ಇಂದು ವಿಶ್ವ ಅರಣ್ಯ ದಿನ

ಪ್ರತಿವರ್ಷ ಮಾರ್ಚ್ ೨೧ ರಂದು ವಿಶ್ವ ಅರಣ್ಯ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಇದು ಮನುಕುಲ ಉಳಿವು ಸೇರಿದಂತೆ ಇಡೀ ಜೀವಮಂಡಲದ ಜೀವ-ವೈವಿಧ್ಯತೆಯ ರಕ್ಷಣೆಯ ಕುರಿತು ಜಾಗೃತಿ ಮೂಡಿಸಲು ಸಹಕಾರಿಯಾಗಿದೆ.

೨೦೧೩ ರ ಮಾರ್ಚ್ ೨೧ ರಂದು ಮೊಟ್ಟ ಮೊದಲ ಬಾರಿಗೆ ಅಂರ‍್ರಾಷ್ಟಿçÃಯ ಅರಣ್ಯ ದಿನಾಚರಣೆಯನ್ನು ನವೆಂಬರ್ ೨೮, ೨೦೧೨ ರಂದು ನಡೆದ ಸಂಯುಕ್ತ ರಾಷ್ಟçಗಳ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದ ಅನುಸಾರ ಆಚರಿಸಲಾಯಿತು. ವಾಯುಗುಣದ ಬದಲಾವಣೆಯನ್ನು ನಿಯಂತ್ರಿಸಲು ವಿಶ್ವಸ್ಥರದ ಪ್ರಯತ್ನದ ಅವಶ್ಯಕತೆಯ ಅರಿವು ಮೂಡಿಸಲು ಹಾಗೂ ಅರಣ್ಯ ಮತ್ತು ಪರಿಸರದ ಸಂಬAಧವನ್ನು ಜನತೆಗೆ ತಿಳಿಸಿ ಭವಿಷ್ಯತ್ತಿನ ಯೋಜನೆಗಳನ್ನು ನಿರ್ಮಿಸಿ ಕಾರ್ಯಗತಗೊಳಿಸುವಲ್ಲಿ ಜೊತೆಗೂಡಿ ಕಾರ್ಯಕ್ರಮ ರೂಪಿಸುವ ಅವಶ್ಯಕತೆಯನ್ನು ಭಿತ್ತರಿಸಲಾಗುತ್ತದೆ.

ಸುಸ್ಥಿರ ಅರಣ್ಯ ನಿರ್ವಹಣೆ

ವಿಶ್ವ ಅರಣ್ಯ ದಿನಾಚರಣೆ ಸಂದರ್ಭದಲ್ಲಿ ಪ್ರತಿವರ್ಷ ಅರಣ್ಯ ರಕ್ಷಣೆಗೆ ಸಂಬAಧಿಸಿದAತೆ ಘೋಷವಾಕ್ಯವನ್ನು ನೀಡಲಾಗುತ್ತದೆ. ಅದರಂತೆ ಅರಣ್ಯಗಳು ‘ಸುಸ್ಥಿರ ಬೆಳವಣಿಗೆ ಮತ್ತು ಬಳಕೆ’ ಎಂಬುದು ೨೦೨೨ ರ ವಿಶ್ವ ಅರಣ್ಯ ದಿನಾಚರಣೆಯ ಮುಖ್ಯ ಧ್ಯೇಯವಾಗಿದೆ. ಅಂದರೆ ನಾವು ಸುಸ್ಥಿರ ಅರಣ್ಯ ನಿರ್ವಹಣೆ ಮೂಲಕ ಅರಣ್ಯವನ್ನು ಅಭಿವೃದ್ಧಿಪಡಿಸುವ ಮೂಲಕ ಅರಣ್ಯ ಉತ್ಪನ್ನಗಳ ಬಳಕೆಯನ್ನು ತಗ್ಗಿಸಿ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂಬುದು ಇದರ ಉದ್ದೇಶವಾಗಿದೆ.

