ಮಡಿಕೇರಿ, ಮಾ.೧೮: ಕಾರ್ನರ್ ಫ್ರೆಂಡ್ಸ್ ಸಂಘದ ವತಿಯಿಂದ ತಾ.೧೯ ರಂದು (ಇಂದು) ೮ನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಕಡಗದಾಳು ಗ್ರಾಮದ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಸಂಘದ ಸ್ಥಾಪಕಾಧ್ಯಕ್ಷ ಜಲೀಲ್ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂದ್ಯಾವಳಿಯಲ್ಲಿ ಮೊದಲ ೧೨ ತಂಡಗಳಿಗೆ ಮಾತ್ರ ಆಡಲು ಅವಕಾಶವನ್ನು ನೀಡಲಾಗಿದ್ದು, ಪ್ರತಿ ತಂಡದಲ್ಲಿ ಮೂವರು ಅತಿಥಿ ಆಟಗಾರರಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಉಳಿದ ಆಟಗಾರರು ತಾವು ಕೊಡಗು ಜಿಲ್ಲೆಯವರು ಎನ್ನುವುದಕ್ಕೆ ಸೂಕ್ತ ದಾಖಲೆಯನ್ನು ಒದಗಿಸಬೇಕೆಂದು ಸ್ಪಷ್ಟಪಡಿಸಿದರು.
ಹೆಚ್ಚಿನ ಮಾಹಿತಿಗೆ ೯೪೮೦೪೯೯೮೦೨, ೯೪೮೦೦೮೪೩೩೦ ದೂರವಾಣಿಯನ್ನು ಸಂಪರ್ಕಿಸುವAತೆ ತಿಳಿಸಿದರು.
ಪಂದ್ಯಾವಳಿ ವಿಜೇತ ತಂಡಕ್ಕೆ ೨೫ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ೧೪ ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿ, ತೃತೀಯ ಸ್ಥಾನ ಪಡೆದ ತಂಡಕ್ಕೆ ೬ಸಾವಿರ ರೂ.ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಹೊನಲು ಬೆಳಕಿನ ಪಂದ್ಯಾವಳಿ ಮಾ.೧೯ ರಂದು (ಇಂದು) ರಾತ್ರಿ ೭ ಗಂಟೆಗೆ ಪ್ರದರ್ಶನ ಪಂದ್ಯದೊAದಿಗೆ ಆರಂಭವಾಗಲಿದೆ. ಪ್ರದರ್ಶನ ಪಂದ್ಯದಲ್ಲಿ ಕರ್ನಾಟಕ ಬುಲ್ಸ್ ಮತ್ತು ಕೇರಳ ಕ್ರಾಕರ್ಸ್ ತಂಡಗಳು ಪರಸ್ಪರ ಸೆಣಸಲಿವೆಯೆಂದು ಮಾಹಿತಿ ನೀಡಿದರು. ಪಂದ್ಯಾವಳಿ ಸಂದರ್ಭ ಶಾಲಾ ಮಕ್ಕಳಿಗೆ ಆಟೋಟ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಇದೇ ಸಂದರ್ಭ ಸಾಧಕ ವಿದ್ಯಾರ್ಥಿ ಸಿದ್ದಾಪುರದ ದೀಕ್ಷಿತ್ ಮತ್ತು ಕಡಗದಾಳು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ನೀಲಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದೆಂದರು.
ಗೋಷ್ಠಿಯಲ್ಲಿ ಕಾರ್ನರ್ ಫ್ರೆಂಡ್ಸ್ ಗೌರವಾಧ್ಯಕ್ಷ ದಿನು ಸೋಮಣ್ಣ, ಖಜಾಂಚಿ ಪ್ರಸಾದ್ ಉಪಸ್ಥಿತರಿದ್ದರು.