ಮಡಿಕೇರಿ, ಮಾ.೨೦: ರಾಜ್ಯ, ರಾಷ್ಟ್ರದಲ್ಲಿ ಸಾವಿರಾರು ಭಾಷೆ, ಜನಾಂಗಗಳಿದ್ದು, ಅದರಂತೆ ಅರೆಭಾಷೆಯೂ ಒಂದಾಗಿದೆ. ಕೊಡವ, ಅರೆಭಾಷೆ, ತುಳು, ಕೊಂಕಣಿ ಹೀಗೆ ಒಂದೊAದು ಸಮುದಾಯಕ್ಕೂ ಭಾಷೆ ಇದ್ದು, ಭಾಷೆ ಇದ್ದಲ್ಲಿ ಮಾತ್ರ ಸಮಾಜ ಉಳಿಯಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಪಿ.ಎಲ್.ಧರ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಚೆಟ್ಟಳ್ಳಿಯ ಮೋದಿ ಭವನದಲ್ಲಿ ಭಾನುವಾರ ಕರ್ನಾಟಕ ಅರೆಭಾಷೆ ಮಡಿಕೇರಿ, ಮಾ.೨೦: ರಾಜ್ಯ, ರಾಷ್ಟ್ರದಲ್ಲಿ ಸಾವಿರಾರು ಭಾಷೆ, ಜನಾಂಗಗಳಿದ್ದು, ಅದರಂತೆ ಅರೆಭಾಷೆಯೂ ಒಂದಾಗಿದೆ. ಕೊಡವ, ಅರೆಭಾಷೆ, ತುಳು, ಕೊಂಕಣಿ ಹೀಗೆ ಒಂದೊAದು ಸಮುದಾಯಕ್ಕೂ ಭಾಷೆ ಇದ್ದು, ಭಾಷೆ ಇದ್ದಲ್ಲಿ ಮಾತ್ರ ಸಮಾಜ ಉಳಿಯಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಪಿ.ಎಲ್.ಧರ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಚೆಟ್ಟಳ್ಳಿಯ ಮೋದಿ ಭವನದಲ್ಲಿ ಭಾನುವಾರ ಕರ್ನಾಟಕ ಅರೆಭಾಷೆ ಸಂಸ್ಕೃತಿಯ ಭಾಗವೇ ಆಗಿದೆ. ಭಾಷೆ ಎನ್ನುವುದು ಸಮುದಾಯವನ್ನು ಕಟ್ಟುವ, ಹೃದಯವನ್ನು ಜೋಡಿಸುವ, ಮನುಷ್ಯತ್ವವನ್ನು ಕಟ್ಟಿ ಬೆಳೆಸುವ ಆಸ್ತಿಯಾಗಬೇಕು. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಮಕ್ಕಳಿಗೆ ಇತರೆ ಭಾಷೆಯ ಜೊತೆಗೆ ಮಾತೃ ಭಾಷೆ ಸಂಸ್ಕೃತಿಯನ್ನು ತಿಳಿಸಬೇಕು, ಕಲಿಸಬೇಕು ಮತ್ತು ಮಾತನಾಡಿಸಬೇಕು ಎಂದು ಅವರು ಹೇಳಿದರು.
