ಸಿದ್ದಾಪುರ, ಮಾ ೨೦: ನೆಲ್ಯಹುದಿಕೇರಿ ನಗರದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಒತ್ತಾಯಿಸಿ ಸಿಪಿಐ(ಎಂ) ವತಿಯಿಂದ ಪಕ್ಷದ ಪ್ರಮುಖ ಪಿ ಆರ್ ಭರತ್ ನೇತೃತ್ವದಲ್ಲಿ ಭಾನುವಾರ ನೆಲ್ಯಹುದಿಕೇರಿ ನಗರದಲ್ಲಿ ತಮಟೆ ಬಾರಿಸಿ, ಸಾರ್ವಜನಿಕರಿಂದ ಸಹಿ ಸಂಗ್ರಹಿಸುವ ಮೂಲಕ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯ ಅಂಗವಾಗಿ ತಾ. ೨೧ ರಂದು (ಇಂದು) ಸಿಪಿಐಎಂ ಪಕ್ಷದ ವತಿಯಿಂದ ನೆಲ್ಯಹುದಿಕೇರಿ ಗ್ರಾಮಪಂಚಾಯಿತಿ ಎದುರು ಪ್ರತಿಭಟನೆ ನಡೆಯಲಿದೆ ಎಂದು ಭರತ್ ತಿಳಿಸಿದ್ದಾರೆ.