ಪೊನ್ನಂಪೇಟೆ, ಮಾ. ೧೮: ಎನ್.ಸಿ.ಸಿ.ಯ ವಿವಿಧ ಯೋಜನೆ ಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಶಾಲೆಗಳಿಗೆ ನೀಡಲಾಗುವ ‘ಅತ್ಯುತ್ತಮ ಎನ್.ಸಿ.ಸಿ. ಶಾಲಾ’ ಪ್ರಶಸ್ತಿಯನ್ನು ಗೋಣಿಕೊಪ್ಪಲಿನ ಪೊನ್ನಂಪೇಟೆ, ಮಾ. ೧೮: ಎನ್.ಸಿ.ಸಿ.ಯ ವಿವಿಧ ಯೋಜನೆ ಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಶಾಲೆಗಳಿಗೆ ನೀಡಲಾಗುವ ‘ಅತ್ಯುತ್ತಮ ಎನ್.ಸಿ.ಸಿ. ಶಾಲಾ’ ಪ್ರಶಸ್ತಿಯನ್ನು ಗೋಣಿಕೊಪ್ಪಲಿನ ಎನ್.ಸಿ.ಸಿ. ಶಾಲೆ’ ಎಂಬ ಪ್ರಥಮ ಸ್ಥಾನದ ಗೌರವಕ್ಕೆ ಕಾಪ್ಸ್ ಪಾತ್ರವಾಗಿತ್ತು. ಮಂಗಳೂರು ಗ್ರೂಪ್ನ ಮಡಿಕೇರಿಯ ೧೯ನೇ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಅಧೀನದಲ್ಲಿರುವ ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಶಾಲೆ ಇದೇ ಮೊದಲ ಬಾರಿಗೆ ಈ ಗೌರವವನ್ನು ತನ್ನದಾಗಿಸಿಕೊಂಡಿದೆ.
ಬೆAಗಳೂರಿನ ಕ್ರೆöÊಸ್ಟ್ ವಿಶ್ವವಿದ್ಯಾಲಯದ ಪ್ರಧಾನ ಆವರಣದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಎನ್.ಸಿ.ಸಿ.ಯ ಕರ್ನಾಟಕ -ಗೋವಾ ನಿರ್ದೇಶನಾಲಯದ ಮುಖ್ಯಸ್ಥರಾದ ಏರ್ ಕಮೋಡೊರ್ ಭೂಪಿಂದರ್ ಸಿಂಗ್ ಖನ್ವರ್ ಅವರು ಕಾಪ್ಸ್ ವಿದ್ಯಾಸಂಸ್ಥೆಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಪ್ರಶಸ್ತಿಯನ್ನು ಎನ್.ಸಿ.ಸಿ. ಮಂಗಳೂರು ಗ್ರೂಪಿನ ಗ್ರೂಪ್ ಕಮಾಂಡರ್ ಕರ್ನಲ್ ಎ.ಕೆ. ಶರ್ಮ, ಮಡಿಕೇರಿಯ ೧೯ನೇ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ.ಯ ಕಮಾಂಡಿAಗ್ ಆಫೀಸರ್ ಕರ್ನಲ್ ಚೇತನ್ ದಿಮನ್, ಕಾಪ್ಸ್ ಶಾಲೆಯ ಪ್ರಾಂಶುಪಾಲರಾದ ಡಾ. ಬೆನ್ನಿ ಕುರಿಯಕೊಸ್ ಹಾಗೂ ಕಾಪ್ಸ್ನ ಎನ್.ಸಿ.ಸಿ. ಮುಖ್ಯಸ್ಥರಾದ ಡಾ. ಕ್ಯಾಪ್ಟನ್ ಬಿ.ಎಂ. ಗಣೇಶ್ ಸ್ವೀಕರಿಸಿದರು.