ಮಡಿಕೇರಿ, ಮಾ. ೨೧: ಅಕ್ರಮವಾಗಿ ಮನೆ ನಿರ್ಮಿಸಲಾಗಿದೆ ಎಂಬ ಆರೋಪದ ಹಿನ್ನೆಲೆ ಮನೆ ಕೆಡವಲು ತೆರಳಿದ ಸಂದರ್ಭ ಮನೆಯವರು ಗ್ಯಾಸ್ ಸಿಲಿಂಡರ್ ಸೋರಿಕೆ ಮಾಡಿಕೊಂಡು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದಾಗ ಮನೆ ಕೆಡವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಘಟನೆ ನಡೆದಿದೆ.
ನಗರದ ಚೈನ್‌ಗೇಟ್ ನಿವಾಸಿ, ಚಿತ್ರಕಲಾವಿದ ಸಂದೀಪ್ ಕುಟುಂಬ ವಾಸವಿರುವ ಮನೆಯನ್ನು ಅಧಿಕಾರಿಗಳು ಕೆಡವಲು ಹೋದ ಮಡಿಕೇರಿ, ಮಾ. ೨೧: ಅಕ್ರಮವಾಗಿ ಮನೆ ನಿರ್ಮಿಸಲಾಗಿದೆ ಎಂಬ ಆರೋಪದ ಹಿನ್ನೆಲೆ ಮನೆ ಕೆಡವಲು ತೆರಳಿದ ಸಂದರ್ಭ ಮನೆಯವರು ಗ್ಯಾಸ್ ಸಿಲಿಂಡರ್ ಸೋರಿಕೆ ಮಾಡಿಕೊಂಡು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದಾಗ ಮನೆ ಕೆಡವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಘಟನೆ ನಡೆದಿದೆ.
ನಗರದ ಚೈನ್‌ಗೇಟ್ ನಿವಾಸಿ, ಚಿತ್ರಕಲಾವಿದ ಸಂದೀಪ್ ಕುಟುಂಬ ವಾಸವಿರುವ ಮನೆಯನ್ನು ಅಧಿಕಾರಿಗಳು ಕೆಡವಲು ಹೋದ ಅಧಿಕಾರಿಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದರು.
ಅದಲ್ಲದೆ ಕಲಾವಿದ ಸಂದೀಪ್ ನಗರಸಭೆ ಪೌರಾಯುಕ್ತ ಹಾಗೂ ಸದಸ್ಯೆಯನ್ನು ಬಿಂಬಿಸಿ ವ್ಯಂಗ್ಯಚಿತ್ರ ಬಿಡಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪದಲ್ಲಿ ವಶಪಡಿಸಿಕೊಂಡಿದ್ದು, ನಗರಸಭೆ ಸದಸ್ಯೆಯ ದೂರಿನ ಹಿನ್ನೆಲೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆಯಲ್ಲಿ ಸಂದೀಪ್ ಅವರ ಅಮ್ಮ, ಅಪ್ಪ, ಸಹೋದರ ಇದ್ದ ಸಂದರ್ಭ ಮನೆ ಕೆಡವಲು ಮುಂದಾಗಿದ್ದಾರೆ.
ಈ ಬಗ್ಗೆ ಮನೆಯವರು ಅಸಮಾಧಾನ ವ್ಯಕ್ತಪಡಿಸಿದ್ದು, ಯಾವುದೇ ನೋಟೀಸ್ ನೀಡದೆ ದಿಡೀರ್ ಆಗಿ ಈ ರೀತಿಯ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ. ಮನೆ ಸಕ್ರಮಕ್ಕೆ ಅರ್ಜಿಯನ್ನು ಸಲ್ಲಿಸಲಾಗಿದ್ದು, ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.