ಮಡಿಕೇರಿ, ಮಾ. ೧೭: ಬೆಂಗಳೂರಿನಲ್ಲಿ ನಡೆದ ರಸ್ತೆ ಅವಘಡದಲ್ಲಿ ಗಾಯಗೊಂಡು, ನಿನ್ನೆ ಮೃತಪಟ್ಟ ಮಡಿಕೇರಿಯ ಯುವಕ ಸ್ವರೂಪ್ ಅಯ್ಯಪ್ಪ ತಮ್ಮ ಸಾವಿನಲ್ಲೂ ಹಲವು ಮಂದಿಗೆ ನೆರವಾಗಿದ್ದಾರೆ. ಅವರ ಹಲವು ಅಂಗಾAಗಗಳನ್ನು ಪೋಷಕರು ದಾನ ಮಾಡುವ ನಿರ್ಧಾರದೊಂದಿಗೆ ಮಾನವೀಯತೆ ತೋರಿದ್ದಾರೆ.

ಕಣ್ಣು, ಹೃದಯ, ಹೃದಯ ಕವಾಟ, ಮೂತ್ರಕೋಶ, ಲಿವರ್, ಪ್ಯಾಂಕ್ರಿಯಾಸ್‌ನAತಹ ಅಂಗಾAಗಗಳನ್ನು ನೀಡಲಾಗಿದೆ. ಸ್ಟೇಟ್ ಆರ್ಗನ್ಸ್ ಡೋರ‍್ಸ್ ಕಮಿಟಿಯ ನಿಯಮಾನುಸಾರವಾಗಿ ಈ ಅಂಗಾAಗಳನ್ನು ನೀಡಲಾಗಿದ್ದು. ಇದನ್ನು ಆದ್ಯತೆ ಮೇರೆಗೆ ಅಗತ್ಯ ಇರುವವರಿಗೆ ನೀಡಲಾಗುವುದು. ಇದರಿಂದ ಸುಮಾರು ೯ ಮಂದಿಗೆ ಅನುಕೂಲವಾಗಲಿದೆ ಎಂದು ತಿಳಿದು ಬಂದಿದೆ.

ಪೋಷಕರಾದ ನಗರದ ಉದ್ಯಮಿ ಕಣ್ಣಚಂಡ ಗಿರಿ ಅಯ್ಯಪ್ಪ ಹಾಗೂ ಪುಷ್ಪ ದಂಪತಿ ಈ ನಿರ್ಧಾರದ ಮೂಲಕ ಹಲವು ಮಂದಿಯ ಬದುಕಿಗೆ ದಾರಿ ದೀಪವಾಗಿದ್ದಾರೆ. ಮೃತ ಸ್ವರೂಪ್ ಅವರ ಅಂತಿಮ ದರ್ಶನ ತಾ. ೧೮ ರಂದು (ಇಂದು) ಬಿಳಿಗೇರಿಯ ಮನೆಯಲ್ಲಿ ನಡೆಯಲಿದ್ದು, ಬಳಿಕ ೧೨ ಗಂಟೆಗೆ ಮಡಿಕೇರಿ ಕೊಡವ ಸಮಾಜದ ರುದ್ರಭೂಮಿಯಲ್ಲಿ ನಡೆಯಲಿದೆ.