ಗೋಣಿಕೊಪ್ಪ ವರದಿ, ಮಾ. ೨೦: ಬಲ್ಯಮುಂಡೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಾ. ೨೩ ರವರೆಗೆ ನಡೆಯಲಿರುವ ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜು ರಾಷ್ಟಿçÃಯ ಸೇವಾ ಯೋಜನೆಯ ಶಿಬಿರಕ್ಕೆ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಅಧ್ಯಕ್ಷ ಅಮೂರ್ತಾನಂದ ಸ್ವಾಮೀಜಿ ಚಾಲನೆ ನೀಡಿದರು.
ನಂತರ ಮಾತನಾಡಿ, ಆದರ್ಶಗಳಿದ್ದರೆ ಮಾತ್ರ ಜೀವನದಲ್ಲಿ ವಿಶೇಷತೆ ಸಾಧಿಸಲು ಸಾಧ್ಯವಿದ್ದು, ನಮ್ಮ ತಪ್ಪನ್ನು ತಿದ್ದಿಕೊಳ್ಳಲು ಕೂಡ ಅವಕಾಶವಿದೆ. ಬದುಕಿಗೆ ಬೇಕಾದ ಆದರ್ಶಗಳನ್ನು ನಾವು ನಮ್ಮ ಹಿರಿಯರಿಂದ ಅರಿತುಕೊಳ್ಳಬೇಕಿದೆ. ವಿದ್ಯಾರ್ಥಿ ಜೀವನದಲ್ಲಿ ಮನಸ್ಸು ಸಾಕಷ್ಟು ಕನಸುಗಳ ಹಿಂದೆ ಇರುತ್ತದೆ. ಮನಸನ್ನು ಹಿಡಿದಿಟ್ಟುಕೊಳ್ಳುವ ಕಲೆಯಿಂದ ಕನಸು ನುಚ್ಚು ನೂರಾಗದಂತೆ ತಡೆಯಲು ಸಾಧ್ಯವಿದೆ. ಶಿಸ್ತಿಗೆ ಆದ್ಯತೆ ನೀಡಬೇಕಿದೆ. ಫೀ. ಮಾ. ಕೆ. ಎಂ. ಕಾರ್ಯಪ್ಪ ಹಿಂದೆ ದೇಶದಲ್ಲಿ ಶಿಸ್ತು ಮೂಡಿಸಲು ೪೦ ವರ್ಷ ಸೇನಾಡಳಿತಕ್ಕೆ ಅವಕಾಶ ಸಿಗಬೇಕು ಎಂದು ಹೇಳಿದ್ದರು. ಶಿಸ್ತು ಕಾಪಾಡಿಕೊಳ್ಳಲು ಮುಂದಾಗಬೇಕು ಎಂದರು.
ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಮಾಳೇಟಿರ ಬಿ. ಕಾವೇರಪ್ಪ ಧ್ವಜಾರೋಹಣ ನೆರವೇರಿಸಿದರು. ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಚಿರಿಯಪಂಡ ಕೆ. ಉತ್ತಪ್ಪ, ಬಲ್ಯಮುಂಡೂರು ಗ್ರಾ.ಪಂ. ಮಾಜಿ ಅಧ್ಯಕ್ಷ ದೇಯಂಡ ಪಿ. ಅಣ್ಣಯ್ಯ, ಸದಸ್ಯ ಕೊಟ್ಟಂಗಡ ಜೆ. ಅಯ್ಯಪ್ಪ, ಜಿ.ಪಂ. ಮಾಜಿ ಸದಸ್ಯ ಪೆಮ್ಮಂಡ ಕೆ. ಪೊನ್ನಪ್ಪ, ಮುಖ್ಯ ಶಿಕ್ಷಕಿ ಬಿ.ಆರ್. ಮಾನಸ, ಪೊನ್ನಂಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಯೋಜನಾಧಿಕಾರಿಗಳಾದ ಮಂದೆಯAಡ ವನಿತ್‌ಕುಮಾರ್, ಎನ್.ಪಿ. ರೀತಾ ಇದ್ದರು.