ಸೋಮವಾರಪೇಟೆ, ಮಾ. ೨೧: ತಾ. ೨೩ ರಿಂದ ೨೫ರ ವರೆಗೆ ತಾಲೂಕಿನ ಅಂಕನಳ್ಳಿ ಗ್ರಾಮದ ಮನೆಹಳ್ಳಿ ಮಠದ ಆವರಣದಲ್ಲಿ ಕೃಷಿ ಸಂಬAಧಿತ ಇಲಾಖೆಗಳು, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಇವರ ಆಶ್ರಯದಲ್ಲಿ ನಡೆಯಲಿರುವ ಸಾವಯವ ಕೃಷಿ ಹಾಗೂ ಗೋ ಸಮ್ಮೇಳನದ ಸಿದ್ಧತೆಗಳನ್ನು ಜಿಲ್ಲೆಯ ಅಧಿಕಾರಿಗಳ ತಂಡÀ ಪರಿಶೀಲಿಸಿತು.
ಮಠದ ಸಮೀಪವಿರುವ ೩ ಎಕರೆ ವಿಶಾಲ ಪ್ರದೇಶದಲ್ಲಿ ಸಮ್ಮೇಳನದ ವೇದಿಕೆ ಹಾಗೂ ಸಭಾಂಗಣ, ೪೫ ವಿವಿಧ ಮಳಿಗೆಗಳು, ಊಟದ ಸಭಾಂಗಣ, ಗೋವುಗಳ ಪ್ರದರ್ಶಕ್ಕೆ ಸಿದ್ದತೆ ನಡೆಸಲಾಗುತ್ತಿದೆ. ಮೂರು ದಿನಗಳ ಕಾರ್ಯಕ್ರಮದಲ್ಲಿ ೨೩ ರಂದು ಪಶುವೈದ್ಯಕೀಯ ಶಿಬಿರ ಹಾಗೂ ನುರಿತ ವೈದ್ಯರಿಂದ ಪಶು ಸಾಕಾಣಿಕೆ ಬಗ್ಗೆ ಮಾರ್ಗದರ್ಶನ ನೀಡಲು ವ್ಯವಸ್ಥೆ ಮಾಡಲಾಗಿದೆ.
ತಾ. ೨೪ ರಂದು ಸಾವಯವ ಕೃಷಿ ಮತ್ತು ಗವ್ಯೋತ್ಪನ್ನಗಳ ಮಹತ್ವ, ಉತ್ಪಾದನೆ ಕುರಿತು ಕಾರ್ಯಾಗಾರ ನಡೆಯಲಿದ್ದು, ಕೃಷಿ ವಿಜ್ಞಾನ ಕೇಂದ್ರ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಮಾಹಿತಿ ನೀಡಲಿದ್ದಾರೆ. ತಾ. ೨೫ ರಂದು ರಾಜ್ಯ ಮಟ್ಟದ ಸಾವಯವ ಕೃಷಿ ಹಾಗೂ ಗೋ ಸಮ್ಮೇಳನ ನಡೆಯಲಿದೆ. ಸಮ್ಮೇಳನದಲ್ಲಿ ೫ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ಎಲ್ಲರಿಗೂ ಆಸನ, ಕುಡಿಯುವ ನೀರು, ಊಟೋಪಚಾರಕ್ಕೆ ಸಂಬAಧಿಸಿದAತೆ ಮನೆಹಳ್ಳಿ ಮಠಾಧೀಶರಾದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿಗಳು ಹಾಗೂ ಸಮ್ಮೇಳನ ಸಂಯೋಜಕರೊAದಿಗೆ ಚರ್ಚೆ ನಡೆಸಿದರು.
ಈ ಸಂದರ್ಭ ಕೊಡಗು ಜಿಲ್ಲಾ ಕೃಷಿ ಉಪನಿರ್ದೇಶಕರಾದ ಮುತ್ತುರಾಜ್, ತೋಟಗಾರಿಕೆ ಸಹಾಯಕ ನಿರ್ದೇಶಕ ಡಾ. ಮಂಜುನಾಥ್, ಸೋಮವಾರಪೇಟೆ ಕೃಷಿ ಸಹಾಯಕ ನಿರ್ದೇಶಕ ಯಾಧವಬಾಬು, ಮಡಿಕೇರಿ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಬಸವಲಿಂಗಯ್ಯ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು, ಶನಿವಾರಸಂತೆ ಪಶು ವೈದ್ಯಾಧಿಕಾರಿ ಬಿ.ಎಂ. ಸತೀಶ್, ಸಮ್ಮೇಳನ ಸಂಯೋಜಕರಾದ ಎಸ್. ಮಹೇಶ್, ನಾರಾಯಣ ಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.