ಗೋಣಿಕೊಪ್ಪ ವರದಿ, ಮಾ. ೨೦: ಮೂರ್ನಾಡು ಬಾಚೇಟೀರ ಲಾಲು ಮುದ್ದಯ್ಯ ಮೈದಾನದಲ್ಲಿ ಬ್ಲೇಜ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಡೆದ ಹಾಕಿ ಕಪ್ ಅನ್ನು ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ತಂಡ ಮುಡಿಗೇರಿಸಿಕೊಂಡಿತು. ನಾಲಡಿ ತಂಡವು ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಅಮ್ಮತ್ತಿ ತಂಡವು ಶೂಟೌಟ್‌ನಲ್ಲಿ ೨-೧ ಗೋಲುಗಳಿಂದ ಜಯಿಸಿತು. ಉಭಯ ತಂಡಗಳು ಪಂದ್ಯದ ಅವಧಿಯಲ್ಲಿ ಗೋಲು ದಾಖಲಿಸಲಾಗದೆ ಪರದಾಡಿತು. ನಂತರ ನಡೆದ ಟೈಬ್ರೇಕರ್‌ನಲ್ಲಿ ಅಮ್ಮತ್ತಿ ಆಟಗಾರರಾದ ಮುಖೇಶ್ ಮತ್ತು ಪ್ರತಿಕ್ ಗೋಲು ಹೊಡೆದು ಗೆಲುವು ತಂದುಕೊಟ್ಟರು. ನಾಲಡಿ ಪರ ಯಶ್ವಂತ್ ಗೋಲು ಹೊಡೆದರು.
ಸೆಮಿ ಫೈನಲ್‌ನಲ್ಲಿ ನಾಲಡಿ ತಂಡವು ಬಲಮುರಿ ವಿರುದ್ದ ೫-೪ ಗೋಲುಗಳಿಂದ ಸಡನ್ ಡೆತ್‌ನಲ್ಲಿ ಗೆಲುವು ಪಡೆದುಕೊಂಡಿತು. ಪಂದ್ಯದ ಅವಧಿಯಲ್ಲಿ ಉಭಯ ತಂಡಗಳು ಗೋಲು ದಾಖಲಿಸದೆ ಸೊನ್ನೆ ಸುತ್ತಿದವು. ಶೂಟೌಟ್‌ನಲ್ಲಿ ೪-೪ ಗೋಲುಗಳಿಂದ ಟೈ ಆಯಿತು. ಸಡನ್ ಡೆತ್‌ನಲ್ಲಿ ನಾಲಡಿ ಗೋಲು ಹೊಡೆದು ಫೈನಲ್‌ಗೆ ಪ್ರವೇಶ ಪಡೆಯಿತು. ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ತಂಡವು ಕೋಣನಕಟ್ಟೆ ತಂಡವನ್ನು ೪-೦ ಗೋಲುಗಳಿಂದ ಸೋಲಿಸಿತು. ೮ ಮತ್ತು ೨೬ನೇ ನಿಮಿಷಗಳಲ್ಲಿ ಅಯ್ಯಪ್ಪ, ೨೧ ರಲ್ಲಿ ಅಚ್ಚಯ್ಯ, ೨೯ ರಲ್ಲಿ ಪೂಣಚ್ಚ ಗೋಲು ಹೊಡೆದರು. ನಾಲಡಿ ತಂಡದ ಆಟಗಾರಯಶ್ವಂತ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಬಿದ್ದಾಟಂಡ ಗಿರೀಶ್ ಪೊನ್ನಣ್ಣ ಉತ್ತಮ ಗೋಲ್ ಕೀಪರ್, ಪೊನ್ನೋಲತಂಡ ನಾಣಯ್ಯ ಬೆಸ್ಟ್ ಬ್ಯಾಕ್, ನೆಲ್ಲಮಕ್ಕಡ ಪ್ರಧಾನ್ ಚಂಗಪ್ಪ ಬೆಸ್ಟ್ ಹಾಫ್, ಕೋಳೇರ ಮಿಲನ್ ಬೆಸ್ಟ್ ಫಾರ್ವರ್ಡ್ ಪ್ರಶಸ್ತಿ ಪಡೆದರು.
ಟೂರ್ನಿ ನಿರ್ದೇಶಕ ಕೋಡಿಮಣಿಯಂಡ ಗಣಪತಿ, ತೀರ್ಪುಗಾರ ಪಡೆಯಿತು.
ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ತಂಡವು ಕೋಣನಕಟ್ಟೆ ತಂಡವನ್ನು ೪-೦ ಗೋಲುಗಳಿಂದ ಸೋಲಿಸಿತು. ೮ ಮತ್ತು ೨೬ನೇ ನಿಮಿಷಗಳಲ್ಲಿ ಅಯ್ಯಪ್ಪ, ೨೧ ರಲ್ಲಿ ಅಚ್ಚಯ್ಯ, ೨೯ ರಲ್ಲಿ ಪೂಣಚ್ಚ ಗೋಲು ಹೊಡೆದರು. ನಾಲಡಿ ತಂಡದ ಆಟಗಾರ ಯಶ್ವಂತ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಬಿದ್ದಾಟಂಡ ಗಿರೀಶ್ ಪೊನ್ನಣ್ಣ ಉತ್ತಮ ಗೋಲ್ ಕೀಪರ್, ಪೊನ್ನೋಲತಂಡ ನಾಣಯ್ಯ ಬೆಸ್ಟ್ ಬ್ಯಾಕ್, ನೆಲ್ಲಮಕ್ಕಡ ಪ್ರಧಾನ್ ಚಂಗಪ್ಪ ಬೆಸ್ಟ್ ಹಾಫ್, ಕೋಳೇರ ಮಿಲನ್ ಬೆಸ್ಟ್ ಫಾರ್ವರ್ಡ್ ಪ್ರಶಸ್ತಿ ಪಡೆದರು.

ಟೂರ್ನಿ ನಿರ್ದೇಶಕ ಕೋಡಿಮಣಿಯಂಡ ಗಣಪತಿ, ತೀರ್ಪುಗಾರ
ಚೋಯಮಾಡಂಡ ಚಂಗಪ್ಪ, ವಿನೋದ್‌ಕುಮಾರ್, ಸಾಕ್ಷಿ, ವೀಕ್ಷಿತಾ, ತೃಪ್ತಿ ಕಾರ್ಯ ನಿರ್ವಹಿಸಿದರು.