ಏಪ್ರಿಲ್ ೭ರಿಂದ ಆರಂಭ

ಮಡಿಕೇರಿ, ಮಾ. ೨೨; ಕೊಡಗು ವೈಲ್ಡ್ ಮಾಸ್ರ‍್ಸ್ ವತಿಯಿಂದ ಜಿಲ್ಲೆಯಲ್ಲಿ ರಾಷ್ಟç ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗಿದ್ದು, ಏಪ್ರಿಲ್ ೭ ರಿಂದ ೨೧ರ ವರೆಗೆ ನಡೆಯಲಿದೆ.

ಕಳೆದ ಬಾರಿ ಕೋವಿಡ್ ಸಂಕಷ್ಟದ ನಡುವೆಯೂ ರಾಜ್ಯಮಟ್ಟದ ಪಂದ್ಯಾವಳಿ ಏರ್ಪಡಿಸಿದ್ದ ಸಂದರ್ಭ ರಾಜ್ಯದ ಅಗ್ರ ಶ್ರೇಯಾಂಕದ ಆಟಗಾರರು ಭಾಗವಹಿಸಿದ್ದರು. ಈ ಬಾರಿಯೂ ಎರಡನೇ ಆವೃತ್ತಿಯ ರಾಜ್ಯ ಮಟ್ಟದ ಪಂದ್ಯಾವಳಿ ಆಯೋಜಿಸಲಾಗಿತ್ತು. ಇದೀಗ ಅದೇ ಪಂದ್ಯಾವಳಿಯನ್ನು ರಾಷ್ಟçಮಟ್ಟದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ರಾಷ್ಟç ಮಟ್ಟದ ಆಟಗಾರರು ಭಾಗವಹಿಸಲಿದ್ದಾರೆ. ಪಂದ್ಯಾವಳಿಯೂ ಮಡಿಕೇರಿಯ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊ. ೯೪೪೯೪೧೪೩೫೭, ೯೯೭೨೩೭೬೧೫೧ ಸಂಪರ್ಕಿಸಬಹುದೆAದು ಆಯೋಜಕರು ತಿಳಿಸಿದ್ದಾರೆ.