ಸುಸ್ಥಿರ ಅರಣ್ಯ ನಿರ್ವಹಣೆಯು ಪರಿಸರ, ಆರ್ಥಿಕ ಹಾಗೂ ಸಾಮಾಜಿಕ- ಸಾಂಸ್ಕೃತಿಕ ಎಂಬ ಮೂರು ಪ್ರಮುಖ ಸ್ಥಂಭಗಳ ಮೂಲಕ ಅರಣ್ಯ ಸಮತೋಲನವನ್ನು ಇಟ್ಟುಕೊಳ್ಳಬೇಕು. ಸುಸ್ಥಿರ ಅರಣ್ಯ ನಿರ್ವಹಣೆಯನ್ನು ಯಶಸ್ವಿಯಾಗಿ ಸಾಧಿಸುವುದು, ಅರಣ್ಯದಲ್ಲಿ ಜೀವ ವೈವಿಧ್ಯ ಮತ್ತು ಪರಿಸರ ವ್ಯವಸ್ಥೆಗಳನ್ನು ರಕ್ಷಿಸುವುದು ಹಾಗೂ ಸ್ಥಳೀಯ ಜೀವನೋಪಾಯವನ್ನು ರಕ್ಷಿಸಲು ಇದು ಉತ್ತಮ ಅವಕಾಶವನ್ನು ಒದಗಿಸುತ್ತದೆ.

ಅರಣ್ಯದ ಮಹತ್ವ

ಜೀವ ಸಂಕುಲದ ತಾಣವಾದ ಅರಣ್ಯವನ್ನು ಅಂರ‍್ರಾಷ್ಟಿçÃಯ ಅರಣ್ಯ ವರ್ಷ ಆಚರಿಸುವ ಮೂಲಕ ಅರಣ್ಯಗಳಿಗೆ ವಿಶೇಷ ಮಹತ್ವ ಬಂದಿತು. ಹಾಗಾಗಿ, ನಾವು ಪ್ರತಿ ಕ್ಷಣವೂ ಅರಣ್ಯ ಉತ್ಪನ್ನಗಳನ್ನು ಬಳಸುತ್ತಾ, ಅರಣ್ಯವನ್ನು ನಾಶ ಮಾಡುತ್ತಲೇ ನಾವು ಬೆಳೆಯುತ್ತೇವೆ. ಆದರೆ ಅರಣ್ಯಗಳು ಬೆಳೆಯುತ್ತವೆಯೇ? ಈ ಪ್ರಶ್ನೆಗೆ ಉತ್ತರ ಕೊಡುವುದು ತೀರಾ ಕಷ್ಟ. ಎಲ್ಲಿ ನೋಡಿದರೂ ಅರಣ್ಯನಾಶದ ಚಿತ್ರಣವೇ ಕಂಡುಬರುತ್ತದೆ. ಭೂಮಿಯ ಮೇಲೆ ಜೀವಿಗಳಿರಲು ಅರಣ್ಯದ ಅವಶ್ಯಕತೆ ಇದೆ. ಅವು ನಮಗೆ ನೆರಳು ಮತ್ತು ಆಶ್ರಯ ನೀಡುತ್ತವೆ. ಶುದ್ಧ ಗಾಳಿ, ನೀರು ಮತ್ತು ಆಹಾರ ಪೂರೈಕೆ ಮಾಡುತ್ತವೆ. ಇಂದು ಹೆಚ್ಚುತ್ತಿರುವ ವಿಶ್ವದ ಜನಸಂಖ್ಯೆ ಮತ್ತು ಇದರಿಂದಾಗಿ ಹೆಚ್ಚುತ್ತಿರುವ ಅರಣ್ಯ ವಸ್ತುಗಳಿಂದಾಗಿ ವಿಶ್ವದ ಅರಣ್ಯಗಳು ವಿನಾಶ ಮತ್ತು ಅವನತಿಯತ್ತ ಸಾಗುತ್ತಿವೆ. ಒಂದು ಕಾಲದಲ್ಲಿ ದಟ್ಟ ಅರಣ್ಯಗಳಿಂದ ಕೂಡಿದ್ದ ಅರಣ್ಯ ಇಂದು ವಿವಿಧ ಜನತೆಯ ವಾಸಸ್ಥಾನವಾಗಿದೆ. ದಟ್ಟನೆಯ ಅರಣ್ಯದ ನೆರಳಿನಲ್ಲಿ ಒಂದನ್ನೊAದು ಅವಲಂಬಿತ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿ ಸಂಕುಲಗಳು ವಾಸಿಸುತ್ತವೆ. ಕೊಳೆತ ಎಲೆಗಳಿಂದೊಳಗೂಡಿದ ಮಣ್ಣಿನಲ್ಲಿ ಅಪಾರ ಪ್ರಮಾಣದ ಅಕಶೇರುಕ ಪ್ರಾಣಿಗಳು, ಸೂಕ್ಷö್ಮ ಬ್ಯಾಕ್ಟೀರಿಯಾ ಮತ್ತು ಶಿಲೀಂದ್ರಗಳು ವಾಸವಾಗಿದ್ದು, ಇವು ಮಣ್ಣು ಮತ್ತು ಅರಣ್ಯ ಸಸ್ಯಗಳ ನಡುವೆ ಪೋಷಕಾಂಶಗಳ ಹಸ್ತಾಂತರ ಮಾಡುವಲ್ಲಿ ಮಹತ್ವದ ಪಾತ್ರವಹಿಸುತ್ತವೆ.

