ಮಡಿಕೇರಿ, ಮಾ. ೨೧: ಅಂತರರಾಷ್ಟಿçÃಯ ಸೇವಾ ಸಂಸ್ಥೆಯಾಗಿ ವಿಶ್ವದಾದ್ಯಂತ ಕಾರ್ಯನಿರ್ವಹಿಸುತ್ತಿರುವ ರೋಟರಿ ಸಂಸ್ಥೆಯ ಜನಸೇವಾ ಚಟುವಟಿಕೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಹಲವಾರು ಊರುಗಳ ಮೂಲಕ ರೋಟರಿ ಸಾರ್ವಜನಿಕ ಮಾಹಿತಿಯ ರೋಟರಿಯನ್ನು ಸಂಭ್ರಮಿಸಿ ಹೆಸರಿನ ಜಾಥಾ ತಾ. ೨೨ ರಂದು (ಇಂದು) ಸಾಗಲಿದೆ ಎಂದು ರೋಟರಿ ವಲಯ ೬ರ ಉಪರಾಜ್ಯಪಾಲ ಅನಿಲ್ ಎಚ್.ಟಿ. ತಿಳಿಸಿದ್ದಾರೆ.
ತಾ. ೨೧ ರಂದು ಸುಬ್ರಹ್ಮಣ್ಯದಿಂದ ಶನಿವಾರಸಂತೆ ಮೂಲಕ ಕೊಡಗು ಪ್ರವೇಶಿಸಲಿರುವ ಜಾಥಾವು. ಶನಿವಾರಸಂತೆಯಲ್ಲಿ ಮಧ್ಯಾಹ್ನ ೧೨ ಗಂಟೆಗೆ, ಸೋಮವಾರಪೇಟೆಯಲ್ಲಿ ಮಧ್ಯಾಹ್ನ ೩ ಗಂಟೆ ವೇಳೆಗೆ ಸಾರ್ವಜನಿಕರಿಗೆ ರೋಟರಿ ಕುರಿತಂತೆ ಮಾಹಿತಿ ನೀಡಲಿದೆ. ಮಂಗಳವಾರ ಸಂಜೆ ೫ ಗಂಟೆಗೆ ಮಡಿಕೇರಿಯ ರಾಜಾಸೀಟ್ನಲ್ಲಿ ಜಾಥಾಕ್ಕೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ಪೊಲೀಸ್ ವರಿಷ್ಠಾಧಿಕಾರಿ ಎಂ.ಅಯ್ಯಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ನಂಜುAಡೇಗೌಡ, ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾಪೂವಯ್ಯ, ಉಪಾಧ್ಯಕ್ಷೆ ಸವಿತಾರಾಕೇಶ್, ಪೌರಾಯುಕ್ತ ರಾಮದಾಸ್ ಸೇರಿದಂತೆ ಪ್ರಮುಖರು ಚಾಲನೆ ನೀಡಲಿದ್ದಾರೆ. ರೋಟರಿ ಸಭಾಂಗಣದಲ್ಲಿ ಅಂದು ಸಂಜೆ ೭ ಗಂಟೆಗೆ ಮಡಿಕೇರಿ ರೋಟರಿ ಮತ್ತು ರೋಟರಿ ಮಿಸ್ಟಿ ಹಿಲ್ಸ್ ಸಂಯುಕ್ತಾಶ್ರಯದಲ್ಲಿ ವಿವಿಧ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದ್ದು ಕಾಲು ಕಳೆದುಕೊಂಡು ಮನೆಯಲ್ಲಿಯೇ ಇರಬೇಕಾದ ಸ್ಥಿತಿಯಲ್ಲಿನ ಮೂವರಿಗೆ ಗಾಲಿಕುರ್ಚಿ ನೆರವು ನೀಡಲಾಗುತ್ತದೆ ಎಂದು ಅನಿಲ್ ಎಚ್.ಟಿ. ಮಾಹಿತಿ ನೀಡಿದ್ದಾರೆ.