ಸುಂಟಿಕೊಪ್ಪ, ಮಾ.೧೮: ಸರಕಾರದ ರೈತರ ಕೃಷಿ ಚಟುವಟಿಕೆಗೆ ಉಚಿತ ೧೦ ಎಚ್ಪಿ ವಿದ್ಯುತ್ ನೀಡಲಾಗುತ್ತಿದ್ದು ಸರಕಾರವು ಏಕಾಏಕಿ ವಿದ್ಯುತ್ ಬಿಲ್ ಪಾವತಿಸುವಂತೆ ಸೂಚಿಸಿ ಬೆಳೆಗಾರರ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದನ್ನು ಖಂಡಿಸಿ ಶುಕ್ರವಾರ ಸಂಜೆ ಸುಂಟಿಕೊಪ್ಪ ಸೆಸ್ಕ್ ಕಚೆೆÃರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ನಾಕೂರು ಶಿರಂಗಾಲ, ನಾಕೂರು, ಕಾನ್ಬೈಲ್ ಹೆರೂರು, ಮಳ್ಳೂರು, ೭ನೇ ಹೊಸಕೋಟೆ, ಕಲ್ಲೂರು, ಅಂದಗೋವೆ, ತೊಂಡೂರು, ಕೊಡಗರಹಳ್ಳಿ, ಉಪ್ಪುತೋಡು, ಕಂಬಿಬಾಣೆ ಸೇರಿದಂತೆ ಇತರೆ ಭಾಗದ ರೈತರು ಹಾಗೂ ಕಾಫಿ ಬೆಳೆಗಾರರ ತೋಟಗಳಿಗೆ ನೀಡಲಾದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿರುವುದನ್ನು ಖಂಡಿಸಿ ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಕೃಷಿಕರು ಏಕಾಏಕಿ ಸುಂಟಿಕೊಪ್ಪ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ಧಿಕ್ಕಾರ ಕೂಗಿದರು. ಕೂಡಲೇÉ ಕಡಿತಗೊಳಿಸಲಾಗಿರುವ ವಿದ್ಯುತ್ ಮರು ಸಂಪರ್ಕಗೊಳಿಸಬೇಕೆAದು ಆಗ್ರಹಿಸಿ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಹಾಗೂ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳು ಬೆಳೆಗಾರರ ದೂರವಾಣಿ ಸಂಪರ್ಕಕ್ಕೆ ಸಿಗದೆ ಕಡೆಗಣಿಸುತ್ತಿರುವುದನ್ನು ಖಂಡಿಸಿ ಅಧಿಕಾರಿಯ ವಿರುದ್ಧ ಪ್ರತಿಭಟಿಸಿ ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದು ಕುಳಿತರು.
ಕೃಷಿಕರ ಮನೆಗೆ ಸಂಪರ್ಕ ಕಲ್ಪಿಸುವ ಟಿಸಿಗಳಿಂದಲೇ ವಿದ್ಯುತ್ ಕಡಿತಗೊಳಿಸಿರುವುದರಿಂದ ಮನೆಗಳಿಗೆ ಕುಡಿಯಲು ನೀರಿಗೆ ಹಾಹಕಾರ ಸೃಷ್ಟಿಯಾಗಿದೆ. ಕೂಡಲೇ ಸಂಬAಧಿಸಿದ ಅಧಿಕಾರಿಗಳು ವಿದ್ಯುತ್ ಮರು ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿದರು.
ಸುಂಟಿಕೊಪ್ಪ ಹೋಬಳಿ ಸೆಸ್ಕ್ ಶಾಖೆಯ ವ್ಯಾಪ್ತಿಯಲ್ಲಿ ಒಟ್ಟು ೪.೫೪ ಕೋಟಿ ರೂ ವಿದ್ಯುತ್ ಬಿಲ್ ಉಳಿಕೆಯಾಗಿದ್ದು ಮೇಲಾಧಿಕಾರಿಗಳ ನಿರ್ದೇಶನದ ಮೇರೆ ಈ ಭಾಗದಲ್ಲಿ ಕಾಫಿ ಬೆಳೆಗಾರರು ಹಾಗೂ ಕೃಷಿಕರು ವಿದ್ಯುತ್ ಬಳಕೆ ಮಾಡಿಕೊಂಡಿದ್ದು, ಕೆಲವು ಮಂದಿ ಸರಿಸುಮಾರು ೧೦ ಲಕ್ಷಕ್ಕೂ ಮಿಕ್ಕಿ ವಿದ್ಯುತ್ ಬಿಲ್ಗಳನ್ನು ಪಾವತಿಸದೆ ಉಳಿಕೆ ಮಾಡಿಕೊಂಡಿದ್ದರಿAದ ಅಂತಹ ಬೆಳೆಗಾರರ ತೋಟಗಳಿಗೆ ಮೇಲಾಧಿಕಾರಿಗಳ ಸೂಚನೆ ಮೇರೆಗೆ ಸೆಸ್ಕ್ ಅಧಿಕಾರಿ ಸಿಬ್ಬಂದಿಗಳು ತೆರಳಿ ವಿದ್ಯುತ್ ಕಡಿತಗೊಳಿಸಲಾಗಿದೆ ಎಂದು ಸುಂಟಿಕೊಪ್ಪ ಸೆಸ್ಕ್ ಕಿರಿಯ ಅಭಿಯಂತರರಾದ ಜೈದೀಪ್ ಅಧಿಕಾರಿಗಳು ತಿಳಿಸಿದರು.
ಮೈಸೂರು ವಿಭಾಗದ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರು ಪ್ರತಿಭಟನಾಕಾರರೊಂದಿಗೆ ಸಮಲೋಚಿಸಿ ತಾತ್ಕಲಿಕ ಮರು ಸಂಪರ್ಕ ನೀಡುವ ಭರವಸೆ ನೀಡಿದ ಮೇರೆ ಪ್ರತಿಭಟನೆಯನ್ನು ಹಿಂಪಡೆದುಕೊAಡರು. ಪ್ರತಿಭಟನೆಯಲ್ಲಿ ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಮಾಜಿ ಅಧ್ಯಕ್ಷ ಎನ್.ಸಿ.ಪೊನ್ನಪ್ಪ ನೇತೃತ್ವದಲ್ಲಿ ದಾಸಂಡ ರಮೇಶ್ ,ಎಂ.ಎನ್. ಕೊಮಾರಪ್ಪ, ಡಾ.ಶಶಿಕಾಂತರೈ, ಬೆನ್ಗಣಪತಿ, ಬಿಜು, ಕರುಣಾಕರ, ಅರಣ್ಚಂಗಪ್ಪ, ಮಂದೋಡಿ ಜಗನ್ನಾಥ್, ಕೆ.ಪಿ.ವಸಂತ್, ಪಟ್ಟೆಮನೆ. ಉದಯಕುಮಾರ್, ನಂಜೇಗೌಡ, ಹೇಮಚಂದ್ರ, ಹರಿಚರಣ್, ದಾಸಂಡ ದಿನೇಶ್, ಕೆ.ಡಿ.ಸುರೇಶ್, ಅರ್ಪಿತ್, ಪ್ರಶಾಂತ್, ಕೆ.ಡಿ.ಕಾರ್ಯಪ್ಪ, ಮಂಜುನಾಥ್ ರೈ, ಪುರೋಷತ್ತಮ ರೈ, ಚಂದ್ರಹಾಸ ರೈ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.