ಭವಿಷ್ಯದ ಕೋವಿಡ್ ಅಲೆಗಳಿಂದ ಗಂಭೀರ ಪರಿಣಾಮ ಇಲ್ಲ

ನವದೆಹಲಿ, ಮಾ. ೨೦: ಆಗ್ನೇಯ ಏಷ್ಯಾ ಮತ್ತು ಯುರೋಪ್‌ನ ಕೆಲವು ಭಾಗಗಳಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳದ ನಡುವೆ, ಲಸಿಕೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಾದರೆ ಭವಿಷ್ಯದ ಯಾವುದೇ ಕೋವಿಡ್ ಅಲೆಗಳು ದೇಶದಲ್ಲಿ ಪ್ರಮುಖ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ಭಾರತದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. SಂಖS-ಅoಗಿ-೨ ಒಂದು ಖಓಂ ವೈರಸ್ ಮತ್ತು ರೂಪಾಂತರಗಳು ಸಂಭವಿಸುತ್ತವೆ ಎಂದು ವಯಸ್ಕರು ಮತ್ತು ಮಕ್ಕಳ ಕೋವಾಕ್ಸಿನ್ ಪ್ರಯೋಗಗಳ ಪ್ರಧಾನ ತನಿಖಾಧಿಕಾರಿ ಂIIಒSನ ಹಿರಿಯ ಸಾಂಕ್ರಾಮಿಕ ರೋಗಶಾಸ್ತçಜ್ಞ ಡಾ. ಸಂಜಯ್ ರೈ ಹೇಳಿದ್ದಾರೆ. ಈಗಾಗಲೇ ೧,೦೦೦ಕ್ಕೂ ಹೆಚ್ಚು ರೂಪಾಂತರಗಳು ಸಂಭವಿಸಿವೆ. ಆದರೂ ಕಾಳಜಿಯ ಐದು ರೂಪಾಂತರಗಳು ಮಾತ್ರ ಇವೆ. ಕಳೆದ ವರ್ಷ ಭಾರತವು ಅತ್ಯಂತ ವಿನಾಶಕಾರಿ ಎರಡನೇ ಅಲೆಯನ್ನು ಎದುರಿಸಿತ್ತು. ಇದು ತುಂಬಾ ದುರದೃಷ್ಟಕರವಾಗಿದೆ. ಆದರೆ ಪ್ರಸ್ತುತ ಇದು ನಮ್ಮ ಪ್ರಮುಖ ಶಕ್ತಿಯಾಗಿದೆ ಏಕೆಂದರೆ ನೈಸರ್ಗಿಕ ಸೋಂಕು ಉತ್ತಮ ಮತ್ತು ದೀರ್ಘಾವಧಿಯ ರಕ್ಷಣೆಯನ್ನು ಒದಗಿಸುತ್ತದೆ. ಅಲ್ಲದೆ, ಹೆಚ್ಚಿನ ವ್ಯಾಕ್ಸಿನೇಷನ್ ವ್ಯಾಪ್ತಿಯು ಇದೆ. ಆದ್ದರಿಂದ, ಭವಿಷ್ಯದ ಯಾವುದೇ ತರಂಗದ ತೀವ್ರ ಪರಿಣಾಮ ಅಸಂಭವವಾಗಿದೆ ಎಂದು ರೈ ಹೇಳಿದರು. ಭಾರತ ಸರ್ಕಾರವು ಮಾಸ್ಕ್ ಆದೇಶವನ್ನು ಸಡಿಲಿಸುವುದನ್ನು ಪರಿಗಣಿಸುವ ಸಮಯವಾಗಿದೆ ಎಂದು ಅವರು ಹೇಳಿದರು. ಹಿರಿಯ ನಾಗರಿಕರು ಮತ್ತು ಸೋಂಕಿಗೆ ಒಳಗಾಗುವ ಹೆಚ್ಚಿನ ಅಪಾಯದಲ್ಲಿರುವವರು ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸುವುದನ್ನು ಮುಂದುವರಿಸಬೇಕು. ಭವಿಷ್ಯದ ಯಾವುದೇ ರೂಪಾಂತರಿ ಹಾವಳಿಯನ್ನು ಮೇಲ್ವಿಚಾರಣೆ ಮಾಡಲು ಜೀನೋಮಿಕ್ ಸೀಕ್ವೆನ್ಸಿಂಗ್ ಸೇರಿದಂತೆ SಂಖS-ಅoಗಿ-೨ ಕಣ್ಗಾವಲನ್ನು ಸರ್ಕಾರ ಮುಂದುವರಿಸಬೇಕು ಎಂದು ರೈ ಒತ್ತಿ ಹೇಳಿದರು.

