ವೀರಾಜಪೇಟೆ, ಮಾ. ೨೦: ನಗರದ ಮಲಬಾರ್ ರಸ್ತೆಯಲ್ಲಿರುವ ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಾಲಯದ ೭೮ನೇ ವರ್ಷದ ವಾರ್ಷಿಕ ತೆರೆ ಮಹೋತ್ಸವ ಭಕ್ತರ ಸಮ್ಮುಖದಲ್ಲಿ ಸಂಪನ್ನಗೊAಡಿತ್ತು. ತಾ. ೧೫ರಂದು ಆರಂಭವಾದ ತೆರೆ ಮಹೋತ್ಸವವು ಅಂದು ಸಂಜೆ ಮುತ್ತಪ್ಪನ್ ವೆಳ್ಳಾಟಂನೊAದಿಗೆ ನಡೆಯಿತು. ತಾ. ೧೬ ರಂದು ಮುತ್ತಪ್ಪ ವೆಳ್ಳಾಟಂ, ಕುಟ್ಟಿಚಾತನ್, ಗುಳಿಗನ್ ವಸೂರಿಮಾಲ, ಪೋದಿ, ವಿಷ್ಣುಮೂರ್ತಿ ವೆಳ್ಳಾಟಂ ತೆರೆಗಳು ನೀಡಿದವು. ತಾ. ೧೭ ರಂದು ಶಾಸ್ತಪ್ಪನ್, ಗುಳಿಗನ ಕೊಲ, ತಿರುಪ್ಪನ್, ಭಗವದಿ (ಪೊದಿ) ವಸೂರಿಮಾಲ ವಿಷ್ಣುಮೂರ್ತಿ ಕೋಲದೊಂದಿಗೆ ವಾರ್ಷಿಕ ತೆರೆ ಮಹೋತ್ಸವವು ಸಂಪನ್ನಗೊAಡಿತು. ವಾರ್ಷಿಕ ತೆರೆ ಮಹೋತ್ಸವದ ಅಂಗವಾಗಿ ಮೂರು ದಿನಗಳು ದೇವಾಲಯದ ಆಡಳಿತ ಮಂಡಳಿಯಿAದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ತೆರೆ ಮಹೋತ್ಸವದಲ್ಲಿ ಅಡಳಿತ ಮಂಡಳಿಯ ಸದಸ್ಯರು ಸೇರಿದಂತೆ ನಗರ ಮತ್ತು ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ತೆರೆ ಮಹೋತ್ಸವದಲ್ಲಿ ಭಾಗವಹಿಸಿ ಶ್ರೀ ಮುತ್ತಪ್ಪ ದೇವರ ಅನುಗ್ರಹ ಪಡೆದು ಪುನೀತರಾದರು. - ಕಿಶೋರ್ ಕುಮಾರ್ ಶೆಟ್ಟಿ