ಮಡಿಕೇರಿ, ಮಾ. ೨೦: ಅಖಿಲ ಕರ್ನಾಟಕ ಮಾಜಿ ಸೈನಿಕರ ಕುಂದು ಕೊರತೆ ಆಲಿಸುವ ಸಭೆಯು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಮಾಜಿ ಸೈನಿಕರ ಕುಂದು ಕೊರತೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು ಎಂದರು.

ಅಕ್ರಮ ಸಕ್ರಮ ಯೋಜನೆಯಡಿ ತಾಲೂಕು ಮಟ್ಟದಲ್ಲಿ ಅರ್ಜಿಗಳನ್ನು ಸಲ್ಲಿಸಿ ಜಾಗ ಪಡೆಯಬಹುದಾಗಿದೆ, ಆ ನಿಟ್ಟಿನಲ್ಲಿ ನಮೂನೆ ೫೦, ೫೩ ಮತ್ತು ೫೭ ರಡಿ ಅರ್ಜಿ ಸಲ್ಲಿಸಬೇಕು ಎಂದು ಅವರು ಸಲಹೆ ಮಾಡಿದರು.

ತಾಲೂಕು ಮತ್ತು ಜಿಲ್ಲಾ ಕೇಂದ್ರ ದಲ್ಲಿ ಸೈನಿಕ ಭವನ ನಿರ್ಮಾಣಕ್ಕೆ ಜಾಗ ಒದಗಿಸಲಾಗುವುದು. ಮಾಜಿ ಸೈನಿಕರ ಶ್ರೇಯೋಭಿವೃದ್ಧಿಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದರು. ಮಾಜಿ ಸೈನಿಕರಿಗೆ ಕಂದಾಯ ಇಲಾಖೆಗಳಲ್ಲಿ ಆಗಬೇಕಿರುವ ಕೆಲಸವನ್ನು ತ್ವರಿತವಾಗಿ ಒದಗಿಸಲು ಕ್ರಮವಹಿಸಲಾಗುವುದು. ಮಾಜಿ ಸೈನಿಕರನ್ನು ಸೇರಿದಂತೆ ಹಿರಿಯರನ್ನು ಕಚೇರಿಗಳಲ್ಲಿ ಗೌರವದಿಂದ ಕಾಣಬೇಕು. ಜೊತೆಗೆ ನಿಯಮಾನುಸಾರ ಸಕಾಲದಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಬಾಕಿ ಇರುವ ಕಡತಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಕ್ರಮವಹಿಸ ಲಾಗಿದೆ ಎಂದು ಡಾ.ಬಿ.ಸಿ.ಸತೀಶ ಅವರು ಹೇಳಿದರು. ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಲೋಲಾಕ್ಷ ಅವರು ಮಾಜಿ ಸೈನಿಕರ ಕುಂದು ಕೊರತೆ ಸಂಬAಧಿಸಿದAತೆ ಹಲವು ವಿಚಾರ ಕುರಿತು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.

ಮಾಜಿ ಸೈನಿಕರು ಈಗಾಗಲೇ ಅನುಭವಿಸುತ್ತಿರುವ ಸರ್ಕಾರಿ ಪೈಸಾರಿ ಜಮೀನನ್ನು ಅವರಿಗೆ ಮಂಜೂರು ಮಾಡುವುದು, ಜಮೀನು ಮಂಜೂ ರಾಗದ ಮಾಜಿ ಸೈನಿಕರಿಗೆ ತಾಲೂಕು ವಾರು ಸೈನಿಕ ಕಾಲೋನಿ ಮಾಡಿ ನಿವೇಶನ ನೀಡುವುದು, ತಾಲೂಕು ವಾರು ಸೈನಿಕ ಸಮುದಾಯ ಭವನ ನಿರ್ಮಿಸಬೇಕಿದೆ ಎಂದು ಮಾಹಿತಿ ನೀಡಿದರು. ಮಂಜೂ ರಾತಿಗಾಗಿ ತಾಲೂಕುವಾರು ಅಧಿಸೂ ಚಿಸಿರುವ ಜಮೀನಿನ ವಿವರಗಳನ್ನು ಸೈನಿಕ ಕಲ್ಯಾಣ ಕಾರ್ಯಾಲಯದಲ್ಲಿ ಸೂಚನ ಫಲಕದಲ್ಲಿ ಪ್ರದರ್ಶಿಸುವುದು, ವಯೋವೃದ್ಧ ಮಾಜಿ ಸೈನಿಕರಿಗೆ ಸರ್ಕಾರಿ ಕಚೇರಿಗಳಲ್ಲಿ ಆದ್ಯತೆಯ ಮೇರೆಗೆ ಅವರ ಕೆಲಸಗಳಿಗೆ ಸ್ಪಂದಿಸುವುದು, ಶೌರ್ಯ ಪ್ರಶಸ್ತಿ, ಇತರೆ ಪ್ರಶಸ್ತಿ ವಿಜೇತರಿಗೆ ಜಾಗ ಅಥವಾ ನಗದು ಇವುಗಳಲ್ಲಿ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವುದು, ಸೈನಿಕ, ಮಾಜಿ ಸೈನಿಕರಿಗೆ ಗಾಮೀಣ ಪ್ರದೇಶದಲ್ಲಿ ಆಸ್ತಿ ತೆರಿಗೆ ವಿನಾಯಿತಿ ಇದ್ದಲ್ಲಿ ಕಲ್ಪಿಸಬೇಕಿದೆ ಎಂದು ಅವರು ತಿಳಿಸಿದರು. ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೆ.ಪಿ. ಸೋಮಣ್ಣ ಹಾಗೂ ಇತರರು ಮಾಜಿ ಸೈನಿಕರ ಕುಂದು ಕೊರತೆ ಸಂಬAಧಿಸಿ ದಂತೆ ಹಲವು ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ ಇತರರು ಇದ್ದರು.