ಕುಶಾಲನಗರ, ಮಾ. ೨೦: ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ನಿವೃತ್ತ ಸರ್ಕಾರಿ ನೌಕರರ ಸಂಘಕ್ಕೆ ನಿವೇಶನ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಸಂಘದ ಮಹಾಸಭೆಯಲ್ಲಿ ತೀರ್ಮಾನಿಸಲಾಯಿತು.

ಸ್ಥಳೀಯ ಮಹಾಲಕ್ಷಿö್ಮ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಸಿದ್ದಪ್ಪ ಅಧ್ಯಕ್ಷತೆಯಲ್ಲಿ ನಡೆದ ೨೦೨೦-೨೧ ನೇ ಸಾಲಿನ ಮಹಾಸಭೆಯಲ್ಲಿ ಕುಶಾಲನಗರ ಪಟ್ಟಣದಲ್ಲಿ ಸಂಘಕ್ಕೆ ಸ್ವಂತ ಕಚೇರಿಗಾಗಿ ನಿವೇಶನದ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲು ನಿರ್ಧರಿಸಲಾಯಿತು.

ಸಂಘದ ಸದಸ್ಯರ ಹಿತದೃಷ್ಟಿಯಿಂದ ಆರೋಗ್ಯ ವಿಮೆ ಹಾಗೂ ರೂ.ಐದು ಸಾವಿರ ಮರಣ ನಿಧಿ ಸ್ಥಾಪಿಸಲು ಸದಸ್ಯರ ಒಮ್ಮತದ ಮೇರೆಗೆ ತೀರ್ಮಾನಿಸಲಾಯಿತು. ಸಂಘದ ಬೆಳವಣಿಗೆ ದೃಷ್ಟಿಯಿಂದ ಸದಸ್ಯತ್ವ ಅಭಿಯಾನ ಕೈಗೊಂಡು ನಿವೃತ್ತ ಎಸ್ಸಿ, ಎಸ್ಟಿ ನೌಕರರನ್ನು ಸದಸ್ಯರಾಗಿ ಮಾಡಿಕೊಳ್ಳಲು ತೀರ್ಮಾನ ತೆಗೆದುಕೊಳ್ಳಲಾಯಿತು. ಸದಸ್ಯರು ವಾರ್ಷಿಕ ಐದು ನೂರು ರೂಪಾಯಿ ನವೀಕರಣ ಶುಲ್ಕ ಪಾವತಿಸಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಯು.ಟಿ.ರಾಮಯ್ಯ ಕಳೆದ ಸಾಲಿನ ವಾರ್ಷಿಕ ವರದಿ, ೨೦೨೨-೨೩ನೇ ಸಾಲಿನ ಮುಂಗಡ ಕ್ರಿಯಾಯೋಜನೆಯನ್ನು ಸಭೆಗೆ ನಿಧಿ ಸ್ಥಾಪಿಸಲು ಸದಸ್ಯರ ಒಮ್ಮತದ ಮೇರೆಗೆ ತೀರ್ಮಾನಿಸಲಾಯಿತು. ಸಂಘದ ಬೆಳವಣಿಗೆ ದೃಷ್ಟಿಯಿಂದ ಸದಸ್ಯತ್ವ ಅಭಿಯಾನ ಕೈಗೊಂಡು ನಿವೃತ್ತ ಎಸ್ಸಿ, ಎಸ್ಟಿ ನೌಕರರನ್ನು ಸದಸ್ಯರಾಗಿ ಮಾಡಿಕೊಳ್ಳಲು ತೀರ್ಮಾನ ತೆಗೆದುಕೊಳ್ಳಲಾಯಿತು. ಸದಸ್ಯರು ವಾರ್ಷಿಕ ಐದು ನೂರು ರೂಪಾಯಿ ನವೀಕರಣ ಶುಲ್ಕ ಪಾವತಿಸಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಯು.ಟಿ.ರಾಮಯ್ಯ ಕಳೆದ ಸಾಲಿನ ವಾರ್ಷಿಕ ವರದಿ, ೨೦೨೨-೨೩ನೇ ಸಾಲಿನ ಮುಂಗಡ ಕ್ರಿಯಾಯೋಜನೆಯನ್ನು ಸಭೆಗೆ ನೀಡಿದರು.

ಕಾರ್ಯಕಾರಿ ಸಮಿತಿಗೆ ಆಯ್ಕೆ : ಸಂಘದ ಕಾರ್ಯಕಾರಿ ಸಮಿತಿಗೆ ಸಿದ್ದಪ್ಪ, ಬಿ.ಸಿ.ರಾಜು, ಯು.ಟಿ. ರಾಮಯ್ಯ, ನಿಂಗರಾಜು, ಗಣೇಶ್, ರಾಮಚಂದ್ರಮೂರ್ತಿ, ಪಾರ್ವತಮ್ಮ, ಕಮಲಮ್ಮ, ಎ.ಎಸ್. ಜೋಯ್ಯಪ್ಪ, ಎಸ್.ಬಿ.ಜಯಪ್ಪ, ಟಿ.ಎಸ್. ಗೋವಿಂದಪ್ಪ, ಗಂಗಾಧರ್, ಬೆಳ್ಳಿಯಪ್ಪ ಸೇರಿದಂತೆ ೧೫ ಸದಸ್ಯರನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಯಿತು. ಇದೇ ಸಂದರ್ಭ ಸಂಘದ ಹಿರಿಯ ಸದಸ್ಯರಾದ ಬಿ.ಸಿ. ರಾಜು ಅವರನ್ನು ಸನ್ಮಾನಿಸಲಾಯಿತು.