ಇತ್ತೀಚಿನ ವರ್ಷಗಳಲ್ಲಿ ಅರಣ್ಯಗಳನ್ನು ಸಂರಕ್ಷಣೆ ಮಾಡಬೇಕೆಂಬ ಕಾಳಜಿ ಮೂಡುತ್ತಿದೆ ನಿಜ. ನಿಸರ್ಗ ಪ್ರೇಮಿಗಳ ಹಾಗೂ ಅರಣ್ಯ ತಜ್ಞರ ಒತ್ತಾಯದಿಂದಾಗಿ ಅನೇಕ ರಕ್ಷಿತಾರಣ್ಯಗಳು, ಅಭಯಾರಣ್ಯಗಳು, ನಿಸರ್ಗಧಾಮಗಳು ಸುಸ್ಥಿತಿಗೆ ಬರುತ್ತಿವೆ. ಕರ್ನಾಟಕದಲ್ಲಿ ನಾಗರಹೊಳೆ, ಬಂಡೀಪುರ, ದಾಂಡೇಲಿ, ಅಣಶಿ, ಕುದುರೆಮುಖ, ಭದ್ರಾ, ಬಿಳಿಗಿರಿರಂಗನ ಬೆಟ್ಟ ಇತ್ಯಾದಿ ಅರಣ್ಯ ಪ್ರದೇಶಗಳನ್ನು ಸಂರಕ್ಷಿತ ತಾಣಗಳೆಂದು ಘೋಷಿಸಲಾಗಿದೆ.

