ಮಡಿಕೇರಿ, ಮಾ. ೧೯ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅಕಾಡೆಮಿ ಪ್ರಕಟಿಸಿದ ಅರೆಭಾಷೆ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವು ತಾ. ೨೦ ರಂದು (ಇಂದು) ಬೆಳಿಗ್ಗೆ ೧೦.೩೦ ಗಂಟೆಗೆ ಚೆಟ್ಟಳ್ಳಿಯ ಮೋದಿ ಭವನದಲ್ಲಿ ನಡೆಯಲಿದೆ.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷÀ ಲಕ್ಷಿö್ಮÃನಾರಾಯಣ ಕಜೆಗದ್ದೆ, ಮಂಗಳೂರು ವಿಶ್ವವಿದ್ಯಾನಿಲಯದ ಕುಲ ಸಚಿವ ಡಾ.ಪಿ.ಎಲ್. ಧರ್ಮ, ಹಿರಿಯ ವಿದ್ವಾಂಸ ಡಾ. ಪ್ರಭಾಕರ ಶಿಶಿಲ, ಲೇಖಕರಾದ ಬಾರಿಯಂಡ ಜೋಯಪ್ಪ, ಲೋಕನಾಥ ಅಮ್ಚೂರು, ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಚೆಟ್ಟಳ್ಳಿ ಚೇರಳ ಗೌಡ ಸಂಘದ ಅಧ್ಯಕ್ಷ ಅಯ್ಯಂಡ್ರ ರಾಘವಯ್ಯ, ಚೆಟ್ಟಳ್ಳಿ ಕೂಡ್ಲೂರು ಗೌಡ ಸಂಘದ ಅಧ್ಯಕ್ಷ ಅಕ್ಕಾರಿ ದಯಾನಂದ, ಪಿಎಸಿಎಸ್ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಇತರರು ಪಾಲ್ಗೊಳ್ಳಲಿದ್ದಾರೆ.
ಬಿಡುಗಡೆಯಾಗುವ ಪುಸ್ತಕಗಳು: ಗಂಗಾವತರಣ ಭೀಷ್ಮೋದಯ (ಪ್ರೊ.ಕೆ. ಕುಶಾಲಪ್ಪಗೌಡ), ಯಾಕೀ ಕತೆ ಹಿಂಗಾತ್ (ಕುತ್ಯಾಳ ನಾಗಪ್ಪಗೌಡ (ಕಿರಣ), ಮುತ್ತುಮಣಿ (ಕಣಜಾಲ್ ಪೂವಯ್ಯ), ಬಲೀಂದ್ರನ ಸಂದಿ(ಕುAಞೆÃಟಿ ಶಿವರಾಮಗೌಡ)ü, ಚೆಂಚಿ (ಬಾರಿಯಂಡ ಜೋಯಪ್ಪ), ಅರೆಭಾಷೆ ಗಾದೆಗ(ತೆಕ್ಕಡೆ ಕುಮಾರಸ್ವಾಮಿ), ಅಟ್ಟಿ (ಕೊಟ್ಟಕೇರಿಯನ ಲೀಲಾ ದಯಾನಂದ).