ನ್ಯಾಯಾಧೀಶರಿಗೆ ಕೊಲೆ ಬೆದರಿಕೆ;ಇಬ್ಬರ ಬಂಧನ

ಮಧುರೈ, ಮಾ. ೨೦: ಹಿಜಾಬ್ ತೀರ್ಪು ಪ್ರಕಟಿಸಿದ ಕರ್ನಾಟಕ ಹೈಕೋಟ್ ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಸೇರಿದಂತೆ ಮೂವರು ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಪೊಲೀಸರು ತಿರುನಲ್ವೇಲಿಯಿಂದ ಕೋವೈ ರಹಮತುಲ್ಲಾ ಮತ್ತು ತಂಜಾವೂರಿನ ಎಸ್ ಜಮಾಲ್ ಮೊಹಮ್ಮದ್ ಉಸ್ಮಾನಿಯನ್ನು ಬಂಧಿಸಿದ್ದಾರೆ. ಇಬ್ಬರೂ ಆರೋಪಿಗಳು ಇಸ್ಲಾಮಿಕ್ ಧಾರ್ಮಿಕ ಸಂಘಟನೆಯಾದ ತಮಿಳುನಾಡು ತೌಹೀದ್ ಜಮಾಅತ್ ಸದಸ್ಯರಾಗಿದ್ದರು. ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹಲವು ದೂರುಗಳು ದಾಖಲಾದ ಬೆನ್ನಲ್ಲೇ ತಮಿಳುನಾಡು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇದೇ ವೇಳೆ ಈ ಇಬ್ಬರ ಹೊರತಾಗಿ ಹಲವರ ವಿರುದ್ಧ ದೂರುಗಳು ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ. ಹಿಜಾಬ್ ಪ್ರಕರಣ ಕುರಿತಂತೆ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಆವಸ್ಥಿ ನೇತೃತ್ವದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಹಾಗೂ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ವಿಶೇಷ ನ್ಯಾಯಪೀಠ ರಿಟ್ ಅರ್ಜಿಗಳ ಸುದೀರ್ಘ ವಿಚಾರಣೆ ನಡೆಸಿ ಹಿಜಾಬ್ ಇಸ್ಲಾಂ ಧರ್ಮದ ಅಗತ್ಯ ಆಚರಣೆಯಲ್ಲ ಎಂದು ಮಹತ್ವದ ತೀರ್ಪು ನೀಡಿತ್ತು.

ನ್ಯಾಯಾಧೀಶರಿಗೆ ‘ವೈ’ ದರ್ಜೆ ಭದ್ರತೆ

ಬೆಂಗಳೂರು, ಮಾ. ೨೦: ಹಿಜಾಬ್ ವಿವಾದ ಬಗ್ಗೆ ತೀರ್ಪು ನೀಡಿ ಕೊಲೆ ಬೆದರಿಕೆ ಎದುರಿಸುತ್ತಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸೇರಿದಂತೆ ಮೂವರು ನ್ಯಾಯಾಧೀಶರಿಗೆ ‘ವೈ’ ದರ್ಜೆಯ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹಿಜಾಬ್ ವಿವಾದ ಕುರಿತು ತೀರ್ಪು ನೀಡಿದ ಮೂವರು ನ್ಯಾಯಾಧೀಶರನ್ನು ಹತ್ಯೆ ಮಾಡುವುದಾಗಿ ಮಧುರೈಯಲ್ಲಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನಾರ್ವೆಯಲ್ಲಿ ವಿಮಾನ ಪತನ

