ಗುಡ್ಡೆಹೊಸೂರು, ಮಾ. ೨೦: ಈಜಲು ತೆರಳಿ ಮುಳುಗಿ ಮೃತಪಟ್ಟ ಯುವಕನ ಮೃತದೇಹ ಇಂದು ಪತ್ತೆಯಾಗಿದೆ.

ತಾ. ೧೯ರಂದು ಗುಡ್ಡೆಹೊಸೂರು ಸಮೀಪದ ಬಸವನಹಳ್ಳಿ ಶಾಲೆಯ ವಿದ್ಯಾರ್ಥಿ, ಮರೂರು ಗ್ರಾಮದ ಚಂದ್ರಶೇಖರ್ ಹಾಗೂ ವಿಮಲ ದಂಪತಿಯ ಪುತ್ರ ರೋಷನ್ (೧೪) ತನ್ನ ಸ್ನೇಹಿತರೊಂದಿಗೆ ಕಾವೇರಿ ನದಿಯಲ್ಲಿ ಈಜಲು ತೆರಳಿದ ಸಂದರ್ಭ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದ. ಕತ್ತಲಾದ ಹಿನ್ನೆಲೆ ಮೃತದೇಹ ಪತ್ತೆಯಾಗಿರಲಿಲ್ಲ. ಭಾನುವಾರ ಸ್ಥಳೀಯ ಈಜುಗಾರ ಮಂಜುನಾಥ್ ಮತ್ತು ತಂಡದ ಕಾರ್ಯಾಚರಣೆಯಿಂದ ಮೃತದೇಹದ ನೀರಿನ ನಡುವೆ ಇದ್ದ ಕಲ್ಲಿನ ಕೆಳಭಾಗದಲ್ಲಿ ದೊರೆತಿದೆ. ನಂತರ ಮರಣೋತ್ತರ ಪರೀಕ್ಷೆ ನಡೆಸಿ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಪಿರಿಯಾಪಟ್ಟಣ ತಾಲೂಕಿನ ಮರೂರು ಗ್ರಾಮದಲ್ಲಿ ವಿದ್ಯಾರ್ಥಿಯ ಅಂತ್ಯಕ್ರಿಯೆ ನೆರವೇರಿಸಲಾಯಿತು.