ಶನಿವಾರಸಂತೆ, ಮಾ. ೧೮: ಅಪ್ರಾಪ್ತ ಯುವತಿಗೆ ಡ್ಯಾನ್ಸ್ ಕಲಿಸುವುದಾಗಿ ಹೇಳಿ ಡ್ಯಾನ್ಸ್ ಕ್ಲಾಸ್‌ಗೆ ಕರೆಸಿಕೊಂಡ ನೃತ್ಯ ತರಬೇತುದಾರ ಪ್ರೀತಿಸುವಂತೆ ಒತ್ತಾಯಿಸಿ, ಕೊಲೆ ಬೆದರಿಕೆ ಹಾಕಿರುವುದಾಗಿ ಯುವತಿಯ ಪೋಷಕರು ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೋಕ್ಸೊ ಪ್ರಕರಣ ದಾಖಲಾಗಿದೆ.

ಆರೋಪಿ ಕುಶಾಲನಗರದ ಸಲ್ಮಾನ್ ಖಾನ್ (೨೪) ಸ್ಥಳೀಯ ಯಶಸ್ವಿ ಥಿಯೇಟರ್ ಪಕ್ಕದ ಡ್ಯಾನ್ಸ್ ಕ್ಲಾಸ್‌ನ ಶಿಕ್ಷಕ. ಯುವತಿ ಪಿಯು ವಿದ್ಯಾರ್ಥಿನಿಯಾಗಿದ್ದು, ಕಾಲೇಜಿಗೆ ಹೋಗಲು ಬಂದಾಗ ಸಲ್ಮಾನ್ ಖಾನ್ ಆಕೆಯನ್ನು ಡ್ಯಾನ್ಸ್ ಕ್ಲಾಸ್‌ಗೆ ಎಳೆದೊಯ್ದು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಾಹಿತಿ ತಿಳಿದ ಹಿಂದೂ ಸಂಘಟಕರು

ಪ್ರೀತಿಸುವಂತೆ ಒತ್ತಾಯ - ಕೊಲೆ ಬೆದರಿಕೆ

(ಮೊದಲ ಪುಟದಿಂದ) ಡ್ಯಾನ್ಸ್ ಕ್ಲಾಸ್‌ಗೆ ಬಂದು ಪೊಲೀಸರಿಗೆ ಮಾಹಿತಿ ನೀಡಿ, ಯುವಕ, ಯುವತಿಯನ್ನು ಪೊಲೀಸರು ಠಾಣೆಗೆ ಕರೆದೊಯ್ದರು. ಪೊಲೀಸ್ ಠಾಣೆ ಮುಂಭಾಗ ಜಮಾಯಿಸಿದ ಹಿಂದೂ ಸಂಘಟಕರು ಯುವಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸುವಂತೆ ಒತ್ತಾಯಿಸಿದರು.

ಯುವತಿ ಪೋಷಕರು ನೀಡಿದ ದೂರಿನ ಅನ್ವಯ ಪಿಎಸ್‌ಐ ಗೋವಿಂದ್ ರಾಜ್ ಕಲಂ ೩೫೪, ೫೦೬ ಐಪಿಸಿ ಮತ್ತು ಎಸ್‌ಸಿಸಿ ೧೨ ಪೋಕ್ಸೊ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿದ್ದು, ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ, ಎಎಸ್‌ಐ ಶಿವಲಿಂಗ, ಸಿಬ್ಬಂದಿ ಮುರಳಿ, ಲೋಕೇಶ್, ಶಶಿಕುಮಾರ್ ಸ್ಥಳಕ್ಕೆ ತೆರಳಿ ಪರಿಶೀಲಿಸಿರುತ್ತಾರೆ. ಆರೋಪಿ ಸಲ್ಮಾನ್ ಖಾನ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.