು ಕಡಿಮೆ ಮಾಡಬೇಕು. ವಾಣಿಜ್ಯ ದರಗಳನ್ನು ವಿಧಿಸಬಾರದು; ವಾಣಿಜ್ಯ ಬೆಳೆ ಅಂತ ಇದ್ದರೂ ಕೂಡ ಕೃಷಿ ಆದಾಯ ತೆರಿಗೆಯಲ್ಲಿ ೫೦ ಎಕರೆವರೆಗೆ ಆದಾಯ ತೆರಿಗೆ ವಿನಾಯಿತಿ ನೀಡಲಾಗಿದೆ. ಹೀಗಿರುವಾಗ ಉಚಿತ ವಿದ್ಯುತ್ ಕೊಡಲು ಕಷ್ಟವೇನು ಎಂದು ಪ್ರಶ್ನಿಸಿದರಲ್ಲದೆ, ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಕಾಫಿ ತೋಟ ಇರೋದಕ್ಕೆ ಮಳೆ ಬಂದು ಕಾವೇರಿ ಭರ್ತಿಯಾಗುವಂತದ್ದು. ನಮಗೆ ಸಣ್ಣ ಲಾಭವನ್ನು ನೀಡದೆ; ನಾವು ನೀರು ಕೊಡುವುದಕ್ಕೆ ಮಾತ್ರ ಸೀಮಿತವಾದರೆ ಹೇಗೆ? ನಾವು ಕಣ್ಣೀರು ಹಾಕಿಕೊಂಡೆ ಕಾಲ ಕಳೆಯಬೇಕಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಫಿ ನಾಡಿನ ಶಾಸಕರುಗಳ ಬೇಡಿಕೆ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕಾಫಿ ವಾಣಿಜ್ಯ ಬೆಳೆಗಾರರು ಕೂಡ ಆರ್ಥಿಕವಾಗಿ ಸಮರ್ಥರಿದ್ದಾರೆ ಎಂಬ ದೃಷ್ಟಿಯಿಂದ ಉಚಿತ ವಿದ್ಯುತ್ ವಿಚಾರದಲ್ಲಿ ಈ ನಿಯಮ ಮುಂದುವರಿಯುತ್ತಾ ಬಂದಿದೆ. ನಮ್ಮ ವಿದ್ಯುತ್ ಸಬ್ಸಿಡಿ ವರ್ಷ ವರ್ಷ ಹೆಚ್ಚಾಗುತ್ತಾ ಬಂದಿದೆ. ಅತೀ ದೊಡ್ಡ ಸಬ್ಸಿಡಿ ಎಂದರೆ ಅದು ವಿದ್ಯುತ್ ಸಬ್ಸಿಡಿ. ವಿದ್ಯುತ್ ಬಳಕೆ ಅನುಸಾರ ಸಬ್ಸಿಡಿಯೂ ೧೨ ರಿಂದ ೧೪ ಸಾವಿರ ಕೋಟಿವರೆಗೆ ಏರುಪೇರಾಗುತ್ತಿರುತ್ತದೆ. ಬಹಳ ದೊಡ್ಡ ಹೊರೆ ಇದು.

ಆದರೆ ಕಾಲಕಾಲಕ್ಕೆ ಮಳೆಯಾದರೆ ಈ ಬೇಡಿಕೆ ಬರುತ್ತಿರಲಿಲ್ಲ. ಒಂದೆರಡು ಮೂರು ವರ್ಷ ಮಳೆ ಕಡಿಮೆ ಆದಾಗ ಪಂಪಿನ ಅವಶ್ಯಕತೆ ಬಹಳ ಇದೆ ಎಂದು ಅನಿಸಿತು. ವಿದ್ಯುತ್ ಬಿಲ್ ಹೆಚ್ಚಾಗಿ ಈಗ ಈ ಒತ್ತಡ ಬಂದಿದೆ. ಖಂಡಿತವಾಗಿಯೂ ಕಾಫಿ ಬೆಳೆಗಾರರ ಸ್ಥಿತಿ ಹಾಗೂ ಭಾವನೆಗಳು ಅರ್ಥವಾಗುತ್ತದೆ. ಅವರಿಗೆ ಉಚಿತ ವಿದ್ಯುತ್ ನೀಡಲು ನಮ್ಮ ತಕರಾರು ಇಲ್ಲ. ಆದರೆ ಅದು ಸರಿಯಾದ ರೀತಿಯಲ್ಲಿ ಬಳಕೆಯಾಗಬೇಕು. ನಿಗದಿಗಿಂತ ಹೆಚ್ಚು ಬಳಕೆ ಆಗುವ ಸಾಧ್ಯತೆಯೂ ಇರುವುದರಿಂದ ಇಂಧನ ಸಚಿವರೊಂದಿಗೆ, ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇನೆ. ೧೦ ಹೆಚ್‌ಪಿವರೆಗೂ ಬೇರೆ ರೈತರಿಗೆ ನೀಡಲಾಗುತ್ತಿರುವ ಉಚಿತ ವಿದ್ಯುತ್ ಅನ್ನು ಕಾಫಿ ಬೆಳೆಗಾರರಿಗೂ ನೀಡಲು ನಮ್ಮ ಸರ್ಕಾರ ಸಿದ್ಧವಿದೆ. ಆದರೆ ಅದು ಬೇರೆ ರೀತಿ ದುರುಪಯೋಗವಾಗಬಾರದು ಎಂಬ ಕಾರಣಕ್ಕಾಗಿ ನಾವು ಕೆಲವು ನಿಯಮಗಳನ್ನು ಮಾಡುತ್ತೇವೆ. ಅದಕ್ಕೆ ಶಾಸಕರುಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಪರಿಷತ್‌ನಲ್ಲೂ ಪ್ರಶ್ನಿಸಿದ್ದ ಸುಜಾ

೧೦ ಹೆಚ್.ಪಿ. ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ನೀಡಬೇಕೆಂಬ ಬೇಡಿಕೆಯ ಬಗ್ಗೆ ಒಂದೆರಡು ದಿನಗಳ ಹಿಂದೆ ವಿಧಾನ ಪರಿಷತ್ತ್ನಲ್ಲೂ ಕೊಡಗಿನ ಸದಸ್ಯ ಎಂ.ಪಿ. ಸುಜಾಕುಶಾಲಪ್ಪ ಪ್ರಸ್ತಾಪಿಸಿದ್ದರು. ‘ಶಕ್ತಿ’ಯಲ್ಲಿ ಪ್ರಕಟಗೊಂಡಿದ್ದ ವರದಿಯ ಮಾಹಿತಿಯೊಂದಿಗೆ ಇವರು ಸವಿವರವಾಗಿ ಈ ಬಗ್ಗೆ ಗಮನ ಸೆಳೆದು ಕ್ರಮಕ್ಕೆ ಒತ್ತಾಯಿಸಿದ್ದನ್ನೂ ಈ ಸಂದರ್ಭ ಸ್ಮರಿಸಬಹುದಾಗಿದೆ.