ಚೆಯ್ಯAಡಾಣೆ, ಮಾ ೨೧: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಯ್ಯಂಡಾಣೆ ಪಾರಾಣೆ ಮುಖ್ಯರಸ್ತೆಯ ತೋಟಂಬೈಲು ಸೇತುವೆಯಲ್ಲಿ ಕಸದ ರಾಶಿಯನ್ನು ತಂದು ಸುರಿದವರಿಗೆ ದಂಡ ವಿಧಿಸಿ ಕ್ರಮ ವಹಿಸಲಾಯಿತು. ಕೂಡಲೇ ಚೆಯ್ಯಂಡಾಣೆ, ಮಾ ೨೧: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಯ್ಯಂಡಾಣೆ ಪಾರಾಣೆ ಮುಖ್ಯರಸ್ತೆಯ ತೋಟಂಬೈಲು ಸೇತುವೆಯಲ್ಲಿ ಕಸದ ರಾಶಿಯನ್ನು ತಂದು ಸುರಿದವರಿಗೆ ದಂಡ ವಿಧಿಸಿ ಕ್ರಮ ವಹಿಸಲಾಯಿತು. ಕೂಡಲೇ ಹೊಟೇಲೊಂದರ ಮಾಲೀಕರನ್ನು ಸಂಪರ್ಕಿಸಿ ಹೊಟೇಲ್ ಮಾಲೀಕರು ತಪ್ಪೊಪ್ಪಿಕೊಂಡಿದ್ದರಿAದ ಗ್ರಾಮ ಪಂಚಾಯಿತಿ ವತಿಯಿಂದ ರೂ.೧,೦೦೦ ದಂಡ ವಿಧಿಸಲಾಯಿತು.
ಇದೇ ರೀತಿ ಮತ್ತೋರ್ವ ವ್ಯಕ್ತಿ ತ್ಯಾಜ್ಯ ಸುರಿದಿರುವುದು ತಿಳಿದುಬಂದ ಹಿನ್ನೆಲೆ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿ ವಿಚಾರಣೆ ನಡೆಸಿ ಅವರಿಗೆ ರೂ. ೨ ಸಾವಿರ ದಂಡ ವಿಧಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಮಾತನಾಡಿ, ಕಸದ ರಾಶಿ ಸುರಿದವರ ಮೇಲೆ ಕ್ರಮ ಕೈಗೊಳ್ಳಲಾಗಿದ್ದು, ಇನ್ನು ಮುಂದಕ್ಕೆ ಕಸದ ರಾಶಿಗಳನ್ನು ಹೊಳೆ ಬದಿ ಅಥವಾ ಹೊಳೆಯಲ್ಲಿ ಹಾಕಿ ಮಲಿನ ಗೊಳಿಸುವವರನ್ನು ಪತ್ತೆ ಹಚ್ಚಿ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ಕೋಡಿರ ವಿನೋದ್ ನಾಣಯ್ಯ, ವಿಲೀನ್, ಪಂಚಾಯಿತಿ ಸಿಬ್ಬಂದಿ ದಿನೇಶ್ ಕುಮಾರ್ ಹಾಜರಿದ್ದರು.
-ಅಶ್ರಫ್ ಚೆಯ್ಯಂಡಾಣೆ