ಪೊನ್ನಂಪೇಟೆ, ಮಾ.೨೦: ಕರಾಟೆಯನ್ನು ದೇಶದಲ್ಲಿ ಮತ್ತಷ್ಟು ವಿಸ್ತರಿಸುವ ಹಿನ್ನೆಲೆಯಲ್ಲಿ ರಾಷ್ಟಿçÃಯ ಕರಾಟೆ ಮಂಡಳಿಯಿAದ (ಕೆ.ಐ.ಓ) ವಿಂಗಡನೆಗೊAಡು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ದಕ್ಷಿಣ ಭಾರತ ವಲಯ ಕರಾಟೆ ಮಂಡಳಿಯ ಸಂಸ್ಥಾಪಕ ಅಧ್ಯಕ್ಷರಾಗಿ ಹಿರಿಯ ಕರಾಟೆಪಟು, ಮಾಜಿ ವಿಧಾನ ಪರಿಷತ್ ಸದಸ್ಯ ಚೆಪ್ಪುಡಿರ ಎಸ್. ಅರುಣ್ ಮಾಚಯ್ಯ ಅವರು ಆಯ್ಕೆಗೊಂಡಿದ್ದಾರೆ.
(ಮೊದಲ ಪುಟದಿಂದ)
ಜೊತೆಗೆ ವಿಶ್ವ ಕರಾಟೆ ಮಂಡಳಿಯಿAದ ೮ನೇ ಬ್ಲಾಕ್ ಬೆಲ್ಟ್ ಪಡೆದಿರುವ ಅರುಣ್ ಮಾಚಯ್ಯ ಅವರು ಈ ಸಾಧನೆಗೈದ ಪ್ರಥಮ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಅವರು ಕ್ರೀಡಾ ತವರಾದ ಕೊಡಗಿನ ಖ್ಯಾತಿಗೆ ಮತ್ತೊಂದು ಗರಿ ಮೂಡಿಸಿದ್ದಾರೆ.
ವಿಶ್ವ ಕರಾಟೆ ಮಂಡಳಿ, ಏಷ್ಯನ್ ಕರಾಟೆ ಮಂಡಳಿ, ಆಗ್ನೇಯ ಏಷ್ಯಾ ಕರಾಟೆ ಸಂಸ್ಥೆ ಸೇರಿದಂತೆ ಅಂತರರಾಷ್ಟಿçÃಯ ಒಲಿಂಪಿಕ್ ಅಸೋಸಿಯೇಷನ್ ನಿಂದ ಮಾನ್ಯತೆ ಪಡೆದಿರುವ ಭಾರತದ ಏಕೈಕ ಕರಾಟೆ ಸಂಸ್ಥೆಯಾಗಿರುವ ರಾಷ್ಟಿçÃಯ ಕರಾಟೆ ಮಂಡಳಿಯು ನೂತನವಾಗಿ ತನ್ನ ಸಂಸ್ಥೆಯನ್ನು ದೇಶದಲ್ಲಿ ೫ ವಿಭಾಗಗಳನ್ನಾಗಿ ವಿಂಗಡಿಸಿದೆ.ದಕ್ಷಿಣ ಭಾರತ, ಉತ್ತರ ಭಾರತ, ಈಶಾನ್ಯ ಭಾರತ, ವಾಯುವ್ಯ ಭಾರತ ಹಾಗೂ ಮಧ್ಯಭಾರತ ವಲಯವನ್ನಾಗಿ ವಿಂಗಡಿಸಿದ್ದು, ದಕ್ಷಿಣ ಭಾರತ ಕರಾಟೆ ವಲಯಕ್ಕೆ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಮತ್ತು ಕೇರಳ ರಾಜ್ಯಗಳು ಒಳಪಡಲಿವೆ. ನೂತನ ದಕ್ಷಿಣ ಭಾರತ ವಲಯ ಕರಾಟೆ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಹೆಸರುಗಳು ಕೇಳಿಬಂದಿದ್ದರೂ, ಅಂತಿಮವಾಗಿ ಜೇಷ್ಠತೆಯ ಆಧಾರದಲ್ಲಿ ಕಳೆದ ೧೨ ವರ್ಷಗಳಿಂದ ರಾಷ್ಟಿçÃಯ ಕರಾಟೆ ಮಂಡಳಿಯ ಹಿರಿಯ ಉಪಾಧ್ಯಕ್ಷರಾಗಿ, ಅಖಿಲ ಭಾರತ ಶಿಟೋರಿಯೋ ಕರಾಟೆ ಮಂಡಳಿಯ ಮತ್ತು ಕಳೆದ ೨೦೦೯ರಿಂದ ಅಖಿಲ ಕರ್ನಾಟಕ ಸ್ಫ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಸಿ. ಎಸ್. ಅರುಣ್ ಮಾಚಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.
ಹೈದರಾಬಾದಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವ ಕರಾಟೆ ಮಂಡಳಿಯ ತಾಂತ್ರಿಕ ಆಯೋಗದ ಸದಸ್ಯರಾದ ಭರತ್ ಶರ್ಮ, ರಾಷ್ಟಿçÃಯ ಕರಾಟೆ ಮಂಡಳಿಯ ಪ್ರಧಾನ ಕಾರ್ಯದರ್ಶಿ ಸಂಜೀವ್ ಕುಮಾರ ಜಾಗ್ರ ಹಾಗೂ ರಾಷ್ಟಿçÃಯ ಕರಾಟೆ ಮಂಡಳಿಯ ತಾಂತ್ರಿಕ ನಿರ್ದೇಶಕರಾದ ಜೇಕಬ್ ದೇವ್ ಕುಮಾರ್ ಈ ಕುರಿತ ಪ್ರಮಾಣಪತ್ರವನ್ನು ಅರುಣ್ ಮಾಚಯ್ಯ ಅವರಿಗೆ ಹಸ್ತಾಂತರಿಸಿದರು.