ಶನಿವಾರಸಂತೆ, ಮಾ. ೧೯: ತ್ಯಾಗರಾಜ ಕಾಲೋನಿಯ ಕಾರ್ಮಿಕ ಇಬ್ರಾಹಿಂ (೪೮) ಎಂಬವರು ಟಿಂಬರ್ ಕೆಲಸಕ್ಕೆಂದು ಇರ್ಫಾನ್ ಎಂಬವರೊAದಿಗೆ ಕಣಗಾಲು ಗ್ರಾಮಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಮಾಲಂಬಿ ಗ್ರಾಮದ ರಸ್ತೆಯಲ್ಲಿ ಅಪಘಾತಕ್ಕೊಳಗಾಗಿ ಗಾಯಗೊಂಡಿದ್ದಾರೆ.

ಗಾಯಾಳುವನ್ನು ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.