ಮಡಿಕೇರಿ, ಮಾ. ೧೮: ಹಾಕತ್ತೂರು ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮ ವಿಕಾಸ ಯೋಜನೆಯ ಒಂದು ಕೋಟಿ ಮೊತ್ತದ ವಿವಿಧ ಕಾಮಗಾರಿಗಳನ್ನು ಶಾಸಕ ಕೆ.ಜಿ. ಬೋಪಯ್ಯ ಅವರು ಲೋಕಾರ್ಪಣೆ ಮಾಡಿದರು. ಸಮುದಾಯ ಭವನ ರೂ. ೧೨ ಲಕ್ಷ, ಆಟದ ಮೈದಾನ ರೂ. ೧೦ ಲಕ್ಷ, ಕಸವಿಲೇವಾರಿ ಘಟಕ ರೂ. ೧೦ ಲಕ್ಷ, ರಸ್ತೆ ಕಾಮಗಾರಿ ರೂ. ೫ ಲಕ್ಷ ಹಾಗೂ ಇನ್ನಿತರ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿದ ಶಾಸಕರು ಸರಕಾರದ ಸವಲತ್ತುಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳುವಂತೆ ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷೆ ಎಂ.ಎನ್. ಸವಿತಾ ವಹಿಸಿಕೊಂಡಿದ್ದರು. ಉಪಾಧ್ಯಕ್ಷ ಹೆಚ್.ಟಿ. ಕಿರಣ್, ಸದಸ್ಯರುಗಳಾದ ಪಿ.ಜಿ. ಲೋಕೇಶ್, ವಿಜಯಲಕ್ಷಿö್ಮÃ, ಬಿ.ಕೆ. ಯತೀಶ್ ಅವರು ಹಾಜರಿದ್ದರು.

ಈ ಸಂದರ್ಭ ಸ್ವಾಮಿ ವಿವೇಕಾನಂದರ ಸದ್ಭಾವಣಾ ಪ್ರಶಸ್ತಿ ವಿಜೇತ ಪಿ.ಪಿ. ಸುಕುಮಾರ್ ಅವರನ್ನು ಹಾಕತ್ತೂರು ಗ್ರಾಮ ಪಂಚಾಯಿತಿ ಶಾಸಕ ಕೆ.ಜಿ. ಬೋಪಯ್ಯ ಅವರು ಸನ್ಮಾನಿಸಿದರು. ಮಹಾಶಕ್ತಿ ಕೇಂದ್ರದ ಕೆ.ಎ. ಮೋಹನ್, ಕಗ್ಗೋಡ್ಲು ಬೂತ್ ಸಮಿತಿ ಅಧ್ಯಕ್ಷ ಸಜನ್ ಹಾಗೂ ಗ್ರಾಮಸ್ಥರು, ಕಾರ್ಯಕರ್ತರು ಹಾಜರಿದ್ದರು. ಕಾಮಗಾರಿಗಳ ವಿವರವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಬಿ. ಚಂಗಪ್ಪ ಅವರು ಓದಿದರು. ಪಿ.ಪಿ. ಸುಕುಮಾರ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.