ಕಾಡು, ಮರ-ಗಿಡಗಳ ಗುಂಪಲ್ಲ

ಕಾಡು, ಇದು ಕೇವಲ ಮರ-ಗಿಡಗಳ ಗುಂಪಲ್ಲ. ಅದು ಪ್ರಕೃತಿಯ ಸಂಕೀರ್ಣ ವ್ಯವಸ್ಥೆ. ನೂರಾರು ಪ್ರಭೇದಗಳಿಗೆ ಸೇರಿದ ಮರಗಿಡ, ಬಳ್ಳಿ, ಪೊದೆ ಪೊದರುಗಳ ಜೊತೆಗೆ ಸಾವಿರಾರು ಜೀವಿ ಜಂತುಗಳಿಗೂ ಅದು ನೈಸರ್ಗಿಕ ನೆಲೆಯಾಗಿದೆ. ಇಲ್ಲಿ ಯಾವ ಜೀವಿಯೂ ಸರ್ವತಂತ್ರ ಸ್ವತಂತ್ರವಲ್ಲ. ಪ್ರತಿಯೊಂದು ಜೀವಿಯ ಉಳಿವಿಗೆ ಇನ್ನಿತರ ಜೀವಿಗಳು ಬೇಕೇ ಬೇಕು. ಈ ಅವಲಂಬನೆ ಎದ್ದು ಕಾಣುವುದು ಅಪರೂಪ. ಹೀಗಾಗಿ ಅರಣ್ಯ, ಪ್ರಕೃತಿಯ ನಿಯಮಗಳಿಗೆ ಅನುಸಾರವಾಗಿ ಕೆಲಸ ಮಾಡುವ ಒಂದು ಜೀವಜಾಲ. ಅರಣ್ಯಗಳು ಮಾಡುವ ಮೇಲ್ಮಣ್ಣಿನ ಸೃಷ್ಟಿ, ನೆಲದ ಸಾರ ಸಂರಕ್ಷಣೆ, ವಾಯು ಮಾಲಿನ್ಯ, ಸ್ಥಳೀಯ ಹವೆ ಹಾಗೂ ಪ್ರವಾಹಗಳ ನಿಯಂತ್ರಣ, ಶುದ್ಧ ಗಾಳಿ ಮತ್ತು ಅಂತರ್ಜಲದ ಸಂರಕ್ಷಣೆ ಮುಂತಾದ ಕೆಲಸಗಳಿಗೆ ಹಣಕಾಸಿನ ದೃಷ್ಠಿಯಿಂದ ಬೆಲೆ ಕಟ್ಟಲಾಗುವುದಿಲ್ಲ.

ಜೀವಿ - ವೈವಿಧ್ಯದ ನೆಲೆ

ಶ್ರೀಮಂತ ಜೀವಿ - ವೈವಿಧ್ಯದ ನೆಲೆಯಾದ ಅರಣ್ಯದಲ್ಲಿ ವೈವಿಧ್ಯಮಯವಾದ ಸೂಕ್ಷö್ಮಜೀವಿಗಳು, ಸಸ್ಯಗಳು ಮತ್ತು ಪ್ರಾಣಿಗಳು ರೂಪುಗೊಂಡಿವೆ. ಆದರೆ ನಾವು ಕೈಗಾರಿಕಾ ಕ್ರಾಂತಿ, ಕೃಷಿ ಅಭಿವೃದ್ಧಿ, ಗಣಿಗಾರಿಕೆ ಮತ್ತಿತರ ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ಅರಣ್ಯ ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳನ್ನು ನಾಶ ಮಾಡುತ್ತಾ ಬಂದಿದ್ದೇದೆ.

ಜೀವ - ವೈವಿಧ್ಯತೆಯ ಶ್ರೀಮಂತ ತಾಣ ಹಾಗೂ ಜೀವಿ ಪರಿಸರದ ಕೊಂಡಿಯಾಗಿರುವ ಪಶ್ಚಿಮಘಟ್ಟದಲ್ಲಿರುವ ಅಪರೂಪದ ಸಸ್ಯ ಹಾಗೂ ಜೀವಿ ಸಂಪತ್ತನ್ನು ಸಂರಕ್ಷಿಸಬೇಕಿದೆ. ಇಲ್ಲಿನ ಜೀವಿ - ವೈವಿಧ್ಯ ಸಂಪತ್ತಿಗೆ ಯಾವುದೇ ಧಕ್ಕೆಯನ್ನುಂಟು ಮಾಡದೆ ಭವಿಷ್ಯಕ್ಕಾಗಿ ನಿಯಮಿತವಾಗಿ ಬಳಸಿ ಈ ಅಮೂಲ್ಯ ಅರಣ್ಯ ಸಂಪತ್ತಿನ ಸುಸ್ಥಿರತೆ ಉಳಿಸಿಕೊಳ್ಳಬೇಕಾಗಿದೆ.

- ಟಿ.ಜಿ. ಪ್ರೇಮಕುಮಾರ್, ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕೂಡುಮಂಗಳೂರು. ಮೊ. ೯೪೪೮೫ ೮೮೩೫೨