ಮಡಿಕೇರಿ, ಮಾ. ೧೯: ಹಾಕಿ ಇಂಡಿಯಾ ಹಿರಿಯ ಪುರುಷರ ೧೨ನೇ ರಾಷ್ಟಿçÃಯ ಚಾಂಪಿಯನ್ ಶಿಪ್ ಸಲುವಾಗಿ ಆಯ್ಕೆ ಪ್ರಕ್ರಿಯೆ ತಾ. ೨೧ ರಂದು ನಡೆಯಲಿದೆ. ಬೆಂಗಳೂರಿನ ಫೀ.ಮಾ. ಕಾರ್ಯಪ್ಪ ಹಾಕಿ ಅರೇನಾದಲ್ಲಿ ತಾ. ೨೧ರ ಬೆಳಿಗ್ಗೆ ೯.೩೦ಕ್ಕೆ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಆಯ್ದ ಹಾಕಿಪಟುಗಳು ಮಧ್ಯಪ್ರದೇಶದ ಭೂಪಾಲ್‌ನಲ್ಲಿ ಏಪ್ರಿಲ್ ೬ ರಿಂದ ಏಪ್ರಿಲ್ ೧೭ರ ವರೆಗೆ ನಡೆಯಲಿರುವ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.