ಡಾ. ಪ್ರಭಾಕರ ಶಿಶಿಲ ಅವರು ಮಾತನಾಡಿ ಒಂದು ಭಾಷೆ ಉಳಿಯ ಬೇಕಾದರೆ (ಮೊದಲ ಪುಟದಿಂದ) ಆ ಭಾಷೆಯ ಪುಸ್ತಕಗಳು ಪ್ರಮುಖ ಪಾತ್ರ ವಹಿಸುತ್ತವೆ. ಭಾಷೆಯನ್ನು ಮಾತನಾಡುವುದರಿಂದ ಭಾಷೆ ಉಳಿಯುತ್ತದೆ. ಭಾಷೆಯನ್ನು ಬಳಸದಿದ್ದರೆ ಭಾಷೆ ಉಳಿಯುವುದಿಲ್ಲ, ಬೆಳವಣಿಗೆಯೂ ಸಹ ಆಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಅರೆಭಾಷೆಯಲ್ಲಿ ಏಕಕಾಲದಲ್ಲಿ ಏಳು ಪುಸ್ತಕಗಳನ್ನು ಬಿಡುಗಡೆ ಮಾಡುತ್ತಿರುವುದು ಶ್ಲಾಘನೀಯ. ಪುಸ್ತಕ ಓದುವ ಆಸಕ್ತಿ ಪ್ರಸ್ತುತ ದಿನದಲ್ಲಿ ಕಡಿಮೆಯಾಗಿದೆ ಎಲ್ಲರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷಿö್ಮÃನಾರಾಯಣ ಕಜೆಗದ್ದೆ ಅವರು ಮಾತನಾಡಿ ಹಳ್ಳಿ ಹಳ್ಳಿಗಳಿಗೂ ಸಾಹಿತ್ಯದ ಬಗ್ಗೆ ಜನರಲ್ಲಿ ಅಭಿರುಚಿ ಹಾಗೂ ಅರಿವು ಮೂಡಿಸುವ ದೃಷ್ಟಿಯಿಂದ ಚೆಟ್ಟಳ್ಳಿ ಗ್ರಾಮದಲ್ಲಿ ಪುಸ್ತಕ ಬಿಡುಗಡೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಅರೆ ಭಾಷೆಯಲ್ಲಿ ಬರೆದ ಕೃತಿಗಳಿಗೆ ಪ್ರಥಮ ಆದ್ಯತೆ ನೀಡಲಾಗಿದ್ದು, ಭಾಷೆಯನ್ನು ಉಳಿಸಿ ಬೆಳಸುವ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಅಕಾಡೆಮಿಯು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಅವರು ಹೇಳಿದರು.
ಲೇಖಕರಾದ ಬಾರಿಯಂಡ ಜೋಯಪ್ಪ, ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಪೇರಿಯನ ಜಯಾನಂದ, ಚೆಟ್ಟಳ್ಳಿ ಚೇರಳ ಗೌಡ ಸಂಘದ ಅಧ್ಯಕ್ಷರಾದ ಅಯ್ಯಂಡ್ರ ರಾಘವಯ್ಯ, ಚೆಟ್ಟಳ್ಳಿ ಕೂಡ್ಲೂರು ಗೌಡ ಸಂಘದ ಅಧ್ಯಕ್ಷರಾದ ಅಕ್ಕಾರಿ ದಯಾನಂದ, ಪಿಎಸಿಎಸ್ ಅಧ್ಯಕ್ಷರಾದ ಬಲ್ಲಾರಂಡ ಮಣಿಉತ್ತಪ್ಪ ಅಕಾಡೆಮಿ ಸದಸ್ಯರು ಇತರರು ಇದ್ದರು. ಸದಸ್ಯರಾದ ಪ್ರೇಮಾ ರಾಘವಯ್ಯ ಪ್ರಾರ್ಥಿಸಿದರು. ಸ್ಮೀತಾ ಅಮೃತರಾಜ್ ಸ್ವಾಗತಿಸಿದರು. ಧನಂಜಯ ಅಗೋಳಿಕಜೆ ನಿರೂಪಿಸಿ ವಂದಿಸಿದರು.
ಬಿಡುಗಡೆಯಾದ ಪುಸ್ತಕಗಳು: ಗಂಗಾವತರಣ ಭೀಷ್ಮೋದಯ (ಪ್ರೊ.ಕೆ.ಕುಶಾಲಪ್ಪಗೌಡ), ಯಾಕೀ ಕತೆ ಹಿಂಗಾತ್ (ಕುತ್ಯಾಳ ನಾಗಪ್ಪಗೌಡ (ಕಿರಣ), ಮುತ್ತುಮಣಿ (ಕಣಜಾಲ್ ಪೂವಯ್ಯ), ಬಲೀಂದ್ರನ ಸಂದಿ(ಕುAಞೆÃಟಿ ಶಿವರಾಮಗೌಡ)ü, ಚೆಂಚಿ (ಬಾರಿಯಂಡ ಜೋಯಪ್ಪ), ಅರೆಭಾಷೆ ಗಾದೆಗ(ತೆಕ್ಕಡೆ ಕುಮಾರಸ್ವಾಮಿ), ಅಟ್ಟಿ(ಕೊಟ್ಟಕೇರಿಯನ ಲೀಲಾ ದಯಾನಂದ).