ಸಿದ್ದಾಪುರ, ಮಾ. ೧೮: ಸಿದ್ದಾಪುರ ಗ್ರಾಮ ಪಂಚಾಯಿತಿ ಮುಂಭಾಗದ ಪಶುವೈದ್ಯ ಆಸ್ಪತ್ರೆಯ ಸಮೀಪವಿರುವ ಸಾರ್ವಜನಿಕ ಬಾವಿಯನ್ನು ಮುಚ್ಚಲು ಪಂಚಾಯಿತಿ ತಯಾರಿ ನಡೆಸಿದೆ. ಪಶುವೈದ್ಯ ಆಸ್ಪತ್ರೆಗೆ ದಾರಿ ಇದ್ದರೂ ಕೂಡ ಇನ್ನೊಂದು ದಾರಿಯ ನೆಪವೊಡ್ಡಿ ಖಾಸಗಿ ಮನೆಗೆ ರಸ್ತೆ ನಿರ್ಮಿಸಲು ಮುಂದಾಗಿರುವ ಗ್ರಾಮ ಪಂಚಾಯಿತಿ ಸರ್ಕಾರಿ ಹಣದಲ್ಲಿ ಸಾರ್ವಜನಿಕ ಬಾವಿ ಮುಚ್ಚಲು ಸಿದ್ಧತೆ ನಡೆಸಿದ್ದು, ಬಾವಿಯ ಕಟ್ಟೆಗಳನ್ನು ಒಡೆದುಹಾಕಿ ರಸ್ತೆ ಕಾಮಗಾರಿ ಜೊತೆಗೆ ಬಾವಿಯ ಮೇಲೆ ಸ್ಲಾö್ಯಬ್ ಹಾಕಲು ಕಂಬಿಗಳನ್ನು ಕಟ್ಟಿ ಕಾಂಕ್ರಿಟ್ ಮಾಡಲು ಮುಂದಾಗಿದೆ.

ಒAದು ಕಾಲದಲ್ಲಿ ಸಿದ್ದಾಪುರಕ್ಕೆ ನೀರನ್ನು ನೀಡುತ್ತಿದ್ದು ನಂತರದ ದಿನಗಳಲ್ಲಿ ಗ್ರಾಮ ಪಂಚಾಯಿತಿ ಯವರ ನಿರ್ಲಕ್ಷö್ಯಕ್ಕೀಡಾದ ಸಾರ್ವಜನಿಕ ಬಾವಿ ಮುಚ್ಚಿ ರಸ್ತೆ ನಿರ್ಮಿಸಲು ಹೊರಟ ಗ್ರಾಮ ಪಂಚಾಯಿತಿಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಸಾರ್ವಜನಿಕ ಬಾವಿಯನ್ನು ಪುನಶ್ಚೇತನಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ನೀಡುವ ಬದಲು ಬಾವಿಯನ್ನೇ ಮುಚ್ಚಲು ಹೊರಟಿರುವ ಗ್ರಾಮಾಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಾವಿ ಅನುಪಯುಕ್ತ ಎಂದು ಸಂಬAಧಿಸಿದ ಅಧಿಕಾರಿಗಳಿಂದ ಅಧಿಕೃತ ಪತ್ರ ಪಡೆಯದೆ ಬಾವಿಯನ್ನು ಮುಚ್ಚಲು ನಿರ್ಧರಿಸಿರುವ ಗ್ರಾಮಾಡಳಿತದ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ನಿರ್ಧರಿಸಿದ್ದಾರೆ.

ಒಂದು ಕಡೆ ಮನೆಗಳಲ್ಲಿ ಇಂಗುಗುAಡಿ ನಿರ್ಮಿಸದಿದ್ದರೆ ಸರ್ಕಾರದ ಸೌಲಭ್ಯ ನೀಡುವುದಿಲ್ಲ ಎಂದು ಫರ್ಮಾನು ಹೊರಡಿಸುವ ಗ್ರಾಮಾಡಳಿತ ಬಾವಿಯನ್ನೇ ಮುಚ್ಚಲು ಹೊರಟಿರುವ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಯಾವುದೇ ಕಾರಣಕ್ಕೂ ಮುಂದಿನ ಪೀಳಿಗೆಗೆ ಆಶ್ರಯವಾಗುವ ಜಲಮೂಲಗಳನ್ನು ನಾಶ ಪಡಿಸದೆ ಸಂರಕ್ಷಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.