ಮಡಿಕೇರಿ, ಮಾ. ೨೦: ಕೆಟಲ್‌ಬೆಲ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಜಿಲ್ಲೆಯವರಾದ ಮುಕ್ಕಾಟಿರ ಕಾವೇರಿ ಅವರು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ರಾಷ್ಟಿçÃಯ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಕಾವೇರಿ ಅವರು, ಈ ಸಾಲಿನಲ್ಲಿ ಪೋರ್ಚುಗಲ್‌ನಲ್ಲಿ ನಡೆಯುವ ಅಂತರರಾಷ್ಟಿçÃಯ ಮಟ್ಟದ ಕೆಟಲ್‌ಬೆಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು

(ಮೊದಲ ಪುಟದಿಂದ) ಕಾವೇರಿಯವರು ಪ್ರತಿನಿಧಿಸಲಿದ್ದಾರೆ.

ಬೆಂಗಳೂರಿನ ಕಲ್ಟ್ ಫಿಟ್ ಸ್ಟುಡಿಯೋದಲ್ಲಿ ‘ಫಿಟ್‌ನೆಸ್’ ತರಬೇತುದಾರರಾಗಿರುವ ಕಾವೇರಿಯವರು, ಕುಟ್ಟ ನಾಲ್ಕೇರಿ ಗ್ರಾಮದ ನಿವಾಸಿ ಹರಿಹರ ಮುಕ್ಕಾಟಿರ ಟಾಟು ಕಾವೇರಪ್ಪ ಹಾಗೂ ವಸಂತಿ (ತಾಮನೆ - ಮಾಂಗೆರ) ದಂಪತಿಯ ಪುತ್ರಿ.