ಹೆಲ್ಸಿಂಕಿ, ಮಾ. ೨೦: ನಾರ್ವೆಯ ಆರ್ಕ್ಟಿಕ್ ವೃತ್ತದಲ್ಲಿ ಕೋಲ್ಡ್ ರೆಸ್ಪಾನ್ಸ್ ಹೆಸರಿನ ನ್ಯಾಟೋ ಸೈನಿಕ ವಿನ್ಯಾಸದಲ್ಲಿ ದುರಂತ ಸಂಭವಿಸಿದೆ. ಅಮೇರಿಕಾದ ನಾವಿಕ ದಳಕ್ಕೆ ಸೇರಿದ ಒಗಿ-೨೨ಃ ಓಸ್ಪೆçà ವಿಮಾನ ಪತನಗೊಂಡಿದೆ. ಹಡಗಿನಲ್ಲಿದ್ದ ನಾಲ್ವರು ಅಮೇರಿಕ ನೌಕಾಪಡೆ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಉತ್ತರ ನಾರ್ವೆಯ ನಾರ್ಲ್ಯಾಂಡ್ ಕೌಂಟಿಯಲ್ಲಿ ಶುಕ್ರವಾರ ರಾತ್ರಿ ಅಪಘಾತ ಸಂಭವಿಸಿದೆ. ಈ ಘಟನೆಗೂ ಉಕ್ರೇನ್-ರಷ್ಯಾ ಯುದ್ಧಕ್ಕೂ ಯಾವುದೇ ಸಂಬAಧವಿಲ್ಲ ಎಂದು ನಾರ್ವೇಯ ಪ್ರಧಾನಿ ಜೊನಾಸ್ ಗೆಹ್ರ್ ಸ್ಟೋರಿ ಮತ್ತು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ. ಅಪಘಾತದ ಕಾರಣವನ್ನು ತನಿಖೆ ನಡೆಸಲಾಗುತ್ತಿದೆ. ಆದರೆ, ಹವಾಮಾನ ವೈಪರೀತ್ಯದಿಂದಾಗಿ ಅಮೆರಿಕದ ವಿಮಾನ ಪತನಗೊಂಡಿದೆ ಎಂದು ನಾರ್ವೆ ಪೊಲೀಸರು ತಿಳಿಸಿದ್ದಾರೆ.

ಪುಟಿನ್‌ಗೆ ಪ್ರಾಣ ಭೀತಿ-ಸಿಬ್ಬಂದಿಗಳ ವಜಾ

ಮಾಸ್ಕೋ, ಮಾ. ೨೦: ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಸ್ವತಃ ಪ್ರಾಣಭೀತಿ ಎದುರಾಗಿದ್ದು, ಇದೇ ಕಾರಣಕ್ಕೆ ಅವರು ಕಳೆದ ಒಂದು ತಿಂಗಳ ಅವಧಿಯಲ್ಲಿ ಬರೋಬ್ಬರಿ ೧ ಸಾವಿರ ವೈಯುಕ್ತಿಕ ಸಿಬ್ಬಂದಿಗಳನ್ನು ಬದಲಿಸಿದ್ದಾರೆ ಎಂದು ಹೇಳಲಾಗಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ೧,೦೦೦ ಸಿಬ್ಬಂದಿಯನ್ನು ವಜಾ ಮಾಡಿದ್ದಾರೆ. ಅಡುಗೆ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಖಾಸಗಿ ಕಾರ್ಯ ದರ್ಶಿಗಳು ಹೀಗೆ ಸುಮಾರು ೧೦೦೦ ಜನರನ್ನು ವಜಾಮಾಡಲಾಗಿದೆ. ರಷ್ಯಾದ ಗುಪ್ತಚರ ವರದಿಗಳ ಪ್ರಕಾರ ಪುಟಿನ್ ಗೆ ತನ್ನ ಹಳೆಯ ಸಿಬ್ಬಂದಿ ಗಳಿಂದ ಆಹಾರದಲ್ಲಿ ವಿಷ ಸೇರಿಸಿ ತನ್ನನ್ನ ಸಾಯಿಸಲಿದ್ದಾರೆಂಬ ಭಯದಲ್ಲಿ ಬದುಕುತ್ತಿದ್ದಾರೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ. ಈ ಕಾರಣಕ್ಕಾಗಿಯೇ ಪುಟಿನ್ ೧,೦೦೦ ವೈಯಕ್ತಿಕ ಸಿಬ್ಬಂದಿಯನ್ನು ವಜಾ ಗೊಳಿಸಿದ್ದಾರೆ ಎಂದು ಹೇಳಲಾಗಿದೆ. ರಷ್ಯಾ ಉಕ್ರೇನ್ ಮೇಲೆ ನಿರಂತರ ಬಾಂಬ್ ದಾಳಿ ನಡೆಸುತ್ತಿದೆ. ಪುಟಿನ್ ಹೊರಗೆ ಗಾಂಭೀರ್ಯತೆಯನ್ನ ತೋರುವಂತೆ ನಟಿಸುತ್ತಿದ್ದರೂ ಒಳಗೊಳಗೆ ಜೀವಭಯದಲ್ಲಿದ್ದಾರೆ ಎಂದು ಅಂರ‍್ರಾಷ್ಟಿçÃಯ ಮಾಧ್ಯಮಗಳು ವರದಿ ಮಾಡಿವೆ.

ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದವರ ಲೈಸನ್ಸ್ ರದ್ದು

ಬೆಂಗಳೂರು: ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿದವರ ಲೈಸನ್ಸ್ ರದ್ದು ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ. ತುಮಕೂರು ಬಸ್ ಅಪಘಾತ ವಿಚಾರ ಕುರಿತು ಬೆಂಗಳೂರಿನ ಆರ್.ಟಿ. ನಗರದ ತಮ್ಮ ನಿವಾಸದ ಬಳಿ ಮುಖ್ಯಮಂತ್ರಿಗಳು ಸುದ್ದಿಗಾರರೊಂದಿಗೆ ಮಾತನಾಡಿ, ಬಸ್ಸುಗಳಲ್ಲಿ ಈಗಾಗಲೇ ಓವರ್ ಲೋಡ್ ಹಾಕುವುದಕ್ಕೆ ಕಾನೂನು ಇದೆ. ಆದರೂ ಸರ್ಕಾರದ ಕಣ್ಣು ತಪ್ಪಿಸಿ ಓವರ್ ಲೋಡ್ ಹಾಕುತ್ತಿರುವುದು ಕಂಡುಬAದಿದೆ. ಹೀಗಾಗಿ, ಕಾನೂನು ಉಲ್ಲಂಘಿಸುತ್ತಿರುವವರ ವಿರುದ್ಧ ಇನ್ನಷ್ಟು ಕಠಿಣ ಕಾನೂನು ಮಾಡುತ್ತೇವೆ, ರೂಲ್ಸ್ ಬ್ರೇಕ್ ಮಾಡಿದರೆ ಅಂತಹವರ ಲೈಸೆನ್ಸ್ ರದ್ದು ಮಾಡುತ್ತೇವೆ ಎಂದು ತಿಳಿಸಿದರು. ತುಮಕೂರು ಬಸ್ ಅಪಘಾತದಲ್ಲಿನ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಬಹಳ ಜನರು ಗಾಯಗೊಂಡಿದ್ದಾರೆ. ಹಾಗಾಗಿ ಸ್ವಲ್ಪ ತೊಂದರೆ ಆಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಪಾಕಿಸ್ತಾನಕ್ಕೆ ಅನಧಿಕೃತವಾಗಿ ಔಷಧ ರಫ್ತು

ಬೆಂಗಳೂರು, ಮಾ. ೨೦: ಅನಧಿಕೃತವಾಗಿ ಪಾಕಿಸ್ತಾನಕ್ಕೆ ಟ್ರಮಡಾಲ್ ನೋವು ನಿವಾರಕ ಔಷಧಿಗಳನ್ನು ರಫ್ತು ಮಾಡುತ್ತಿದ್ದ ಆರೋಪದ ಮೇರೆಗೆ ಬೆಂಗಳೂರಿನಲ್ಲಿ ತೆಲಂಗಾಣ ಮೂಲದ ಫಾರ್ಮಾ ಉದ್ಯಮಿಯನ್ನು ಬಂಧಿಸಲಾಗಿದೆ. ಬೆಂಗಳೂರು ವಲಯದ ಅಧಿಕಾರಿಗಳು ತೆಲಂಗಾಣ ಮೂಲದ ಲ್ಯೂಸೆಂಟ್ ಡ್ರಗ್ಸ್ ಪ್ರೆöÊವೇಟ್ ಲಿಮಿಟೆಡ್ ಕಂಪೆನಿ ನಿರ್ದೇಶಕ, ಉದ್ಯಮಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿರುವ ಕಂಪೆನಿ ಇದಾಗಿದ್ದು, ಈ ಕಂಪೆನಿ ಪಾಕಿಸ್ತಾನಕ್ಕೆ ವಾರ್ಷಿಕ ೨೫ ಸಾವಿರ ಕೆ.ಜಿ. ಟ್ರಮಡಾಲ್ ಡ್ರಗ್ ರಫ್ತು ಮಾಡುತ್ತಿತ್ತು. ಪಾಕಿಸ್ತಾನ ಸೇರಿದಂತೆ ಡೆನ್ಮಾರ್ಕ್, ಜರ್ಮನಿ, ಮಲೇಷ್ಯಾಗೂ ಈ ಔಷಧಿಯನ್ನು ರಫ್ತು ಮಾಡುತ್ತಿತ್ತು. ಲ್ಯೂಸೆಂಟ್ ಡ್ರಗ್ಸ್ ಕಂಪೆನಿ ಟ್ರಾಮಡೋಲ್ ರಫ್ತಿಗೆ ಯಾವುದೇ ಪರವಾನಗಿ ಹೊಂದಿರಲಿಲ್ಲ. ಹೀಗಾಗಿ ಈ ಸಂಬAಧ ದಾಖಲಾಗಿದ್ದ ದೂರಿನ ಮೇರೆಗೆ ದಾಳಿ ನಡೆಸಿದ ಎನ್‌ಸಿಬಿ ಅಧಿಕಾರಿಗಳು ಫಾರ್ಮಾ ಸಂಸ್ಥೆಯ ಮುಖ್ಯಸ್ಥ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.